ಹುಬ್ಬಳ್ಳಿ(ಸೆ.14): ಇಲ್ಲಿನ ಸಿಬಿಟಿ ಕಿಲ್ಲಾ ಬಳಿಯ ಬ್ರಾಡ್‌ವೇ ಕಾಂಪ್ಲೆಕ್ಸ್‌ನಲ್ಲಿರುವ ಓಸಿಯಾ ಮಾರ್ಕೆಟಿಂಗ್‌ ಅಂಗಡಿಯ ಮೇಲೆ ದಾಳಿ ನಡೆಸಿದ ಆರ್ಥಿಕ ಮತ್ತು ಮಾದಕ ಅಪರಾಧ ಪೊಲೀಸ್‌ ಇನ್‌ಸ್ಪೆಕ್ಟರ್‌ ಎನ್‌.ಸಿ. ಕಾಡದೇವರ ಅವರು 60 ಕೆಜಿ ‘ಮುಧುಮುನಕ್ಕಾ’ ಮಾದಕ ದ್ರವ್ಯವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಸಿಬಿಟಿ ಬಳಿಯ ನಿವಾಸಿ ಪುಷ್ಪರಾಜ ಗೇಸುಲಾಲಜಿ ಮೆಹತಾ (38) ಹಾಗೂ ಗಣೇಶಪೇಟೆ ನಿವಾಸಿ ಉಮೇಶ ದಾವಲಜಿ ಸವಣೂರ (30) ಬಂಧಿತ ಆರೋಪಿಗಳು. ಇವರು ಆಯರ್ವೇದಿಕ್‌ ಔಷಧಿ ಎಂದು 30 ಸಾವಿರ ಮೌಲ್ಯದ 60 ಕೆಜಿ ‘ಮಧುಮುನಕ್ಕಾ’ ಎಂಬ ಮಾದಕ ದ್ರವ್ಯವನ್ನು ಮಾರಾಟಕ್ಕಾಗಿ ಅಂಗಡಿ ಮತ್ತು ಗೋದಾಮಿನಲ್ಲಿ ಇಟ್ಟಿದ್ದರು.

ಹುಬ್ಬಳ್ಳಿ: ಪೊಲೀಸರ ಭರ್ಜರಿ ಕಾರ್ಯಾಚರಣೆ, ಲಕ್ಷಾಂತರ ರೂ. ಮೌಲ್ಯದ ಗಾಂಜಾ ಜಪ್ತಿ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್‌ಸ್ಪೆಕ್ಟರ್‌ ಕಾಡದೇವರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪಿಎಸ್‌ಐ ಬಿ.ಕೆ. ಹೂಗಾರ, ರಾಘವೇಂದ್ರ ಗುರ್ಲ ಹಾಗೂ ಸಿಬ್ಬಂದಿ ಸಿ.ಎಂ. ಕಂಬಾಳಿಮಠ, ಮಂಜುನಾಥ ಹಾಲವರ, ರವಿ ಕೋಳಿ, ಎಂ.ಡಿ. ಬಡಿಗೇರ, ಬಿ.ಟಿ. ಪಶುಪತಿಹಾಳ, ಸಂಜೀವ ಕುರಹಟ್ಟಿಸೇರಿ ಇತರರು ಕಾರ್ಯಾಚರಣೆಯಲ್ಲಿದ್ದರು.