ಯಾದಗಿರಿ(ನ. 10)  ನಾರಾಯಣಪುರ ಎಡದಂಡೆ ಕಾಲುವೆಗೆ ಕಾರು ಬಿದ್ದ ಇಬ್ಬರು ನಾಪತ್ತೆಯಾಗಿದ್ದರೆ ಓರ್ವ ಸಾವನ್ನಪ್ಪಿದ್ದಾನೆ. ಸಾವನ್ನೇ ಗೆದ್ದ ಮಹಿಳೆ ಮೂರು  ವರ್ಷದ ಮಗುವಿನೊಂದಿಗೆ ಈಜಿ ದಡ ಸೇರಿದ್ದಾರೆ.

ಕಾರು ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ.  ಪವನ್ ಬಿರಾದಾರ್  ಸಾವನ್ನಪ್ಪಿದರೆ ಅವರ ಪತ್ನಿ ಈಜಿ ದಡ ಸೇರಿದ್ದಾರೆ.  ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಳಿಯ ಕಾಲುವೆಯಲ್ಲಿ ದುರಂತ ಸಂಭವಿಸಿದೆ.

ಫ್ರಿ ವೆಡ್ಡಿಂಗ್ ಫೋಟೋ ಶೂಟ್ ವೇಳೆ ತೆಪ್ಪ ಮುಳುಗಿ ವಧು ವರ ಇಬ್ಬರ ಸಾವು

ಕಾರಿನೊಂದಿಗೆ ಮುಳುಗಿ ಪವನ್ ಬಿರಾದಾರ್ (31) ಮೃತಪಟ್ಟಿದ್ದಾರೆ. ಪವನ್ ತಂದೆ ಶರಣಗೌಡ ಬಿರಾದಾರ್, ತಾಯಿ ಜಾನಕಿ ಬಿರಾದಾರ್ ನಾಪತ್ತೆಯಾಗಿದ್ದಾರೆ.  ನಾಪತ್ತೆಯಾದ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ.

ಜಮೀನು ನೋಡಿ ನಂತರ ವಾಪಾಸ್ ತೆರಳುವಾಗ ದುರ್ಘಟನೆ ಸಂಭವಿಸಿದೆ. ಕಾಲುವೆ ದಡದ ಮೇಲೆ ಕಾರ್ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಆಯ ತಪ್ಪಿ ಕಾರು ಬಿದ್ದಿದೆ.  ನೀರಿನ ರಭಸ ಸಹ ಜೋರಾಗಿಯೇ ಇತ್ತು.  ಹುಣಸಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ. 

ಕಾಲುವೆ ರಸ್ತೆಯಲ್ಲಿ ರಿವರ್ಸ್ ತೆಗೆದುಕೊಳ್ಳಲು ಹೋಗಿದ್ದಾಗ, ನಿಯಂತ್ರಣ ತಪ್ಪಿದ ಕಾರು ಕಾಲುವೆಯಲ್ಲಿ ಬಿದ್ದ ಪರಿಣಾಮ, ಓರ್ವ ಸಾವನ್ನಪ್ಪಿ ಇಬ್ಬರು ನಾಪತ್ತೆಯಾಗಿರುವ ದುರ್ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಳಿಯ
ನಾರಾಯಣಪುರ ಎಡದಂಡೆ ಕಾಲುವೆ ಬಳಿ ಮಂಗಳವಾರ ಸಂಜೆ ನಡೆದಿದೆ. 

ಪವನ್ (31) ಮೃತದೇಹ ಪತ್ತೆಯಾಗಿದ್ದು, ತಂದೆ  ಶರಣಗೌಡ ಹಾಗೂ ತಾಯಿ ಜಾನಕಿ ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಪತಿ, ಅತ್ತೆ ಹಾಗೂ ಮಾವ ನೀರಿನಲ್ಲಿ ಮುಳುಗುತ್ತಿದ್ದಾಗ ಸಹಾಯಕ್ಕಾಗಿ ಕಿರುಚಿದ ಪವನ್ ಪತ್ನಿ ಪ್ರೇಮಾ, ಈಜಿ ತನ್ನ ಮೂರು ವರ್ಷದ ಮಗು ಕೃತ್ತಿಕಾಳ ಜೊತೆ ದಡ ಸೇರಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸ್ಥಳೀಯರ ಸಹಾಯದಿಂದ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಹುಣಸಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರೇಮ ಹಾಗೂ ಮಗುವಿನ ಆಕ್ರಂದನ ಮುಗಿಲು ಮುಟ್ಟಿತ್ತು.