ಲಕ್ನೋ, (ಮಾ.17): ಸ್ತ್ರೀಯರ ಒಳ ಉಡುಪು ಕದ್ದು ಲೈಂಗಿಕ ಸುಖ ಅನುಭವಿಸುವ ಆಸಾಮಿಗಳು  ಕೆಲವರು ಇರುತ್ತಾರೆ.

ಹೌದು...ಈ ಸುದ್ದಿ ನೋಡಿದ್ರೆ ನಿಜವೆನ್ನಿಸುತ್ತೆ. ಒಣಗಿಹಾಕಿದ್ದ ಮಹಿಳೆಯ ಒಳ ಉಡುಪುಗಳನ್ನ ಕದಿಯಲು ಹೋಗಿ ಇಬ್ಬರು ಯುವಕರು ಜೈಲು ಪಾಲಾಗಿದ್ದಾರೆ.

ಉತ್ತರ ಪ್ರದೇಶದ ಮೀರತ್​ನಲ್ಲಿ ಇಂತದ್ದೊಂದು ಕಳ್ಳತನ ನಡೆದಿದೆ.   ಸಂಪೂರ್ಣ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಇದರಲ್ಲಿ ಯುವಕರು ಮಹಿಳೆ ಒಣಗಿ ಹಾಕಿದ್ದ ಒಳ ಉಡುಪುಗಳನ್ನ ಕದ್ದು ಬೈಕ್​ನಲ್ಲಿ ಎಸ್ಕೇಪ್​ ಆಗಿದ್ದಾರೆ.

ಇಬ್ಬರು ಆರೋಪಿಗಳನ್ನ ಮೊಹಮ್ಮದ್​ ರೋಮಿನ್​ ಹಾಗೂ ಮೊಹಮ್ಮದ್​ ಅಬ್ದುಲ್​ ಎಂದು ಗುರುತಿಸಲಾಗಿದೆ. 

ಸ್ತ್ರೀಯರ ಒಳ ಉಡುಪು ಕದ್ದವ್ನು ಸಿಸಿಟಿವಿಯಿಂದ ಸಿಕ್ಕಿಬಿದ್ದ : ಬುದ್ದಿ ಹೇಳಿದವನ ಮೇಲೆ ಹಲ್ಲೆ

ಮಾರ್ಚ್​ 14ರಂದು ಮೊಹಮದ್​ ಅಬ್ದುಲ್ ಹಾಗೂ ಮೊಹಮ್ಮದ್​ ರೋಮಿನ್ ಸ್ಕೂಟಿಯಲ್ಲಿ ಬಂದು ಒಂದು ಮನೆಯ ಬಳಿ ಗಾಡಿ ನಿಲ್ಲಿಸುತ್ತಾನೆ. ಅಲ್ಲೇ ಒಣಹಾಕಲಾಗಿದ್ದ ಹೆಣ್ಣು ಮಕ್ಕಳ ಒಳಉಡುಪನ್ನು ಎತ್ತಿಕೊಂಡು ಬಂದು ಅದನ್ನು ಗಾಡಿಯೊಳಗೆ ಇಟ್ಟುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸಕತ್​ ವೈರಲ್​ ಆಗಿದೆ.

ಸಂಜಯ್​ ಚೌಧರಿ ಎಂಬವರು ಈ ವಿಡಿಯೋವನ್ನ ಚಿತ್ರೀಕರಿಸಿದ್ದು ಸದರ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಅಪ್ರಾಪ್ತ ಮಗಳು ಮನೆ ಹೊರಗೆ ಒಣಗಿ ಹಾಕಿದ್ದ ಪ್ಯಾಂಟಿಯನ್ನ ಈ ಇಬ್ಬರು ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.‌

ತನಿಖೆ ವೇಳೆ ಇಬ್ಬರು ಆರೋಪಿಗಳು ತಮಾಷೆಗಾಗಿ ಈ ಕೃತ್ಯ ಎಸಗಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 379 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.