ರಸ್ತೆ ವಿಭಜಕಕ್ಕೆ ಗುದ್ದಿ ಇಬ್ಬರ ಸಾವು: ವಿಮಾನ ಏರಬೇಕಿದ್ದವರು ಚಿತೆ ಏರಿದರು
ಬೆಂಗಳೂರು ನಗರದಿಂದ ಯಲಹಂಕ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಇಬ್ಬರು ಬೈಕ್ ಸವಾರರು ರಸ್ತೆ ವಿಭಜಕಕ್ಕೆ ಗುದ್ದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಬೆಂಗಳೂರು (ಮಾ.30): ಬೆಂಗಳೂರು ನಗರದಿಂದ ಯಲಹಂಕ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಇಬ್ಬರು ಬೈಕ್ ಸವಾರರು ರಸ್ತೆ ವಿಭಜಕಕ್ಕೆ ಗುದ್ದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪಘಾತ ಪ್ರಕರಣಗಳಿಗೇನೂ ಕಡಿಮೆಯಿಲ್ಲ. ಆದರೆ, ಇಂದು ನಡೆದಿರುವ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವುದು ಮನಕಲಕುವ ವಿಚಾರವಾಗಿದೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಬ್ಬರು ಹೊರಟಿದ್ದರು. ಆದರೆ, ವಿಮಾನದಲ್ಲಿ ಹೋಗಲು ತಡವಾಗುತ್ತದೆ ಎಂದು ಬೈಕ್‌ನಲ್ಲಿ ವೇಗವಾಗಿಯೇ ಹೋಗುತ್ತಿದ್ದರು. ಆದರೆ, ಬಳ್ಳಾರಿ ರಸ್ತೆಯ ಯಲಹಂಕದ ಕಾಫಿಡೇ ಬಳಿ ರಸ್ತೆ ವಿಭಜಕಕ್ಕೆ ಗುದ್ದಿದ್ದಾರೆ. ಇನ್ನು ಘಟನೆ ನಡೆದ ಕೂಡಲೇ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಹಿಂದೂ- ಮುಸ್ಲಿಂ ವಿವಾಹ : ಪೋಷಕರ ವಿರೋಧಕ್ಕೆ ಹೆದರಿ ನೇಣಿಗೆ ಶರಣಾದ ಪ್ರೇಮಿಗಳು
ಅತಿವೇಗದಿಂದ ನಿಯಂತ್ರಣಕ್ಕೆ ಸಿಗದೇ ಅಪಘಾತ: ಇನ್ನು ಮೃತ ಬೈಕ್ ಸವಾರರನ್ನು ಗುದದ್ರಾಮ್ ಮತ್ತು ಜುಗ್ ರಾಜ್ ಪ್ರಹಾಪತ್ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ವಿಮಾನ ನಿಲ್ದಾಣದ ರಸ್ತೆಯಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಇರಲಿಲ್ಲ. ಆದ್ದರಿಂದ ಏರ್ಪೊಟ್ ಕಡೆಗೆ ತೆರಳುತಿದ್ದ ಬೈಕ್ ಸವಾರರು ತುಸು ವೇಗವಾಗಿಯೇ ಹೋಗುತ್ತಿದ್ದರು. ಆದರ, ಎದುರಿಗೆ ಮತ್ತೊಂದು ವಾಹನ ನಿಧಾನವಾಗಿ ಹೋಗುವುದನ್ನ ಗಮನಿಸಿ ಅದರಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಬೈಕ್ ನಿಯಂತ್ರಣಕ್ಕೆ ಸಿಗದೇ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಬೈಕ್ ಸವಾರ (ಚಾಲಕ) ಗುದದ್ರಾಮ್ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಹಿಂಬದಿ ಸವಾರ ಜುಗ್ ರಾಜ್‌ಗೂ ಗಂಭೀರ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ಇನ್ನು ಇಬ್ಬರ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮಹಿಳಾ ಕ್ರೀಡಾಪಟುವಿನ ಸ್ನಾನದ ವೀಡಿಯೋ ಸೆರೆ: ಬೆಂಗಳೂರು: ಮಲ್ಲತಹಳ್ಳಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವಾಲಿಬಾಲ್ ಆಟಗಾರ್ತಿಯೊಬ್ಬಳು ತನ್ನ ಸಹ ಅಥ್ಲೀಟ್ ಒಬ್ಬಳ ಖಾಸಗಿ ವಿಡಿಯೋವನ್ನು ಸೆರೆಹಿಡಿದಿದ್ದಾಳೆ. ಈ ಕುರಿತಾಗಿ ಟೇಕ್ವಾಂಡೋ ಪ್ಲೇಯರ್ ಆಗಿರುವ ಇನ್ನೊಬ್ಬ ಮಹಿಳಾ ಅಥ್ಲೀಟ್ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇಬ್ಬರೂ ಆಟಗಾರ್ತಿಯರು ಸಾಯ್‌ನಲ್ಲಿ ತರಬೇತಿಯಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ.
ಮತ್ತೊಬ್ಬ ಮಹಿಳಾ ಆಟಗಾರ್ತಿಯಿಂದ ನೀಚ ಕೃತ್ಯ: ಟೇಕ್ವಾಂಡೋ ಪ್ಲೇಯರ್ ಸ್ನಾನಕ್ಕೆ ಹೋಗಿದ್ದಾಗ ಆಕೆಯ ಖಾಸಗಿ ವಿಡಿಯೋವನ್ನು ವಾಲಿಬಾಲ್ ಆಟಗಾರ್ತಿಯೊಬ್ಬಳು ಕದ್ದು ಸೆರೆಹಿಡಿದಿದ್ದಳು. 'ಮಹಿಳೆ ಸಂತ್ರಸ್ತೆಯ ಆಕ್ಷೇಪಾರ್ಹ ವೀಡಿಯೊವನ್ನು ತೆಗೆದಿದ್ದಾಳೆ ಮತ್ತು ಆಕೆಗೆ ತಿಳಿದಾಗ, ಸಂತ್ರಸ್ತೆ ಆರೋಪಿಯ ಮೊಬೈಲ್ ಫೋನ್ ಅನ್ನು ಒಡೆದುಹಾಕಿದ್ದಾಳೆ. ನಂತರ ಸಂತ್ರಸ್ತೆಯಿಂದಲೂ ದೂರು ನೀಡಲಾಗಿದೆ' ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಬಿ.ನಿಂಬರಗಿ ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 354 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. "ನಾವು ಆರೋಪಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಬೇಕಿದೆ. ವೀಡಿಯೊವನ್ನು ಪರಿಶೀಲಿಸಿದ ಬಳಿಕವೇ ಹೆಚ್ಚಿನ ತನಿಖೆ ಮಾಡಲಿದ್ದೇವೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ರೈಲ್ವೆ ಯಾತ್ರಿಕರಿಂದ ಚಿನ್ನ ಸರ ಕದಿಯುತ್ತಿದ್ದವನ ಬಂಧನ
ಬಾಲಕಿಯರ ಹಾಸ್ಟೆಲ್‌ಗೆ ಪುರುಷ ವಾರ್ಡನ್‌ಗಳು: ಸಾಯ್ ಮೂಲಗಳ ಪ್ರಕಾರ, ಘಟನೆಯ ನಂತರ, ಸಂಸ್ಥೆಯಲ್ಲಿ ಪುರುಷ ವಾರ್ಡನ್‌ಗಳ ಬಗ್ಗೆ ನೈತಿಕತೆ ಮೇಲೆ ಕೆಲವು ಅನುಮಾನ ವ್ಯಕ್ತವಾಗಿದೆ. ಕ್ಯಾಂಪಸ್‌ನಲ್ಲಿ 50 ಕ್ಕೂ ಹೆಚ್ಚು ಬಾಲಕಿಯರ ಡಿಪ್ಲೊಮಾ ವಿದ್ಯಾರ್ಥಿಗಳಿದ್ದರೆ, ಎಲ್ಲಾ ನಾಲ್ವರು ವಾರ್ಡನ್‌ಗಳು ಪುರುಷರಾಗಿದ್ದಾರೆ. ಈ ಬಗ್ಗೆಯೂ ಅನುಮಾನಗಳಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.