ಚಿತ್ರದುರ್ಗ ಮುರುಘಾ ಮಠ ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ, ಪ್ರಕರಣ ದಾಖಲು
ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಚಿತ್ರದುರ್ಗ ಮುರುಘಾ ಮಠ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಇದೀಗ ಮಠದ ಹಾಸ್ಟೆಲ್‌ನಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಚಿತ್ರದುರ್ಗ, (ಸೆಪ್ಟೆಂಬರ್.15) : ಮಠದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುರುಘಾ ಶ್ರೀಗಳನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣ ಬಾರೀ ಸದ್ದು ಮಾಡುತ್ತಿದೆ.
ಇದರ ಬೆನ್ನಲ್ಲೇ ಇದೀಗ ಚಿತ್ರದುರ್ಗ ಮುರುಘಾಮಠದ ವಿದ್ಯಾರ್ಥಿ ನಿಲಯದಿಂದ ಇಬ್ಬರು ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ ಎಂದು ವರದಿ ಬೆಳಕಿಗೆ ಬಂದಿದೆ.
11 ವರ್ಷದ ಕಲಬುರಗಿ ಜಿಲ್ಲೆ ಮೂಲದ ಬಾಲಕ ಹಾಗೂ 13 ವರ್ಷದ ಕೊಪ್ಪಳ ಜಿಲ್ಲೆ ಮೂಲದ ಬಾಲಕ ಮುರುಘಾ ಮಠದ SJM ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದು, ಮಠದ ಜಯದೇವ ಹಾಸ್ಟೆಲ್ ನಲ್ಲಿದ್ದರು. ಆದ್ರೆ, 8/9/2022 ರಂದು ಹಾಸ್ಟೆಲ್ ನಿಂದ ಶಾಲೆಗೆ ತೆರಳಿದ್ದ ಮಕ್ಕಳು ವಾಪಸ್ ಹಾಸ್ಟೆಲ್‌ಗೆ ಬಂದಿಲ್ಲ. ಸಂಜೆ ಹಾಸ್ಟೆಲ್ ಗೆ ಬಾರದ ಹಿನ್ನೆಲೆ ಮಕ್ಕಳ ಬಗ್ಗೆ ಸಿಬ್ಬಂದಿ ವಿಚಾರಿಸಿದ್ದಾರೆ. ಆ ದಿನ ಶಾಲೆಗೂ ಹೋಗಿಲ್ಲ ಎನ್ನುವುದು ತಿಳಿದುಬಂದಿದೆ.
ಮುರುಘಾ ಶರಣ ಕೇಸ್‌ನಲ್ಲಿ ಹಲವು ಅನುಮಾನಗಳು: ಕಾಟನ್‌ಪೇಟೆ ಠಾಣೆಯಲ್ಲಿ ನಡೆದಿದ್ದೇನು?
ಮಕ್ಕಳು ಮನೆಗೂ ಬಂದಿಲ್ಲ ಎಂದು ಪೋಷಕರು ಹೇಳಿದ್ದಾರೆ. ಇದರಿಂದ ಪೋಷಕರ ಸೂಚನೆ ಮೇರೆಗೆ ಹಾಸ್ಟೆಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. 12/09/2022 ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಮಕ್ಕಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ಹಾಸ್ಟೆಲ್‌ನಿಂದ ಓಡಿ ಹೋಗಿ ಶ್ರೀಗಳ ವಿರುದ್ಧ ಕೇಸ್ ಕೊಟ್ಟ ವಿದ್ಯಾರ್ಥಿನಿಯರು
ಯೆಸ್..ಹೀಗೆ...ಮಠದ ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು. ಬಳಿಕ ಅವರು ಬೆಂಗಳೂರಿಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿದ್ದರು. ನಂತರ ವಿದ್ಯಾರ್ಥಿನಿಯರು ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಬಗ್ಗೆ ವಿದ್ಯರ್ಥಿನಿಯರ ಪರ ಒಡನಾಡಿ ಸಂಸ್ಥೆ ನಿಂತು ಮೈಸೂರಿನಲ್ಲಿ ಎಫ್‌ಐಆರ್ ದಾಖಲಿಸಿದರು. ತದನಂತ ಮೈಸೂರು ಪೊಲೀಸ್ರು ಪ್ರರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಟ್ರಾನ್ಸ್‌ಫರ್ ಮಾಡಿದ್ರು. ಬಳಿಕ ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ಸ್ಥಳ ಮಹಜರ್ ಮಾಡಲಾಯ್ತು. ಅಂತಿಮವಾಗಿ ಶ್ರಿಗಳನ್ನು ಪೊಲೀಸ್ ಅರೆಸ್ಟ್ ಮಾಡಿದ್ರು.
ಇಷ್ಟೆಲ್ಲಾ ಬೆಳವಣಿಗೆಗಳು ಆದ ಬಳಿಕ ಇದೀಗ ಮತ್ತೆ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.