ಫೇಸ್ ಬುಕ್ ಗೆಳೆತನಲ್ಲಿ ವಿಳಾಸ ವಿನಿಮಯ, ಲಂಡನ್‌ ನಿಂದ ಚಿನ್ನ ಬಂದಿದೆಯೆಂದು ಬೆದರಿಸಿ 12 ಲಕ್ಷ ವಂಚನೆ!

ಕಾರ್ಕಳ   ನಿವಾಸಿಯೊಬ್ಬರಿಗೆ ಲಕ್ಷಾಂತರ ರು. ವಂಚಿಸಿದ ಘಟನೆ ನಡೆದಿದೆ. ಅವರಿಗೆ ಫೇಸ್‌ಬುಕ್ ಮೂಲಕ ಮಾರ್ಕ್ ಸೀಮಾ ಎಂಬವರು ಪರಿಚಯವಾಗಿದ್ದರು. ಗೆಳೆತನದಲ್ಲಿ ಅವರು ತಮ್ಮ ವಿಳಾಸವನ್ನು ನೀಡಿದ ಪರಿಣಾಮ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

Udupi Karkala woman loses many lakhs to Facebook friend scam gow

ಉಡುಪಿ (ಆ.14): ಕಾರ್ಕಳ ತಾಲೂಕಿನ ಮಿಯಾರಿನ ಕುಂಟಿಬೈಲಿನ ನಿವಾಸಿಯೊಬ್ಬರಿಗೆ ಲಕ್ಷಾಂತರ ರು. ವಂಚಿಸಿದ ಘಟನೆ ನಡೆದಿದೆ. ಅವರಿಗೆ ಫೇಸ್‌ಬುಕ್ ಮೂಲಕ ಮಾರ್ಕ್ ಸೀಮಾ ಎಂಬವರು ಪರಿಚಯವಾಗಿದ್ದರು. ಗೆಳೆತನದಲ್ಲಿ ಅವರು ತಮ್ಮ ವಿಳಾಸವನ್ನು ನೀಡಿದ್ದರು.

ಇದನ್ನು ಬಳಸಿದ ವಂಚಕರು ಅವರಿಗೆ ಲಂಡನ್‌ನಿಂದ ಚಿನ್ನದ ವಸ್ತು ಮತ್ತು ಪೌಂಡು ಹಣ ಪಾರ್ಸೆಲ್ ಬಂದಿದೆ ಎಂದು ಹೇಳಿ ಅದರ ಕಸ್ಟಮ್ ಚಾರ್ಜ್ ಹಾಗೂ ಐ.ಟಿ ರೈಡ್‌ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ.

ಆಶ್ರಯ ಮನೆಯಲ್ಲಿ ಅಂಗನವಾಡಿ, ನಿತ್ಯ ಭಯದ ವಾತಾವರಣದಲ್ಲಿ ಕಾಲ ಕಳೆಯುವ ಮಕ್ಕಳು!

ಕಾರ್ಕಳದ ಮಹಿಳೆಯು ಹಂತ ಹಂತವಾಗಿ ಗೂಗಲ್‌ ಪೇ ಮೂಲಕ ಒಟ್ಟು 11,94,490 ರು. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಹೂಡಿಕೆ ಹೆಸರಲ್ಲಿ ₹3 ಕೋಟಿ ವಂಚನೆ
ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್‌ನ ಆರ್.ಆರ್. ಈಜಿ ಟ್ರೇಡಿಂಗ್ ಕಂಪನಿ ಹಾಗೂ ಅಕ್ಯೂಮನ್ ಕ್ಯಾಪಿಟಲ್ ಟ್ರೇಡಿಂಗ್ ಲಿಮಿಟೆಡ್ ಕಂಪನಿಯ ಪಾಲದಾರರಿಬ್ಬರು ಹಣ ಹೂಡಿಕೆ ಮಾಡಿದರೆ ಶೇ. 4ರಿಂದ 5ರಷ್ಟು ಲಾಭಾಂಶ ನೀಡುವುದಾಗಿ ಹೇಳಿ, ಹಲವರಿಂದ ₹ 3.52 ಕೋಟಿ ಹೂಡಿಕೆ ಮಾಡಿಕೊಂಡು ನಂಬಿಕೆ ದ್ರೋಹವೆಸಗಿರುವ ಬಗ್ಗೆ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನಂತ್ ಅಂಬಾನಿ ರಾಧಿಕಾ ಹನಿಮೂನ್‌, ಬೆಡ್‌ ರೂಂನ ಒಂದು ದಿನದ ಬಾಡಿಗೆ 31 ಲಕ್ಷ!

ಕಂಪನಿಯ ಸಂತೋಷ ಮತ್ತು ಆನಂದ ಎಂಬುವರು ತಮ್ಮ ಪಾಲುದಾರಿಕೆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಲಾಭಾಂಶ ಪಡೆಯಬಹುದೆಂದು ನಂಬಿಸಿ, 2022ರ ಏಪ್ರಿಲ್‌ನಿಂದ 2024ರ ಜನವರಿ ನಡುವೆ ₹2 ಲಕ್ಷ ಹೂಡಿಕೆ ಮಾಡಿಕೊಂಡು, ಕೆಲವು ತಿಂಗಳ ವರೆಗೆ ಲಾಭಾಂಶ ಕೊಟ್ಟು ನಂಬಿಕೆ ಬರುವಂತೆ ಮಾಡಿದ್ದಾರೆ. ನಂತರ ಹೂಡಿಕೆ ಮಾಡಿಕೊಂಡ ಹಣ ಮತ್ತು ಲಾಭಾಂಶ ಕೊಡದೆ ವಂಚಿಸಿದ್ದಾರೆ. ಅಲ್ಲದೆ ಇನ್ನೂ ಹಲವರಿಂದ ₹3.50 ಕೋಟಿ ಹೂಡಿಕೆ ಮಾಡಿಸಿಕೊಂಡು ಮೋಸವೆಸಗಿದ್ದಾರೆ ಎಂದು ಆರೋಪಿಸಿ ಸಹದೇವಪ್ಪ ಎಂಬುವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಯುಪಿಐ ಬಳಸಿ ವಂಚನೆ: ನಾಲ್ವರ ಬಂಧನ:
ಕುಣಿಗಲ್: ಹೊಟೆಲ್‌ಗಳಲ್ಲಿ ಭರ್ಜರಿಯಾಗಿ ಬಾಡೂಟ ಮಾಡಿ ನಕಲಿ ಯುಪಿಐ ಮೂಲಕ ಬಿಲ್‌ ಪಾವತಿಸಿ ಹೊಟೆಲ್‌ ಮಾಲೀಕರಿಗೆ ವಂಚಿಸುತ್ತಿದ್ದ ತಂಡವೊಂದನ್ನು ಹೊಟೆಲ್‌ ಮಾಲೀಕನೇ ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಎಡೆಯೂರು ಬಳಿಯ ವಾಸು ನಮ್ಮ ಮನೆ ಬಾಡೂಟದ ಹೊಟೆಲ್ ನಲ್ಲಿ ನಡೆದಿದೆ. ಬಂಧಿತರು ತುರುವೇಕರೆ ಮೂಲದವರಾಗಿದ್ದು ಮೂವರು ಯುವಕರು ಹಾಗೂ ಓರ್ವ ಯುವತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ವಾಸು ನಮ್ಮ ಮನೆ ಬಾಡೂಟದ ಹೋಟೆಲ್ ಗೆ ಊಟಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಓರ್ವ ಯುವತಿ 700 ರೂಪಾಯಿ ಬಿಲ್ ಆಗುವರೆಗೂ ಮಾಂಸಹಾರ ಸೇವನೆ ಮಾಡಿದ್ದು, ಬಳಿಕ ನಕಲಿ ಪೋನ್ ಪೇ ಆ್ಯಪ್ ಮೂಲಕ ಹಣ ಪಾವತಿ ಮಾಡಿರುವುದಾಗಿ ತಿಳಿಸಿದ್ದರು. ಆದರೆ ಮಾಲೀಕ ಸಂದೀಪಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಹಣ ಫೋನ್ ಪೇಯಲ್ಲಿ ಪಾವತಿಯಾಗದೆ ಇರುವುದು ಪತ್ತೆಯಾಗಿದೆ. ಕೂಡಲೇ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ವಿಚಾರಣೆ ವೇಳೆ ಮೋಸ ಮಾಡಿರುವುದು ಖಚಿತವಾಗಿದೆ. ಈ ರೀತಿ ಈ ಹಿಂದೆಯೂ ವಂಚನೆ ಮಾಡಿರುವ ಕುರಿತು ಮಾಹಿತಿ ಸಿಕ್ಕಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios