ಗದಗ: ಮೊಹರಂ ಮೆರವಣಿಗೆಯಲ್ಲಿ ಕಿರಿಕ್: ಇಬ್ಬರಿಗೆ ಚಾಕು ಇರಿತ

Gadag News: ಮೊಹರಂ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿದ್ದು ಇಬ್ಬರಿಗೆ ಚಾಕು ಇರಿತವಾಗಿದೆ

Two youth suffer injury after stabbed during muharram procession in Gadag mnj

ಗದಗ (ಆ. 09):  ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮೊಹರಂ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿದ್ದು, ಇಬ್ಬರಿಗೆ ಚಾಕು ಇರಿತವಾಗಿದೆ.  ತೌಸಿಫ್ ಹೊಸಮನಿ(23), ಮುಸ್ತಾಕ್ ಹೊಸಮನಿ (24) ಹಲ್ಲೆಗೊಳಗಾದವರು. ಮೊಹರಂ ಮೆರವಣಿಗೆಯಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆ ಬಿಡಸಲು ಬಂದಿದ್ದ ತೌಸಿಫ್ ಮುಸ್ತಾಫ್‌ನಿಗೆ ಸೋಮೇಶ್ ಗುಡಿ ಎಂಬಾತ ಚಾಕುವಿನಿಂದ ಹಲ್ಲೆ ಮಾಡಿದ್ದಾನೆಎನ್ನಲಾಗಿದೆ.  ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಆಳವಾದ ಗಾಯಗಳಾಗಿರುವುದರಿಂದ ತೌಸಿಫ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು  ಚಿಕಿತ್ಸೆ ನೀಡಲಾಗುತ್ತಿದೆ. 

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಶಿವಪ್ರಕಾಶ್ ದೇವರಾಜು, ಗಂಭೀರವಾಗಿ ಗಾಯಗೊಂಡಿರುವ ತೌಸಿಫ್ ಅವರಿಗೆ ಚಿಕಿತ್ಸೆ ಕೊಡಿಸುವುದು ಆದ್ಯತೆ. ಈಗಾಗಲೇ ಘಟನೆ ಸಂಬಂಧ ಯಲ್ಲಪ್ಪ ಹಾಗೂ ಸೋಮು ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ. 

ಅಮಾಯಕರ ಮೇಲೆ ಹಲ್ಲೆ: ಮಲ್ಲಸಮುದ್ರ ಗ್ರಾಮದ ತೌಸಿಫ್, ಮುಸ್ತಾಕ್ ಸಂಭಾವಿತರಾಗಿದ್ದರು. ಮುಸ್ತಾಕ್ ಕಾಲೇಜು ವಿದ್ಯಾರ್ಥಿಯಾಗಿದ್ದರೆ ತೌಸಿಫ್ ಬಿಲಿಂಗ್ ಕೆಲಸ ಮಾಡುತ್ತಿದ್ದರು ಇಬ್ಭರು ತಂಟೆ ತಕರಾರು ಅಂತಾ ಹೋದವರಲ್ಲ. ಹೀಗಿದ್ದರೂ ಇಬ್ಬರನ್ನ ಟಾರ್ಗೆಟ್ ಮಾಡಿ ಹಲ್ಲೆಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಗ್ರಾಮದಲ್ಲಿ ಬೀಡು ಬಿಟ್ಟ ಪೊಲೀಸರು: ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ:  ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಎಸ್ ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪ್ರಕರಣ ಮಾಹಿತಿ ಪಡೆದಿದ್ದಾರೆ. ನಂತರ ಮಲ್ಲಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಡಿಆರ್ ವಾಹನ ನಿಯೋಜನೆ ಮಾಡಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದ್ದು. 

ಗಂಗಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ: ಇನ್ನು ಕ್ಷುಲ್ಲಕ ಕಾರಣಕ್ಕೆ ಗಂಗಾವತಿಯಲ್ಲಿ ಇಬ್ಬರು ಯುವಕರು ಪರಸ್ಪರ ಚಾಕು ಇರಿದುಕೊಂಡಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಯುವಕರು ಚಾಕು ಇರಿದುಕೊಂಡಿದ್ದಾರೆ.  ಕೊಪ್ಪಳ ಜಿಲ್ಲೆಯ ಗಂಗಾವತಿಯ  ಅಮರಭಗತ್ ಸಿಂಗ್ ನಗರದಲ್ಲಿ ಘಟನೆ ನಡೆದಿದೆ.  ಘಟನೆಯಲ್ಲಿ ಸಚಿನ್ (20), ಒಂಟಿ ರಾಜು( 28) ಹಲ್ಲೆಗೊಳಗಾದವರು.  

ನಿನ್ನೆ ನಡೆದ ಚಾಕು ಇರಿತ ಘಟನೆಯಿಂದಾಗ ಬೆಚ್ಚಿಬಿದ್ದಿದ್ದ ಗಂಗಾವತಿಯಲ್ಲಿ ಇಂದು ಮತ್ತೆ  ಯುವಕರ ನಡುವೆ ಗಲಾಟೆ ನಡೆದಿದೆ. ಇಬ್ಬರಿಗೂ ಗಂಗಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಸ್ಥಳಕ್ಕೆ ಗಂಗಾವತಿ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 

Latest Videos
Follow Us:
Download App:
  • android
  • ios