ಹುಬ್ಬಳ್ಳಿ(ಸೆ.04): ನಗರದ ಶ್ರೀ ಬನಶಂಕರಿ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತಿಮ್ಮಸಾಗರದ ಟಿಸ್ಸ್ ಅಲಿಯಾಸ್ ವಿಶ್ವನಾಥ ಮಲ್ಲಪ್ಪ ಕರಡಿಗುಡ್ಡ ಹಾಗೂ ಮಂಟೂರ ರಸ್ತೆಯ ನರೇಶಕುಮಾರ ರಾಜನ್ನ ನಾಯಕಂಟಿ ಎಂಬುವರನ್ನ ಬಂಧಿಸಿರುವ ಪೊಲೀಸರು ಅವರಿಂದ 1 ಕೆ.ಜಿ 795 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.ಗಾಂಜಾ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಟಿವಿಎಸ್ ಜೂಪಿಟರ್ ಹಾಗೂ ಎರಡು ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಧಾರವಾಡ: ಅನೈತಿಕ ಸಂಬಂಧಕ್ಕೆ ಗಂಡನನ್ನೇ ಕೊಂದು ಬಿಟ್ಲಾ ಹೆಂಡ್ತಿ..?

ಠಾಣೆಯ ಇನ್ಸ್‌ಪೆಕ್ಟರ್ ಎನ್.ಸಿ.ಕಾಡದೇವರಮಠ, ಸಿಬ್ಬಂದಿಗಳಾದ ಬಿ.ಕೆ.ಹೂಗಾರ, ಸಿ.ಎಂ.ಕಂಬಾಳಿಮಠ, ರವಿ ಕೋಳಿ, ಎಂ.ಡಿ.ಬಡಿಗೇರ, ವೈ.ಎಫ್.ದಾಸಣ್ಣನವರ, ಪಿ.ಬಿ.ಹಿರಗಣ್ಣನವರ, ಮೋಹನ ಈಳಿಗೇರ, ರಾಕೇಶ ಗೋರ್ಕಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ನಿನ್ನೆಯಷ್ಟೇ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಗಾಂಜಾವನ್ನ ರಿಕವರಿ ಮಾಡಿ ಇಬ್ಬರನ್ನು ಬಂಧಿಸಿದ್ದರು.