Asianet Suvarna News Asianet Suvarna News

ಶಾಲಾ ಬಸ್ ಚಾಲಕನಿಂದಲೇ ಇಬ್ಬರು ನರ್ಸರಿ ಮಕ್ಕಳ ಮೇಲೆ ಅತ್ಯಾಚಾರ

ಶಾಲಾ ಬಸ್ ಚಾಲಕನೇ ಇಬ್ಬರು ನರ್ಸರಿ ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಬಿಹಾರದ ಬೇಗುಸರಾಯ್‌ನ ಬಿರ್ಪುರ ಪ್ರದೇಶದಲ್ಲಿ ನಡೆದಿದೆ. ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿ ಮನೆಗೆ ಬಿಡುವ ವೇಳೆ ಘಟನೆ ನಡೆದಿದೆ.

Two nursery children were raped by the school bus driver In Bihars Begusarai akb
Author
First Published Nov 30, 2023, 12:40 PM IST

ಬಿಹಾರ: ಶಾಲಾ ಬಸ್ ಚಾಲಕನೇ ಇಬ್ಬರು ನರ್ಸರಿ ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಬಿಹಾರದ ಬೇಗುಸರಾಯ್‌ನ ಬಿರ್ಪುರ ಪ್ರದೇಶದಲ್ಲಿ ನಡೆದಿದೆ. ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿ ಮನೆಗೆ ಬಿಡುವ ವೇಳೆ ಘಟನೆ ನಡೆದಿದೆ. ಈ ಬಗ್ಗೆ ಮಕ್ಕಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲೆಗೆ ಹೋದ ಇಬ್ಬರು ಮಕ್ಕಳು ರಕ್ತಸಿಕ್ತ ಬಟ್ಟೆಯೊಂದಿಗೆ ಮನೆಗೆ ಬಂದಿದ್ದು, ಈ ವೇಳೆ ಏನಾಯಿತು ಎಂದು ಪೋಷಕರು ವಿಚಾರಿಸಿದಾಗ ಮಕ್ಕಳು ನಡೆದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ.  ಕೂಡಲೇ ಪೋಷಕು ಬಸ್ ಚಾಲಕನನ್ನು ಹಿಡಿದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಈತ ಮಕ್ಕಳನ್ನು ಮನೆಗೆ ಡ್ರಾಫ್ ಮಾಡಿ ಕೂಡಲೇ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅಷ್ಟರಲ್ಲಿ  ಪೋಷಕರು ಆತನನ್ನು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. 

ಹೀಗೆ ಮಕ್ಕಳ ಮೇಲೆ ದುಷ್ಕೃತ್ಯವೆಸಗಿದ ಆರೋಪಿಯನ್ನು ಸಿಕಂದರ್ ರಾಯ್ ಎಂದು ಗುರುತಿಸಲಾಗಿದೆ. ಮಕ್ಕಳನ್ನು ಶಾಲೆಯಿಂದ ವಾಪಸ್ ಕರೆತರುತ್ತಿದ್ದ ಈತ ಅವರನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅಲ್ಲಿ ಈ ಅಮಾನುಷ ಕೃತ್ಯವೆಸಗಿದ್ದಾನೆ. ಅಲ್ಲದೇ ಆರೋಪಿ ಈ ಕೃತ್ಯದ ವೀಡಿಯೋವನ್ನು ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಚಾಲಕ ಸಿಕಂದರ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಘಟನೆ ಬಗ್ಗೆ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆತನ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ. 

ಕೇರಳ: ಥೂ ಇವಳೆಂಥಾ ತಾಯಿ: ಅಮ್ಮನ ಪ್ರೇಮಿಗಳಿಂದ ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ: ಸಹಕರಿಸಿದ ತಾಯಿ

ಘಟನೆ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಜನ ರೊಚ್ಚಿಗೆದ್ದಿದ್ದು, ಆರೋಪಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ಮಕ್ಕಳಿಬ್ಬರು ಸಮೀಪದ ಖಾಸಗಿ ಶಾಲೆಯಲ್ಲಿ ನರ್ಸರಿ ವ್ಯಾಸಂಗ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ತಾನು ಈ ಶಾಲೆಯಲ್ಲಿ  ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ.

ಹೋಂಸ್ಟೇನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನು ಕೋಣೆಯೊಳಗೆ ಎಳೆದೊಯ್ದು ಗ್ಯಾಂಗ್‌ ರೇಪ್‌: ವಿಡಿಯೋ ವೈರಲ್‌

Follow Us:
Download App:
  • android
  • ios