ವಿಶ್ವೇಶ್ವರಯ್ಯ ಲೇಔಟ್‌ನ 1ನೇ ಹಂತದಲ್ಲಿ ಉಲ್ಲಾಳು ಉಪನಗರ ಕಡೆ ತೆರಳುವ ಮಾರ್ಗದಲ್ಲಿ ಮಾ.15ರಂದು ಗಾಂಜಾ ಮಾರಾಟಕ್ಕೆ ಶ್ರೀನಿವಾಸ್‌ ಸಿದ್ಧತೆ ನಡೆಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಬಂಧಿಸಿ 35 ಸಾವಿರ ಮೌಲ್ಯದ 1.1 ಕೇಜಿ ಗಾಂಜಾ ಹಾಗೂ ಬೈಕ್‌ ಜಪ್ತಿ. 

ಬೆಂಗಳೂರು(ಮಾ.18): ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರನ್ನು ಪ್ರತ್ಯೇಕವಾಗಿ ಗೋವಿಂದರಾಜ ನಗರ ಹಾಗೂ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗದೇವನಹಳ್ಳಿ ಸಮೀಪದ ಎಸ್‌ಎಂಎವಿ ಲೇಔಟ್‌ನ ಶ್ರೀನಿವಾಸ್‌ ಅಲಿಯಾಸ್‌ ಚಿನ್ನಿ ಹಾಗೂ ಕೆ.ಜಿ.ಹಳ್ಳಿಯ ಇಮ್ರಾನ್‌ ಪಾಷ ಬಂಧಿತರಾಗಿದ್ದು, ಆರೋಪಿಗಳಿಂದ 7.4 ಕೇಜಿ ಗಾಂಜಾ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ.
ವಿಶ್ವೇಶ್ವರಯ್ಯ ಲೇಔಟ್‌ನ 1ನೇ ಹಂತದಲ್ಲಿ ಉಲ್ಲಾಳು ಉಪನಗರ ಕಡೆ ತೆರಳುವ ಮಾರ್ಗದಲ್ಲಿ ಮಾ.15ರಂದು ಗಾಂಜಾ ಮಾರಾಟಕ್ಕೆ ಶ್ರೀನಿವಾಸ್‌ ಸಿದ್ಧತೆ ನಡೆಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಬಂಧಿಸಿ 35 ಸಾವಿರ ಮೌಲ್ಯದ 1.1 ಕೇಜಿ ಗಾಂಜಾ ಹಾಗೂ ಬೈಕ್‌ ಜಪ್ತಿ ಮಾಡಲಾಯಿತು ಎಂದು ಕೆಂಗೇರಿ ಪೊಲೀಸರು ಹೇಳಿದ್ದಾರೆ.

ಬೆಂಗ್ಳೂರಲ್ಲಿ 2.47 ಕೋಟಿಯ ಗಾಂಜಾ ಜಪ್ತಿ, ಇಬ್ಬರು ಪೆಡ್ಲರ್‌ಗಳ ಬಂಧನ

ಕನಕ ನಗರದ ಮುನಿಕೃಷ್ಣ ಲೇಔಟ್‌ನ ಮುಖ್ಯರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಅಣಿಯಾಗಿದ್ದಾಗ ಇಮ್ರಾನ್‌ ಪಾಷ ಗೋವಿಂದರಾಜ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯಿಂದ 6.3 ಕೇಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆತನಿಗೆ ಗಾಂಜಾ ಪೂರೈಸುತ್ತಿದ್ದ ಆಂಧ್ರಪ್ರದೇಶ ಮೂಲದ ಪೆಡ್ಲರ್‌ ಪತ್ತೆಗೆ ತನಿಖೆ ಮುಂದುವರೆದಿದೆ. ರೈಲಿನಲ್ಲಿ ಆಂಧ್ರಪ್ರದೇಶದ ಮಂತ್ರಾಲಯದಿಂದ ಆರೋಪಿಗಳು ಗಾಂಜಾ ತರುತ್ತಿದ್ದರು. ಗಿಡಗಳ ಸಮೇತ ತಂದು ನಗರದಲ್ಲಿ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.