ಎಕ್ಸ್‌ಟಸಿ ಮಾರುತ್ತಿದ್ದ ವಿದೇಶಿಗರ ಬಂಧನ| ಆರೋಪಿಗಳಿಂದ 56 ಎಕ್ಸ್‌ಟಸಿ ಮಾತ್ರೆ ಜಪ್ತಿ| ಇಂದಿರಾನಗರದ ಮೆಟ್ರೋ ಸಮೀಪದಲ್ಲಿ ಗ್ರಾಹಕರಿಗೆ ಮಾದಕ ವಸ್ತು ನೀಡಲು ಬಂದಿದ್ದ ಆರೋಪಿಗಳು| ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿರುವ ಆರೋಪಿಗಳು|
ಬೆಂಗಳೂರು(ಫೆ.24): ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಚುಕ್ವೂ ಇಮೆಕ್(24) ಮತ್ತು ಆ್ಯಮ್ ಸಿಲಮ್ ಚಿರೋಜ್(35) ಬಂಧಿತರು. ಆರೋಪಿಗಳಿಂದ 56 ಎಕ್ಸ್‌ಟಸಿ ಮಾತ್ರೆ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಇಂದಿರಾನಗರದ ಮೆಟ್ರೋ ಸಮೀಪದಲ್ಲಿ ಆರೋಪಿಗಳು ಗ್ರಾಹಕರಿಗೆ ಮಾದಕ ವಸ್ತು ನೀಡಲು ಬಂದಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.
ಡ್ರಗ್ ಸೀಝ್: ಬಿಜೆಪಿ ಮುಖಂಡನಿಗೆ ಸಮನ್ಸ್
ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿರುವ ಆರೋಪಿಗಳು, ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದಾರೆ. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೆಲ ನೈಜೀರಿಯಾ ಪ್ರಜೆಗಳ ಜತೆ ಶಾಮೀಲಾಗಿರುವ ಮಾಹಿತಿ ಸಿಕ್ಕಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 24, 2021, 9:52 AM IST