ಮೈಸೂರು: ವೀಲಿಂಗ್ ಶೋಕಿಗಾಗಿ ಬೈಕ್ ಕಳವು, ಇಬ್ಬರು ಆರೋಪಿಗಳ ಬಂಧನ
ಶ್ರೀರಾಂಪುರದಲ್ಲಿ ಬೈಕ್ ಕಳವು ಮಾಡಿ ಅದೇ ಬೈಕಿನಲ್ಲಿ ತೆರಳುತ್ತಾ ಮತ್ತೊಂದು ಬೈಕ್ ಕಳವಿಗೆ ಸಂಚು ರೂಪಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ವೀಲಿಂಗ್ ಮಾಡುವುದಕ್ಕಾಗಿ ಬೈಕ್‌ಗಳನ್ನ ಕಳುವು ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
ಮೈಸೂರು(ಆ.04): ವೀಲಿಂಗ್ ಶೋಕಿಗಾಗಿ ಬೈಕ್ ಕಳುವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿ, 2.50 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಧನುಷ್(19) ಮತ್ತು ನಿತಿನ್(19) ಎಂವುವರೇ ಬಂಧಿತ ಆರೋಪಿಗಳನ್ನು. ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶ್ರೀರಾಂಪುರದಲ್ಲಿ ಬೈಕ್ ಕಳವು ಮಾಡಿ ಅದೇ ಬೈಕಿನಲ್ಲಿ ತೆರಳುತ್ತಾ ಮತ್ತೊಂದು ಬೈಕ್ ಕಳವಿಗೆ ಸಂಚು ರೂಪಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ವೀಲಿಂಗ್ ಮಾಡುವುದಕ್ಕಾಗಿ ಬೈಕ್‌ಗಳನ್ನ ಕಳುವು ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
Bengaluru City Police: ಸೈಬರ್ ವಂಚಕನಿಂದ 3 ಲಕ್ಷಕ್ಕೆ ಕೈಯೊಡ್ಡಿ, ಕೇರಳ ಪೊಲೀಸರಿಗೆ ಸಿಕ್ಕಿಬಿದ್ದರು
ಬಂಧಿತರಿಂದ ವಿದ್ಯಾರಣ್ಯಪುರಂ ಠಾಣೆ, ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಕಳುವು ಪ್ರಕರಣ ಹಾಗೂ ಆಲನಹಳ್ಳಿ ಠಾಣೆಯ ಎರಡು ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿದೆ.
ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಸ್. ಜಾಹ್ನವಿ, ಕೆ.ಆರ್. ಉಪವಿಭಾಗದ ಎಸಿಪಿ ಗಂಗಾಧರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆ ಇನ್ಸ್‌ಪೆಕ್ಟರ್ ಅರುಣ್, ಎಸ್‌ಐಗಳಾದ ರಾಧಾ, ಗೋಪಾಲ್ ಮತ್ತು ಸಿಬ್ಬಂದಿ ಆನಂದ್, ಮಂಜುನಾಥ್, ಪುಟ್ಟಪ್ಪ, ಹಜರತ್, ಸುರೇಶ್, ನಾಗೇಶ್, ಯೋಗೇಶ್, ಸತೀಶ್ ಈ ಪತ್ತೆ ಮಾಡಿದ್ದಾರೆ.