ಹೆಂಡ್ತಿಗೆ ಕರೆ ಮಾಡ್ತೀನಿ ಅಂತ ಮೊಬೈಲ್ ಪಡೆದು ಕೇಂದ್ರ ಸಚಿವ ಗಡ್ಕರಿಗೆ ಜೀವ ಬೆದರಿಕೆ ಹಾಕಿದ
ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಸಾರ್ವಜನಿಕ ಸಂಪರ್ಕ ಕಚೇರಿಗೆ ಜಯೇಶ್ ಕಾಂತ ನಿನ್ನೆ ಮೂರು ಬಾರಿ ಕರೆ ಮಾಡಿದ್ದನಂತೆ. ಬೆಳಗಾವಿ ಮೂಲದ ಕೈದಿಯೋರ್ವನ ಬಳಿ ಫೋನ್ ಪಡೆದು ಕರೆ ಮಾಡಿದ್ದ ಜಯೇಶ್ ಕಾಂತ.
ಬೆಳಗಾವಿ(ಜ.15): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಜಯೇಶ್ ಕಾಂತ ಎಂಬಾತನೇ ಬೆದರಿಕೆ ಕರೆ ಮಾಡಿದ್ದಾನೆ ಅಂತ ತಿಳಿದು ಬಂದಿದೆ. ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಸಾರ್ವಜನಿಕ ಸಂಪರ್ಕ ಕಚೇರಿಗೆ ಜಯೇಶ್ ಕಾಂತ ನಿನ್ನೆ ಮೂರು ಬಾರಿ ಕರೆ ಮಾಡಿದ್ದನಂತೆ. ಬೆಳಗಾವಿ ಮೂಲದ ಕೈದಿಯೋರ್ವನ ಬಳಿ ಫೋನ್ ಪಡೆದು ಜಯೇಶ್ ಕರೆ ಮಾಡಿದ್ದಾನೆ ಅಂತ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಪತ್ನಿಗೆ ಕರೆ ಮಾಡ್ತೀನಿ ಎಂದು ಮತ್ತೋರ್ವ ಕೈದಿ ಬಳಿ ಮೊಬೈಲ್ ಪಡೆದು ಜಯೇಶ್ ಕರೆ ಮಾಡಿದ್ದಾನೆ. ಬೆದರಿಕೆ ಕರೆ ಬಗ್ಗೆ ನಾಗ್ಪುರ ಪೊಲೀಸರ ಗಮನಕ್ಕೆ ತಂದಿದ್ದರು ಕಚೇರಿ ಸಿಬ್ಬಂದಿ. ನಾಗ್ಪುರ ಪೊಲೀಸರ ತನಿಖೆ ವೇಳೆ ಹಿಂಡಲಗಾ ಜೈಲಿನಿಂದ ಕರೆ ಬಂದಿರೋದು ಪತ್ತೆಯಾಗಿದೆ. ನಿನ್ನೆ ರಾತ್ರಿ ಬೆಳಗಾವಿಯ ಹಿಂಡಲಗಾ ಜೈಲಿಗೆ ನಾಗ್ಪುರ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ, ಭದ್ರತೆ ಹೆಚ್ಚಳ
ಮಂಗಳೂರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿ ಜಯೇಶ್ ಜೈಲು ಸೇರಿದ್ದನು. 2018ರ ಏಪ್ರಿಲ್ 21ರಂದು ಅಲೋಕ್ ಕುಮಾರ್ ಅವರಿಗೂ ಜಯೇಶ್ ಬೆದರಿಕೆ ಕರೆ ಮಾಡಿದ್ದನಂತೆ. ಅಲೋಕ್ ಕುಮಾರ್ ಅಂದು ಉತ್ತರ ವಲಯ ಐಜಿಪಿಯಾಗಿದ್ದರು. ತಾನು ನಕ್ಸಲೈಟ್ ಎಂದು ಮೆಸೇಜ್ ಮಾಡಿ ಬಳಿಕ ಕರೆ ಮಾಡಿ ಬೆದರಿಕೆ ನೀಡಿದ್ದ ಜಯೇಶ್, ಆಗ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2018ರ ಕೇಸ್ ಫೈಲ್‌ನ ಮಾಹಿತಿಯನ್ನ ನಾಗ್ಪುರ ಪೊಲೀಸರು ಪಡೆದಿದ್ದಾರೆ. ಇಂದೂ ಸಹ ಹಿಂಡಲಗಾ ಜೈಲಿಗೆ ನಾಗ್ಪುರ ಪೊಲೀಸರು ಭೇಟಿ ನೀಡುವ ಸಾಧ್ಯತೆ ಅಂತ ತಿಳಿದು ಬಂದಿದೆ.