ಅಂಕೋಲ, (ಜ.11):  ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಕಾರು ಅಂಕೋಲಾ ಬಳಿ ಪಲ್ಟಿಯಾಗಿದ್ದು, ಅವರ ಪತ್ನಿ ವಿಜಯಾ ಹಾಗೂ ಪಿಎ ಮೃತಪಟ್ಟಿದ್ದಾರೆ. 

ಇಂದು (ಸೋಮವಾರ) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿ ಹೊಸಕೊಂಬಿ ಬಳಿ ಈ ದುರಂತ ಸಂಭವಿದೆ. ಗೋವಾದವರಾಗಿರುವ ಶ್ರೀಪಾದ ನಾಯಕ್ ಅವರು ಪತ್ನಿಯೊಂದಿಗೆ ಗೋಕರ್ಣಕ್ಕೆ ತೆರಳುತ್ತಿದ್ದರು. ಆದ್ರೆ,  ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. 

ಹೆಣ್ಣು ಮಗು ಸ್ವಾಗತಿಸಿದ ವಿರುಷ್ಕಾ, ಕೇಂದ್ರಕ್ಕೆ ಕೃಷಿ ಕಾಯ್ದೆ ಸಂಕಷ್ಟ; ಜ.11ರ ಟಾಪ್ 10 ಸುದ್ದಿ!

ಗಂಭೀರ ಗಾಯಗೊಂಡಿದ್ದ ಪತ್ನಿ ಹಾಗೂ ಪಿಎ ದೀಪಕ್ ಮೃತಪಟ್ಟಿದ್ದಾರೆ. ಇನ್ನು ಸಚಿವ  ಶ್ರೀಪಾದ ನಾಯಕ ಸಹ ಗಂಭೀರ ಗಾಯಗೊಂಡಿದ್ದು, ಅವರನ್ನು ಅಂಕೋಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಯಲ್ಲಾಪುರದ ಚಂದಗುಳಿ ಗಂಟೆ ಗಣಪತಿ ದೇವಸ್ಥಾನಕ್ಕೆ  ಇಂದು (ಸೋಮವಾರ) ಕುಟುಂಬ ಸಮೇತ ಆಗಮಿಸಿದ್ದ ಶ್ರೀಪಾದ ನಾಯಕ ಅವರು ಗಣಹವನ ನೆರವೇರಿಸಿದ್ದರು. 

ನಂತರ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಸಾಯಂಕಾಲ ಯಲ್ಲಾಪುರದಿಂದ ಹೊಸಕಂಬಿ ಮಾರ್ಗವಾಗಿ ಗೋಕರ್ಣಕ್ಕೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಈ ಬಗ್ಗೆ  ಹೆಚ್ಚಿನ ವಿವರ ತಿಳಿದುಬರಬೇಕಿದೆ.