ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗಿದೆ. ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ ಯೋಗ ಮಾಡಿದ್ದರೆ, ಹಲವು ಗಣ್ಯರು ಹಲವೆಡೆ ಯೋಗ ಮಾಡಿ ಗಮನಸೆಳೆದಿದ್ದಾರೆ. ಇದರ ನಡುವೆ ಯುವಕರಿಬ್ಬರು ಚಲಿಸುತ್ತಿರುವ ರೈಲಿನಲ್ಲಿ ಯೋಗಭ್ಯಾಸದ ಮೂಲಕ ರೀಲ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಬ್ಬರು ಜೈಲು ಸೇರಿದ್ದಾರೆ.
ನೋಯ್ಡಾ(ಜೂ.23) ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗಿದೆ. ಭಾರತದ ಜಿಲ್ಲೆ, ಜಿಲ್ಲೆ, ನಗರ, ರಾಜಧಾನಿಗಳಲ್ಲಿ ಯೋಗಾಭ್ಯಾಸ ವಿಶ್ವದ ಗಮನಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ 180 ರಾಷ್ಟ್ರದ ಗಣ್ಯರ ಜೊತೆ ಯೋಗ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದರು. ಯೋಗ ದಿನ ತಮ್ಮ ವಿಡಿಯೋಗೆ ಹೆಚ್ಚಿನ ಲೈಕ್ಸ್ ಬರುವಂತೆ ಮಾಡಲು ವಿದ್ಯಾರ್ಥಿಗಳಿಬ್ಬರು, ಚಲಿಸುತ್ತಿರುವ ರೈಲಿನಲ್ಲಿ ಯೋಗಾಭ್ಯಾಸ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಚರ್ಚೆಗೆ ಕಾರಣವಾಗುತ್ತಿದ್ದಂತೆ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ನೋಯ್ಡಾದ ಜರ್ಚಾ ಪ್ರದೇಶದ ನಿವಾಸಿಗಳಾಗಿರುವ ಇಬ್ಬರು ವಿದ್ಯಾರ್ಥಿಗಳು ರೀಲ್ಸ್‌ಗಾಗಿ ರೈಲಿನ ಮೇಲೆ ಯೋಗ ಮಾಡಿದ್ದಾರೆ. ಅರೆ ನಗ್ನವಾಗಿ 19 ವರ್ಷ ಹಾಗೂ 22 ವರ್ಷದ ಇಬ್ಬರು ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿ ಯೋಗ ಮಾಡಿದ್ದಾರೆ. ಇದನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Captain Zoya: ನ್ಯೂಯಾರ್ಕಲ್ಲಿ ಮೋದಿ ತೇಜಸ್ಸಿಗೆ ಮನಸೋತ ನಕ್ಷತ್ರಕ್ಕೆ ಕೈಚಾಚೀದಾಕೆ!
ಈ ವಿಡಿಯೋ ಕ್ಲಿಪ್ ಆಧರಿಸಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಎರಡೇ ದಿನದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಈ ಸಾಹಸ ಮಾಡಲಾಗಿದೆ. ಜೂನ್ 23 ರಂದು ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್ ಆಗಿದ್ದಾರೆ.
ರೈಲಿನ ಮೇಲೆ ಹತ್ತುವುದು, ಅಪಾಯಕಾರಿ ಸ್ಟಂಟ್ ಮಾಡುವುದು, ರೈಲು ಬಾಗಿನಲ್ಲಿ ನೇತಾಡುವುದು ಸೇರಿದಂತೆ ಹಲವು ಸಾಹಸಗಳು ಗಂಭೀರ ಅಪರಾಧಗಳಾಗಿದೆ. ರೈಲಿನೊಳಗಡೆ ಬೀಡಿ ಅಥವಾ ಸಿಗರೆಟ್ ಸೇದುವುದು ಅಥವಾ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ತರುವುದು ಶಿಕ್ಷಾರ್ಹ ಅಪರಾಧವಾಗಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 164ರ ಅನ್ವಯ ತಪ್ಪಿತಸ್ಥರಿಗೆ 3 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅಥವಾ 1000 ರು. ದಂಡ ಅಥವಾ ಜೈಲು ಶಿಕ್ಷೆ ಮತ್ತು ದಂಡ ಎರಡೂ ನೀಡಲು ಅವಕಾಶವಿದೆ ಹಾಗೂ ಸೆಕ್ಷನ್ 165ರ ಪ್ರಕಾರ 500 ರು. ದಂಡ ವಿಧಿಸಲು ಅವಕಾಶವಿದೆ ಎಂದು ರೈಲ್ವೆ ತಿಳಿಸಿದೆ.
ಇತ್ತೀಚೆಗೆ ಚಲಿಸುತ್ತಿರುವ ರೈಲು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಅಗ್ನಿ ದುರಂತಗಳು ಸಂಭವಿಸಿದ ಹಿನ್ನೆಲೆಯಲ್ಲಿ ರೈಲ್ವೆ ಈ ಬಿಗಿ ಕ್ರಮಕ್ಕೆ ಮುಂದಾಗಿದೆ. ಈ ನಿಯಮ ಮಾ.22ರಿಂದಲೇ ಅನುಷ್ಠಾನಗೊಳ್ಳುತ್ತದೆ ಎಂದು ರೈಲ್ವೆ ತಿಳಿಸಿದೆ.
ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ 9ನೇ ವರ್ಷದ ಯೋಗದಿನಾಚರಣೆ, 180 ರಾಷ್ಟ್ರದ ಗಣ್ಯರು ಭಾಗಿ!
9ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ಯೋಗ ಕಾರ್ಯಕ್ರಮ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದೆ. ಈ ಕಾರ್ಯಕ್ರಮದಲ್ಲಿ 135 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಮೂಲಕ ಹಿಂದಿನ, 114 ದೇಶಗಳ ಪ್ರತಿನಿಧಿಗಳ ಭಾಗವಹಿಸುವಿಕೆಯ ದಾಖಲೆಯನ್ನು ಇದು ಧ್ವಂಸ ಮಾಡಿದೆ. 4 ದಿನಗಳ ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರು ಮೊದಲ ಬಾರಿ ವಿದೇಶದಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು. 135 ದೇಶಗಳ ಗಣ್ಯರೊಡನೆ ವಿಶ್ವಸಂಸ್ಥೆಯ ಹೊರಗಿನ ಹುಲ್ಲುಹಾಸಿನ ಮೇಲೆ ಯೋಗ ಮಾಡಿ ಗಮನ ಸೆಳೆದರು. ಈ ವೇಳೆ ಮಾತನಾಡಿದ ಅವರು, ‘ಯೋಗವು ಯಾವುದೇ ಹಕ್ಕುಸ್ವಾಮ್ಯಗಳಿಂದ ಹೊರತಾದುದು. ಇದು ಜಾಗತಿಕ ಆಸ್ತಿ’ ಎಂದು ಕೊಂಡಾಡಿದರು.
