ಚಿಕ್ಕಮಗಳೂರು: ಯುವಕನಿಗೆ ಕಾರ್ ಡಿಕ್ಕಿ ಹೊಡೆದ ಪ್ರಕರಣಕ್ಕೆ ಟ್ವಿಸ್ಟ್, ಗೆಳೆಯನನ್ನೇ ಮುಗಿಸೋಕೆ ಫ್ರೆಂಡ್ ಸ್ಕೆಚ್
ಅಪಘಾತದ ಅಸಲಿ ಕಥೆಯೇ ಬೇರೆ ಇದೆ. ಇದು ಹಳೇ ಗೆಳೆಯರ ನಡುವೆ ನಡೆದ ಹತ್ಯೆಯ ಅಪಘಾತ. ಇದು ಅಪಾಘತ ಅಲ್ಲ. ಪ್ಯೂರ್ಲಿ ಮರ್ಡರ್ ಸ್ಕೆಚ್.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.19): ಚಿಕ್ಕಮಗಳೂರು ನಗರದಲ್ಲಿ ನಡೆದ ರಸ್ತೆ ಅಪಘಾತದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅದು ರಸ್ತೆ ಅಪಘಾತವಲ್ಲ ಬದಲಾಗಿ ಹತ್ಯೆಯ ಅಪಘಾತ ಎನ್ನುವುದು ಪೊಲೀಸರು ತನಿಖೆಯಿಂದ ಬಯಲಾಗಿದೆ. ನಗರದಲ್ಲಿ ಬೈಕಿಗೆ ಹಿಂದಿನಿಂದ ಕಾರೊಂದು ಡಿಕ್ಕಿಯೊಡೆದಿತ್ತು. ಕಾರಿನಡಿಗೆ ಸಿಕ್ಕ ಬೈಕನ್ನ ಕಾರು ಚಾಲಕ 100 ಮೀಟರ್ ದೂರಕ್ಕೆ ಎಳೆದೊಯ್ದಿದ್ದ. ಆ ರಭಸಕ್ಕೆ ಬೈಕ್ ಹೊತ್ತಿ ಉರಿದಿತ್ತು. ಕಾರು ಚಾಲಕ ಕಾರನ್ನ ನಿಲ್ಲಿಸದೆ ಎಸ್ಕೇಪ್ ಆಗಿದ್ದ. ನೋಡ್ದೋರು, ಇದೊಂದು ಅಚಾನಕ್ ಅಪಘಾತ. ಭಯದಿಂದ ಆತ ಕಾರು ನಿಲ್ಲಿಸಿದ ಹೋಗಿದ್ದಾನೆ ಎಂದೇ ಭಾವಿಸಿದ್ರು. ಯುವಕನನ್ನ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ, ಆ ಅಪಘಾತದ ಅಸಲಿ ಕಥೆಯೇ ಬೇರೆ ಇದೆ. ಇದು ಹಳೇ ಗೆಳೆಯರ ನಡುವೆ ನಡೆದ ಹತ್ಯೆಯ ಅಪಘಾತ. ಇದು ಅಪಾಘತ ಅಲ್ಲ. ಪ್ಯೂರ್ಲಿ ಮರ್ಡರ್ ಸ್ಕೆಚ್.
ಗೆಳೆಯನನ್ನೇ ಮುಗಿಸೋಕೆ ಸ್ಕೆಚ್ ಹಾಕಿದ ಗೆಳೆಯ
ಚಿಕ್ಕಮಗಳೂರು ನಗರದ ಬೈಪಾರಸ್ ರಸ್ತೆಯ ನಿವಾಸಿಗಳಾದ ನಕುಲ್ ಹಾಗೂ ಅಂಕಿತ ಇಬ್ಬರು ಸ್ನೇಹಿತರು. ಆದ್ರೆ, ಹುಡುಗಿ ವಿಚಾರಕ್ಕೋ ಗೊತ್ತಿಲ್ಲ. ಇಬ್ಬರ ಸ್ನೇಹದ ಮಧ್ಯೆ ಬಿರುಕು ಮೂಡಿತ್ತು. ಹಾಗಾಗಿ, ಅಂಕಿತ್ ನಕುಲ್‍ನನ್ನ ಮುಗಿಸೋಕೆ ಪ್ರಯತ್ನಿಸಿದ್ದ. ಆಗಸ್ಟ್ 14ರ ರಾತ್ರಿ ನಕುಲ್ ಮನೆಗೆ ಹೋಗುವಾಗಿ ಕಾರಿನಲ್ಲಿ ಹಿಂದಿನಿಂದ ಹೋಗಿ ಡಿಕ್ಕಿಯೊಡೆದಿದ್ದ. ಡಿಕ್ಕಿಯ ರಭಸಕ್ಕೆ ರಾಯಲ್ ಎನ್‍ಫಿಲ್ಡ್ ಬೈಕ್ ಕಾರಿನಡಿ ಸಿಕ್ಕಿ 100 ಮೀಟರ್ ಉಜ್ಜಿಕೊಂಡು ಹೋಗಿತ್ತು. ಬೈಕ್ ರಸ್ತೆಯಲ್ಲಿ ಉಜ್ಜುವ ರಭಸಕ್ಕೆ ಬೈಕಿನಲ್ಲಿ 60 ಮೀಟರ್‍ನಷ್ಟು ದೂರಕ್ಕೆ ಬೆಂಕಿ ಹತ್ತಿತ್ತು. ಅಪಘಾತ ಮಾಡಿದ್ದ ಅಂಕಿತ್ ಕಾರನ್ನ ನಿಲ್ಲಿಸಿದೆ ಎಸ್ಕೇಪ್ ಆಗಿದ್ದ. ಸ್ಥಳಿಯರು ನಕುಲ್‍ನನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ, ಅಂಕಿತ್ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆನ್‌ಲೈನ್ ಮೋಸದ ಜಾಲ: ಕಾರಿನ ಆಸೆಗೆ 11 ಲಕ್ಷ ಹಣ ಕಳೆದುಕೊಂಡ ಕಾಫಿನಾಡಿನ ಯುವಕ
ಅಪಘಾತವಲ್ಲ ಕೊಲೆ ಯತ್ನದ ಹತ್ಯೆ ಅಪಘಾತ
ಇನ್ನು ಹಳೇ ವೈಷಮ್ಯಕ್ಕೆ ಹೊಸ ರಿವೇಂಜ್ ಬೆಳೆಸಿಕೊಂಡಿದ್ದ ಅಂಕಿತ್ ನಗರದ ನರಿಗುಡ್ಡನಹಳ್ಳಿ ಸರ್ಕಲ್ ಬಳಿ ನಕುಲ್‍ನನ್ನ ಕೊಲೆಗೈಯಲು ಯತ್ನಿಸಿದ್ದ. ಕಾರಿನಲ್ಲಿದ್ದ ಅಂಕಿತ್ ಹಾಗೂ ಬೈಕಿನಲ್ಲಿದ್ದ ಯುವಕ ನಕುಲ್ ಇಬ್ಬರು ಕುಚುಕು ಗೆಳೆಯರು. ಹಳೇ ವಿಚಾರವಾಗಿ ಹಿಂದೆ ಯಾವಾಗ್ಲೋ ನಡೆದಿದ್ದ ಸಣ್ಣ ಕಿರಿಕ್ಕನ್ನ ಮನಸ್ಸಲ್ಲಿ ಇಟ್ಕೊಂಡು ಇಬ್ಬರ ನಡುವೆ ವೈಮನಸ್ಸು ಶುರುವಾಗಿತ್ತು. ಆ ಮುನಿಸು ಈಗ ಒಬ್ಬರ ಜೀವ ತೆಗೆಯೋ ಹಂತಕ್ಕು ಬೆಳೆದಿತ್ತು. ಪ್ರಕರಣ ದಾಖಲಿಸಿಕೊಂಡಿರೋ ನಗರ ಠಾಣಾ ಪೊಲಿಸರು ಈ ಕೊಲೆ ಯತ್ನಕ್ಕೆ ಒರಿಜಿನಲ್ ರೀಸನ್ ಏನೆಂದು ಹುಡುಕ ಹೊರಟಿದ್ದಾರೆ. ಇದೀಗ, ಬೈಕ್ ಸವಾರ ನಕುಲ್ ದೂರು ನೀಡಿದ್ದು, ಎಫ್.ಐ.ಆರ್ ದಾಖಲಾಗಿದೆ. ಇದೊಂದು ಕೊಲೆ ಯತ್ನ ಅಂತ ದೂರು ನೀಡಿದ್ದಾರೆ. ಈಗ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ, ಕುಚುಕು ಗೆಳೆಯರ ನಡುವಿನ ಆ ಒಂದು ಸಣ್ಣ ಮುನಿಸಿನಿಂದ ಪ್ರಾಣವನ್ನೇ ತೆಗೆಯೋ ಹಂತಕ್ಕೆ ತಲುಪಿರೋದು ನಿಜಕ್ಕೂ ದುರಂತ.