ರೈಲಿನಲ್ಲಿ ಎರಡು ತುಂಡುಗಳಲ್ಲಿ ಮಹಿಳೆ ಶವ ಪತ್ತೆ; ಕೈ, ಕಾಲುಗಳು ಮಿಸ್!

Woman Murder: ಬೋಗಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸೊಂಟದ ಭಾಗದಲ್ಲಿ ದೇಹವನ್ನು ತುಂಡರಿಸಿ ಎರಡ ಭಾಗಗಳನ್ನಾಗಿ ಮಾಡಲಾಗಿದೆ. ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಬ್ಯಾಗ್‌ಗಳಲ್ಲಿ ತುಂಬಿಸಲಾಗಿತ್ತು.

Unidentified woman s dead body found in indore Railway station mrq

ಭೋಪಾಲ್: ಮಹಿಳೆಯ ಶವವನ್ನು (Woman Dead Body) ಎರಡು ಭಾಗ ತುಂಡರಿಸಿ ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿ ರೈಲಿನಲ್ಲಿ ಬಿಟ್ಟು ಹೋಗಲಾಗಿದೆ. ಮಧ್ಯಪ್ರದೇಶದ ಇಂದೋರ್ ನಗರದ ರೈಲಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಬೇರೆಡೆ ಮಹಿಳೆಯನ್ನು ಕೊಲೆ ಮಾಡಿ, ನಂತರ ದೇಹವನ್ನು ಎರಡು ಭಾಗಗಳಾಗಿ ತುಂಡರಿಸಿ, ಎರಡು ಟ್ರೋಲಿ ಬ್ಯಾಗ್‌ಗಳಲ್ಲಿ ತುಂಬಿಸಿ ರೈಲಿನಲ್ಲಿ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರುನ ಅನುಮಾನ ವ್ಯಕ್ತಪಡಿಸಿದರು. ಶವವನ್ನು ರೈಲ್ವೇ ಪೊಲೀಸರು (Railway Police) ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಮಹಿಳೆಯ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ (Police Investigation) ಆರಂಭಿಸಿದ್ದಾರೆ. 

ಇಂದೋರ್ ನಿಲ್ದಾಣಕ್ಕೆ ಬಂದ ರೈಲು ಪ್ರಯಾಣಿಕರು ಇಳಿದ್ಮೇಲೆ ಬೋಗಿಗಳನ್ನು ಸ್ವಚ್ಛತಾ ಕಾರ್ಯಕ್ಕಾಗಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಸ್ವಚ್ಛತಾ ಕಾರ್ಮಿಕರು ಅನುಮಾನಾಸ್ಪದ ಬ್ಯಾಗ್ ಕಂಡ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ರೈಲ್ವೇ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಬ್ಯಾಗ್ ತರೆದು ನೋಡಿದಾಗ ಮಹಿಳೆಯ ಶವ ಸಿಕ್ಕಿದೆ. 20 ರಿಂದ 25 ವಯಸ್ಸಿನ ಮಹಿಳೆ ಶವ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ ಸರ್ಕಾರಿ ರೈಲ್ವೇ ಪೊಲೀಸ್ (GRP- Government Railway Police) ನಿಲ್ದಾಣದ ಉಸ್ತುವಾರಿ ಸಂಜಯ್ ಶುಕ್ಲಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಿಗರೇಟು ಸೇದುವ ವಿಚಾರಕ್ಕೆ ಜಗಳ; ಸ್ನೇಹಿತನನ್ನೇ ನಡುರಸ್ತೆಗೆ ಕೆಡವಿ ಥಳಿಸಿದ ದುರುಳರು!

ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಬ್ಯಾಗ್‌ಗೆ ಹಾಕಿದ್ರು!

ಶನಿವಾರ ರಾತ್ರಿ ರೈಲು ( Dr Ambedkar Nagar-Indore passenger train) ನಿಲ್ದಾಣಕ್ಕೆ ಬಂದಿತ್ತು. ಇದು ಡಾ.ಅಂಬೇಡ್ಕರ ನಗರ-ಇಂದೋರ್ ನಡುವಿನ ಪ್ಯಾಸೆಂಜರ್ ರೈಲಾಗಿದೆ. ಪ್ರಯಾಣಿಕರೆಲ್ಲಾ ಇಳಿದ್ಮೇಲೆ ಬೋಗಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸೊಂಟದ ಭಾಗದಲ್ಲಿ ದೇಹವನ್ನು ತುಂಡರಿಸಿ ಎರಡ ಭಾಗಗಳನ್ನಾಗಿ ಮಾಡಲಾಗಿದೆ. ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಬ್ಯಾಗ್‌ಗಳಲ್ಲಿ ತುಂಬಿಸಲಾಗಿತ್ತು. ಮಹಿಳೆಯ ಕೈ ಮತ್ತು ಕಾಲುಗಳು ಪತ್ತೆಯಾಗಿಲ್ಲ. ಎರಡು ದಿನಗಳ ಹಿಂದೆ ಮಹಿಳೆಯ ಕೊಲೆ ನಡೆದಿರೋ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರಿಂದ ತನಿಖೆ ಆರಂಭ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಮಹಿಳೆಯ ಗುರತು ಪತ್ತೆಗೆ ಪೊಲೀಸರು ಮುಂದಾಗಿದ್ದು, ಡಾ.ಬಿಆರ್ ಅಂಬೇಡ್ಕರ ನಗರ-ಇಂದೋರ್ ಪ್ಯಾಸೆಂಜರ್ ಚಲಿಸುವ ಮಾರ್ಗಗಳ ರೈಲು ನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ. 

Bengaluru Crime News: ಮೊದಲ ಹೆಂಡ್ತಿಯೊಂದಿಗೆ ಸೇರಿ ಎರಡನೇ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ

Latest Videos
Follow Us:
Download App:
  • android
  • ios