ಖತರ್ನಾಕ್ ಎಟಿಎಂ ಕಳ್ಳರು.. ಅಬ್ಬಬ್ಬಾ ಇವರ ವಾಕಿಂಗ್ ಸ್ಟೈಲ್ ನೋಡಿ !

ಎಟಿಎಂ ಹಣ ಎಗರಿಸಿದ್ದ ಕಳ್ಳರು ಸಿಕ್ಕಿಬಿದ್ದರು/ ನಡೆಯುವ ಶೈಲಿ ಆಧರಿಸಿ ಕಳ್ಳರನ್ನು ಬಂಧಿಸಿದ ಪೊಲೀಸರು/ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡ ಆರೋಪಿ

Two held for ATM Robbery Bengaluru

ಬೆಂಗಳೂರು(ಆ. 21) ಸಿಸಿ ಕ್ಯಾಮರಾದಲ್ಲಿ ವಾಕಿಂಗ್ ಸ್ಟೈಲ್ ನೋಡಿ ಎಟಿಎಂ ಹಣ ಎಗರಿಸಿದ್ದ ಖತರ್ನಾಕ್ ಕಳ್ಳರನ್ನು ಪೊಲೀಸರು  ಬಂಧಿಸಿದ್ದಾರೆ.

ಹಲಸೂರು‌ ಪೊಲೀಸರಿಂದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಎಟಿಎಂಗಳಿಗೆ ಹಣ ತುಂಬುವ ಕೆಲಸ‌ ಮಾಡುತ್ತಿದ್ದ ಕಸ್ಟೋಡಿಯನ್ ಸೇರಿದಂತೆ ಇಬ್ಬರ ಬಂಧನವಾಗಿದೆ. ಕಿರಣ್ ಹಾಗೂ ಅಶ್ವತ್ ಬಂಧಿತ ಆರೋಪಿಗಳು.

ಗೌರಿಬಿದನೂರಿನ ಮೂಲದ ಕಿರಣ ಸಿಎಂಎಸ್ ಇನ್ಪೋ ಸಿಸ್ಟಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯಿಂದ ಹಣ ಪಡೆದುಕೊಂಡು ಎಟಿಎಂಗಳಿಗೆ ಹಣ ತುಂಬುವ ಕೆಲಸ‌ ಮಾಡುತ್ತಿದ್ದ.  ಐಟಿಪಿಎಲ್ ರೋಡ್ ಹಾಗೂ ಹಲಸೂರು ಮಾರ್ಗದ ಎಟಿಎಂಗಳಲ್ಲಿ ಹಣ ತುಂಬಿಸುವ ಜವಾಬ್ದಾರಿ ಕಿರಣ್ ಮೇಲೆ ಇತ್ತು.

ಇತ್ತೀಚೆಗೆ ಅವನು ಹೋಗುವ ರೂಟ್ ಗೆ ಬೇರೊಬ್ಬರ ನಿಯೋಜನೆ ಮಾಡಲಾಗಿತ್ತು. ಇದೇ ತಿಂಗಳು ಕಸ್ಟೋಡಿಯನ್ ಆಗಿದ್ದ ಸೂರ್ಯ ಹಲಸೂರಿನ ಎರಡು ಬ್ಯಾಂಕ್ ಎಟಿಎಂಗಳಿಗೆ 12 ಲಕ್ಷ ತುಂಬಿಸಿದ್ದ. ಹಣ ಹಾಕಿದ ಅರ್ಧ ಗಂಟೆಯಲ್ಲೇ ಆರೋಪಿ ಕಿರಣ್ ಎಟಿಎಂಗಳಿಗೆ ಹೋಗಿ 32,28,500 ಲಕ್ಷ ಹಣ ಎಗರಿಸಿದ್ದ!

ಕಂಪನಿಯ ಹಣವನ್ನೇ ಎಗರಿಸಿ ಏನು ಗೊತ್ತಿಲ್ಲದಂತೆ ಇದ್ದ

ಎಟಿಎಂಗಳ ಪಾಸ್ ವರ್ಡ್ ಅರಿತಿದ್ದ ಕಿರಣ್ ಸುಲಭವಾಗಿ ಹಣ ತೆಗೆದುಕೊಂಡು ಪರಾರಿಯಾಗಿದ್ದ ಕೃತ್ಯಕ್ಕೆ ಮತ್ತೊಬ್ಬ ಆರೋಪಿ ಅಶ್ವಥ್ ಸಾಥ್ ನೀಡಿದ್ದ. ಹಣ ಕಳವು ಸಂಬಂಧ ಕಂಪನಿಯು ಹಲಸೂರು ಠಾಣೆಗೆ ದೂರು ನೀಡಿತ್ತು. 

ಸಿಸಿಟಿವಿ ಸೆರೆಯಾದ ದೃಶ್ಯಾವಳಿ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಹಣ ಕದ್ದು ಯಾರಿಗೂ ಅನುಮಾನ ಬಾರದಂತೆ ಹೈಡ್ರಾಮ ನಡೆಸಿದ್ದರು. ಪೊಲೀಸರ ವಿಚಾರಣೆಯಲ್ಲಿ ಕೃತ್ಯದ ಬಗ್ಗೆ ಗೊತ್ತೇ ಇಲ್ಲ ಅಂದಿದ್ದ ಕಿರಣ್ ಮೊದಲು ಹೇಳಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿಯ ನಡೆಯುವ ಶೈಲಿ ಹಾಗೂ ಕಿರಣ್ ನಡೆಯುವ ಸ್ಟೈಲ್ ತಾಳೆ ಹಾಕಿದ ಪೊಲೀಸರಿಗೆ ಅನುಮಾನ ದಟ್ಟವಾಗಿದೆ.

ಸದ್ಯ ಬಂಧಿತನಿಂದ 24 ಲಕ್ಷದ 10 ಸಾವಿರ ರೂ.ಜಪ್ತಿ ಮಾಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

Latest Videos
Follow Us:
Download App:
  • android
  • ios