* ಅನ್ ಲಾಕ್ ಆಗ್ತಿದ್ದಂತೆ ಸರಗಳ್ಳರ ಹಾವಳಿ*  ಒಂದೇ ದಿನ ನಗರದ ಎರಡು ಕಡೆ ಸರಗಳ್ಳತನ.* ಜಯನಗರ ಮತ್ತು ಕೊಡಿಗೆಹಳ್ಳಿಯಲ್ಲಿ ಸರ ಎಗರಿಸಿದ ಖದೀಮರು* ಕೊಡಿಗೆಹಳ್ಳಿಯಲ್ಲಿ ವೃದ್ದೆಯ ಸರ ಕಸಿದು ಪರಾರಿಯಾದ ಕಳ್ಳರು

ಬೆಂಗಳೂರು(ಜೂ. 21) ಅನ್ ಲಾಕ್ ಆಗ್ತಿದ್ದಂತೆ ಆಕ್ಟೀವ್ ಆದ ಸರಗಳ್ಳರು ರಾಜಧಾನಿಯಲ್ಲಿ ಕೈಚಳಕ ತೋರಿಸಲು ಆರಂಭಿಸಿದ್ದಾರೆ. ಒಂದೇ ದಿನ ನಗರದ ಎರಡು ಕಡೆ ಸರಗಳ್ಳತನವಾಗಿದೆ. ಜಯನಗರ ಮತ್ತು ಕೊಡಿಗೆಹಳ್ಳಿಯಲ್ಲಿ ಸರ ಎಗರಿಸಿದ ಖದೀಮರು ಪರಾರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಿಗೆಹಳ್ಳಿಯಲ್ಲಿ ವೃದ್ದೆಯ ಸರ ಅಪಹರಣ ಮಾಡಿದ್ದಾರೆ. ಬೆಳಗ್ಗೆ 8.30ರ ಸುಮಾರಿಗೆ ಲಕ್ಷ್ಮಿ ಎಂಬುವರು ಓಡಾಡುತ್ತಿದ್ದಾಗ ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳ್ಳತನ ಕಾಡ್ತಿದ್ದ ಇರಾನಿ ಗ್ಯಾಂಗ್ ಸಿಕ್ಕಿಬಿತ್ತು

ಜಯನಗರ ಸಾಕಮ್ಮ ಗಾರ್ಡನ್ ಬಳಿಯಿಂದ ಮತ್ತೊಂದು ಪ್ರಕರಣ ವರದಿಯಾಗಿದೆ ರಾಜೇಶ್ವರಿ ಎಂಬುವರ 72 ಗ್ರಾಂ ಮಾಂಗಲ್ಯ ಸರ ಕದ್ದೊಯ್ದಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರ ಕೃತ್ಯ ಇದಾಗಿದ್ದು ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ.