ಕೊಲ್ಕತ್ತಾ(ಫೆ.23): ಮಾದಕ ವಸ್ತುಗಳ ಸಂಬಂಧ ಸೆಲೆಬ್ರಿಟಿಗಳ, ಪ್ರಮುಖರ ಹೆಸರುಗಳೇ ಕೇಳಿ ಬರುತ್ತಿರುವ ಸಂದರ್ಭ ಇದೀಗ ಡ್ರಗ್ಸ್ ಮಾಫಿಯಾದಲ್ಲಿ ಬಿಜೆಪಿ ಮುಖಂಡನ ಹೆಸರು ಕೇಳಿ ಬಂದಿದೆ.

ನಟಿಯರಾದ ರಿಯಾ ಚಕ್ರವರ್ತಿ, ಸಂಜನಾ ಗರ್ಲಾನಿ, ರಾಗಿಣಿ ದ್ವಿವೇದಿ ಸೇರಿ ಹಲವು ಪ್ರಮುಖರು ಡ್ರಗ್ಸ್ ವಿಚಾರಣೆ ಎದುರಿಸಿದ ನಂತರ ಇದೀಗ ರಾಜಕೀಯದ ಪ್ರಮುಖರ ಹೆಸರು ಡ್ರಗ್ಸ್ ವಿಚಾರವಾಗಿ ಕೇಳಿ ಬರುತ್ತಿದೆ.

ಮನೆ ಬಿಟ್ಟು ಬಂದ 15ರ ಬಾಲೆ ಮೇಲೆ ಮೂವರಿಂದ ಅತ್ಯಾಚಾರ

ಡ್ರಗ್ಸ್ ಸೀಝ್ಗೆ ಸಂಬಂಧಿಸಿ ಕೊಲ್ಕತ್ತಾ ಪೊಲೀಸರು ಬಿಜೆಪಿ ಮುಖಂಡ ರಾಕೇಶ್ ಸಿಂಗ್ಗೆ ತನಿಖೆಗೆ ಹಾಜರಾಗಲು ತಿಳಿಸಿದ್ದಾರೆ.  ಯುವ ಬಿಜೆಪಿ ಕಾರ್ಯಕರ್ತ ಪಮೇಲ ಗೋಸ್ವಾಮಿ ಎಂಬಾಕೆ ಸಿಕ್ಕಿ ಹಾಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ರಾಕೇಶ್ ಸಿಂಗ್ಗೆ ಸಮನ್ಸ್ ಕಳುಹಿಸಲಾಗಿದೆ.

ಪಮೇಲಾ ಗೆಳತಿ ಮತ್ತು ಗಾರ್ಡ್ ಜೊತೆ ಸಿಕ್ಕಿಹಾಕಿಕೊಂಡಿದ್ದಳು. ವಿಚಾರಣೆಯ ಸಂದರ್ಭ ಈಕೆ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಹೆಸರನ್ನು ಹೇಳಿದ್ದಾಳೆ.