Asianet Suvarna News Asianet Suvarna News

ಬೆಂಗಳೂರು: ಕೆಲಸಕ್ಕೆ ಸೇರಿದ ಮಾರನೇ ದಿನವೇ ಕಳ್ಳತನ, ಮುಂಬೈ ಮೂಲದ ಖತರ್ನಾಕ್‌ ಕಳ್ಳಿಯರ ಬಂಧನ

ದೊಡ್ಡಕನ್ನಹಳ್ಳಿಯ SJR ಪ್ಲಾಜಾ ಸಿಟಿಯ ಅಪಾರ್ಟ್‌ಮೆಂಟ್‌ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಶೇಖರ್ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಚಿನ್ನಾಭರಣ ದೋಚಿದ್ದಾರೆ. ಕೆಲಸಕ್ಕೆ ಸೇರಿದ ಮರುದಿನವೇ ಮನೆಯಲ್ಲಿದ್ದ ಚಿನ್ನವನ್ನು ಎಗರಿಸಿದ್ದಾರೆ ಈ ಖರ್ತನಾಕ್‌ ಕಳ್ಳಿಯರು. 

Two Woman Arrested For Gold Theft Cases in Bengaluru grg
Author
First Published Jan 9, 2024, 11:20 AM IST

ಬೆಂಗಳೂರು(ಜ.09):  ನಗರದಲ್ಲಿ ಮನೆ ಕೆಲಸದವರ ಸೋಗಿನಲ್ಲಿ ಚಿನ್ನಾಭರಣ ಕಳವು ಮಾಡಿದ ಚಾಲಾಕಿ ಮಹಿಳೆಯರನ್ನ ಪೊಲೀಸರು ಬಂಧಿಸಿದ್ದಾರೆ. ವನಿತಾ (38) ಹಾಗೂ ಯಶೋಧ(40) ಬಂಧಿತ ಮಹಿಳೆಯರಾಗಿದ್ದಾರೆ. ಇವರು ಮುಂಬೈಯಿಂದ ಬೆಂಗಳೂರಿಗೆ ಬಂದು ಚಿನ್ನಾಭರಣ ಕಳವು ಮಾಡುತ್ತಿದ್ದರು. 

ದೊಡ್ಡಕನ್ನಹಳ್ಳಿಯ SJR ಪ್ಲಾಜಾ ಸಿಟಿಯ ಅಪಾರ್ಟ್‌ಮೆಂಟ್‌ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಶೇಖರ್ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಚಿನ್ನಾಭರಣ ದೋಚಿದ್ದಾರೆ. ಕೆಲಸಕ್ಕೆ ಸೇರಿದ ಮರುದಿನವೇ ಮನೆಯಲ್ಲಿದ್ದ ಚಿನ್ನವನ್ನು ಎಗರಿಸಿದ್ದಾರೆ ಈ ಖರ್ತನಾಕ್‌ ಕಳ್ಳಿಯರು. 

ಕಲಬುರಗಿ: 255 ಗ್ರಾಂ ಚಿನ್ನಾಭರಣ ದೋಚಿದ್ದ ಕಳ್ಳನ ಸೆರೆ

ಈ ಇಬ್ಬರು ಮಹಿಳೆಯರು ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ ಬಳಿ ಸುತ್ತಾಡಿ ಸೆಕ್ಯೂರಿಟಿ ಗಾರ್ಡ್ ಮುಖಾಂತರ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಬಳಿಕ ಮನೆ ಕೆಲಸಕ್ಕೆ ಸೇರಿಕೊಂಡು ಮನೆಯಲ್ಲಿದ್ದ ಚಿನ್ನಾಭರಣಗಳನ್ನ ಕಳವು ಮಾಡುತ್ತಿದ್ದರು
ಬೆಳ್ಳಂದೂರು ಪೊಲೀಸ್ ಠಾಣೆ ಪೊಲೀಸರು ಇಬ್ಬರು ಮಹಿಳೆಯರನ್ನ ಬಂಧಿಸಿದ್ದಾರೆ. ಬಂಧಿತ ಮಹಿಳೆಯರಿಂದ 127 ಗ್ರಾಂ ತೂಕದ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ. 

Latest Videos
Follow Us:
Download App:
  • android
  • ios