ಲಖನೌ(ನ.18): ಕಳೆದ 10 ವರ್ಷಗಳಿಂದ ಅಪ್ರಾಪ್ತ ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಷ್ಟೇ ಅಲ್ಲದೆ ಆ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಕಿರಾತಕ ಜೂನಿಯರ್‌ ಎಂಜಿನಿಯರ್‌ ಒಬ್ಬನನ್ನು ಮಂಗಳವಾರ ಸಿಬಿಐ ಬಂಧಿಸಿದೆ.

ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ಜೂನಿಯರ್‌ ಇಂಜಿನಿಯರ್‌ ಆಗಿರುವ ರಾಮ್‌ ಭಾವನ್‌ ಎಂಬುವೇ ಈ ಕೃತ್ಯವೆಸಗಿದ ಆರೋಪಿ. ಚಿತ್ರಕೂಟ, ಬಾಂದಾ ಹಾಗೂ ಹಮೀರ್‌ಪುರ ಜಿಲ್ಲೆಯ 5ರಿಂದ 16 ವರ್ಷದೊಳಗಿನ 50 ಮಕ್ಕಳು ಈ ಜಾಲದ ಸಂತ್ರಸ್ತರಾಗಿದ್ದಾರೆ ಎಂದು ಸಿಬಿಐ ಹೇಳಿದೆ.

ವಿದೇಶದಿಂದ ಡ್ರಗ್ಸ್‌ ತಂದು ಬೆಂಗಳೂರಲ್ಲಿ ಮಾರಾಟ: ನೈಜೀರಿಯನ್ನರ ಬಂಧನ

ಚಿತ್ರಕೂಟ ಮೂಲದ ಆರೋಪಿ ರಾಮ್‌ ಭಾವನ್‌ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಹಣ ಮತ್ತು ಮೊಬೈಲ್‌ ಸೇರಿದಂತೆ ಇನ್ನಿತರ ವಿದ್ಯುನ್ಮಾನ ಸಲಕರಣೆಗಳನ್ನು ನೀಡುವ ಮೂಲಕ ಬಡ ಮಕ್ಕಳನ್ನು ಈ ದಂಧೆಗೆ ಸೆಳೆಯುತ್ತಿದ್ದ. ಈ ವೇಳೆ ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದ. ಜೊತೆಗೆ, ಈ ವಿಡಿಯೋಗಳನ್ನು ಮೊಬೈಲ್‌, ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ ಸೇರಿದಂತೆ ಇನ್ನಿತರ ಸಲಕರಣೆಗಳಲ್ಲಿ ರೆಕಾರ್ಡ್‌ ಮಾಡಿಟ್ಟುಕೊಂಡು, ಅವುಗಳನ್ನು ಡಾರ್ಕ್ನೆಟ್‌ ಮೂಲಕ ಮಾರಾಟ ಮಾಡುತ್ತಿದ್ದ ಎಂದಿದೆ ಸಿಬಿಐ.

ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ: ಪಿಎಸ್‌ಐ ಸಸ್ಪೆಂಡ್‌

ಹೀಗಾಗಿ, ಅವನ ನಿವಾಸದ ಮಂಗಳವಾರ ದಾಳಿ ಮಾಡಿದ ಸಿಬಿಐ 8 ಲಕ್ಷ ರು. ನಗದು, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ವೆಬ್‌ ಕ್ಯಾಮೆರಾ, ಪೆನ್‌ಡ್ರೈವ್‌ಗಳು, ಮೆಮೊರಿ ಕಾರ್ಡ್‌ ಹಾಗೂ ಲೈಂಗಿಕ ಉತ್ತೇಜನಕ್ಕೆ ಬಳಸುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ವಕ್ತಾರ ಆರ್‌.ಕೆ ಗೌರ್‌ ತಿಳಿಸಿದ್ದಾರೆ.