Bagalkote: ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಗೆಳೆಯರಿಬ್ಬರ ದುರ್ಮರಣ

ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಗೆಳೆಯರಿಬ್ಬರು ಮೃತಪಟ್ಟ ಘಟನೆ ಬಾಗಲಕೋಟೆಯ ಹೊರವಲಯದಲ್ಲಿ ತಡರಾತ್ರಿ ನಡೆದಿದೆ. ಮೃತ ಯುವಕರು ಸಿರಗುಪ್ಪಿ ತಾಂಡಾದ ನಿವಾಸಿಗಳಾಗಿದ್ದು, ಬರ್ತಡೇ ಮುಗಿಸಿ ಬೈಕ್ ಮೇಲೆ ಮನೆಗೆ ತೆರಳುತ್ತಿದ್ದರು. 

Two Dead In Bike Accident At Bagalkote gvd

ಬಾಗಲಕೋಟೆ (ಡಿ.07): ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಗೆಳೆಯರಿಬ್ಬರು ಮೃತಪಟ್ಟ ಘಟನೆ ಬಾಗಲಕೋಟೆಯ ಹೊರವಲಯದಲ್ಲಿ ತಡರಾತ್ರಿ ನಡೆದಿದೆ. ಮೃತ ಯುವಕರು ಸಿರಗುಪ್ಪಿ ತಾಂಡಾದ ನಿವಾಸಿಗಳಾಗಿದ್ದು, ಬರ್ತಡೇ ಮುಗಿಸಿ ಬೈಕ್ ಮೇಲೆ ಮನೆಗೆ ತೆರಳುತ್ತಿದ್ದರು. ಈ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದಾರೆ. ಇನ್ನು ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾರಿಗಳ ನಡುವೆ ಭೀಕರ ಅಪಘಾತ: ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ ಚಾಲಕರಿಬ್ಬರೂ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಬೆಳಗ್ಗೆ ಗುರುಪುರ- ಕೈಕಂಬ ಬಳಿ ನಡೆದಿದೆ. ಮೃತರನ್ನು ಹರಿಪದವಿನ ಲೋಕನಾಥ ಶೆಟ್ಟಿಗಾರ್‌ (60) ಎಂದು ಗುರುತಿಸಲಾಗಿದೆ. ಇನ್ನೊಂದು ಲಾರಿ ಚಾಲಕ ಆಂಧ್ರ ಮೂಲದವರಾಗಿದ್ದು, ಮನೆಯವರು ಬಂದ ಬಳಿಕವಷ್ಟೆಗುರುತು ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕರ ಸೋಶಿಯಲ್ ಮೀಡಿಯಾ ಸ್ಟಂಟ್‌ಗೆ ಮದುವೆ ಪತ್ರಿಕೆ ಹಂಚುತ್ತಿದ್ದ ಯೋಧ ಬಲಿ!

ಮೂಡುಬಿದಿರೆ ಕಡೆಯಿಂದ ಮಂಗಳೂರಿನತ್ತ ಕೆಂಪು ಕಲ್ಲಿನ ಮಣ್ಣು ತುಂಬಿಸಿ ತರುತ್ತಿದ್ದ 10 ಚಕ್ರಗಳ ಲಾರಿ ಹಾಗೂ ಗುರುಪುರ ಕಡೆಯತ್ತ ತೆರಳುತ್ತಿದ್ದ ಈಚರ್‌ ಲಾರಿ ಪರಸ್ಪರ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಈಚರ್‌ ಲಾರಿ ಚಾಲಕ ಲೋಕನಾಥ್‌ ಹಾಗೂ ಇನ್ನೊಂದು ಲಾರಿ ಚಾಲಕ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ಇಬ್ಬರೂ ಅದಾಗಲೇ ಅಸುನೀಗಿದ್ದಾರೆ.

ಗುರುಪುರ ಕೈಕಂಬದ ಇಳಿಜಾರು ಪ್ರದೇಶದಲ್ಲಿ ಅಪಘಾತ ನಡೆದು ಲಾರಿಗಳು ರಸ್ತೆ ಬದಿಯ ಕಮರಿಗೆ ಬಿದ್ದಿವೆ. ಈಚರ್‌ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಇನ್ನೊಂದು ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದ ಈ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಕಾಣಿಸಿಕೊಂಡಿತ್ತು. ಈ ರಸ್ತೆಯಲ್ಲಿ ಕೆಂಪು ಕಲ್ಲಿನ ಮಣ್ಣು ಸಾಗಾಟ ಮಾಡುವ ದಂಧೆ ನಡೆಯುತ್ತಿದ್ದು, ಕೆಲ ಸಮಯದ ಹಿಂದೆ ಕೂಡ ಮಣ್ಣು ತುಂಬಿದ್ದ ಲಾರಿ ಕಮರಿಗೆ ಮಗುಚಿ ಬಿದ್ದಿತ್ತು. ಓವರ್‌ ಲೋಡ್‌ನಿಂದ ಇಂಥ ಅವಘಡ ಸಂಭವಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಟಿಪ್ಪರ್‌-ಬೈಕ್‌ ಅಪಘಾತ: ವೀರಕಂಬ ಗ್ರಾಮದ ಮಜಿ ಶಾಲಾ ಮುಂಭಾಗದಲ್ಲಿ ಟಿಪ್ಪರ್‌ ಲಾರಿ ಹಾಗೂ ಬೈಕ್‌ ಮಧ್ಯೆ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್‌ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮಾಣಿಲ ನಿವಾಸಿ ಮನೋಜ್‌ ಪೂಜಾರಿ (26) ಮೃತ ದುರ್ದೈವಿ. ಮೃತರು ಅಮರ್‌ ಕನ್‌ಸ್ಟ್ರಕ್ಷನ್‌ನಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಬೈಕ್‌ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. 

Mysuru Crime: ಓವರ್‌ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾರು ಹತ್ತಿಸಿದ ತಂದೆ-ಮಗ

ವಿಟ್ಲ ಕಡೆಯಿಂದ ಬಂದ ಟಿಪ್ಪರ್‌ ಲಾರಿ ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕ್‌ಗೆ ಡಿಕ್ಕಿಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟಮನೋಜ್‌ ಅವರನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮನೋಜ್‌ ಭಾನುವಾರ ಮೃತಪಟ್ಟರು. ಅಪಘಾತ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರೇಮನಾಥ ಎಂಬವರಿಗೂ ಸಣ್ಣಪುಟ್ಟಗಾಯಗಳಾಗಿವೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios