Asianet Suvarna News Asianet Suvarna News

ಬೆಂಗಳೂರು: ರೈಲ್ವೆ ಯಾತ್ರಿಕರಿಂದ ಚಿನ್ನ ಸರ ಕದಿಯುತ್ತಿದ್ದವನ ಬಂಧನ

ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ಮೊಬೈಲ್‌ ಕರೆಗಳ ಪರಿಶೀಲನೆ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು. 
 

Two Arrested for Gold Chain Theft Cases in Bengaluru grg
Author
First Published Mar 30, 2023, 1:47 PM IST

ಬೆಂಗಳೂರು(ಮಾ.30):  ರೈಲ್ವೆ ಪ್ರಯಾಣಿಕರಿಂದ ಚಿನ್ನ ಸರ ಕಳವು ಮಾಡುತ್ತಿದ್ದ ಇಬ್ಬರನ್ನು ನಗರದ ದಂಡು ರೈಲ್ವೆ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಮಹಾರಾಷ್ಟ್ರ ಮುಂಬೈ ನಗರದ ಅನ್ವರ್‌ ಹುಸೇನ್‌ ಹಾಗೂ ಈತನಿಂದ ಕಳವು ಮಾಲು ಸ್ವೀಕರಿಸುತ್ತಿದ್ದ ಗುಡ್ಡು ರಾಮದಾನಿ ಸೋನಿ ಬಂಧಿತರಾಗಿದ್ದು, ಆರೋಪಿಗಳಿಂದ 23.40 ಲಕ್ಷ ಮೌಲ್ಯದ 536.5 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ನಗರ ವ್ಯಾಪ್ತಿಯ ರೈಲ್ವೆ ನಿಲ್ದಾಣಗಳಲ್ಲಿ ನಿರಂತರವಾಗಿ ಸರಗಳ್ಳತನ ಕೃತ್ಯಗಳು ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ರೈಲ್ವೆ ಎಸ್ಪಿ ಡಾ.ಎಸ್‌.ಕೆ.ಸೌಮ್ಯಲತಾ ಅವರು, ಸರಗಳ್ಳರ ಪತ್ತೆಗೆ ದಂಡು ರೈಲ್ವೆ ಠಾಣೆ ಇನ್‌ಸ್ಪೆಕ್ಟರ್‌ ಪ್ರಭಾಕರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದರು.

ಅಂತೆಯೇ ವಿಶೇಷ ತಂಡದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ಮೊಬೈಲ್‌ ಕರೆಗಳ ಪರಿಶೀಲನೆ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: 108 ಕೇಸ್‌ಗಳಲ್ಲಿ ಬೇಕಾಗಿದ್ದ ಉದ್ಯಮಿ 6 ವರ್ಷದ ಬಳಿಕ ಸೆರೆ

ಲಾಡ್ಜ್‌ನಲ್ಲಿ ಉಳಿದು ಸರಗಳ್ಳತನ

ಹುಸೇನ್‌ ವೃತ್ತಿಪರ ಸರಗಳ್ಳನಾಗಿದ್ದು, ಎರಡು ವರ್ಷಗಳಿಂದ ನಗರದ ರೈಲ್ವೆ ನಿಲ್ದಾಣಗಳಲ್ಲಿ ನಿರಂತರವಾಗಿ ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದ. ಮುಂಬೈನಿಂದ ನಗರಕ್ಕೆ ಆಗಾಗ ಬಂದು ಮೆಜೆಸ್ಟಿಕ್‌ ಸಮೀಪ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದ. ಬಳಿಕ ರೈಲ್ವೆ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಕೃತ್ಯ ಎಸಗುತ್ತಿದ್ದನು. ಸರ ಕದ್ದ ಬಳಿ ಮುಂಬೈಗೆ ಪರಾರಿಯಾಗುತ್ತಿದ್ದ. ನಂತರ ಅಲ್ಲಿ ತನ್ನ ಸ್ನೇಹಿತ ಗುಡ್ಡು ರಾಮದಾನಿ ಮೂಲಕ ಕಳವು ಮಾಲನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಆರೋಪಿಗಳ ಬಂಧನದಿಂದ 12 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios