ಖಾರದ ಪುಡಿ ಎರಚಿ 5 ಲಕ್ಷ ಹಣ ಕದ್ದೊಯ್ದ ಪ್ರಕರಣಕ್ಕೆ ಟ್ವಿಸ್ಟ್: ವಾಹನ ಚಾಲಕನೇ ಅಂದರ್

ಬೈಕ್ ಮೇಲೆ ಬಂದು ಖಾರದ ಪುಡಿ ಎರಚಿ 5 ಲಕ್ಷ ಹಣ ಕದ್ದು ಎಸ್ಕೇಪ್ ಆಗಿದ್ದ ಖದೀಮರನ್ನು ಬಾಗಲಕೋಟೆ ಜಿಲ್ಲೆ ಹುನಗುಂದ ಪೊಲೀಸರು 48 ಗಂಟೆಯ ಒಳಗಾಗಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

twist to the case of stealing 5 lakhs by throwing chilli powder gvd

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಆ.10): ಬೈಕ್ ಮೇಲೆ ಬಂದು ಖಾರದ ಪುಡಿ ಎರಚಿ 5 ಲಕ್ಷ ಹಣ ಕದ್ದು ಎಸ್ಕೇಪ್ ಆಗಿದ್ದ ಖದೀಮರನ್ನು ಬಾಗಲಕೋಟೆ ಜಿಲ್ಲೆ ಹುನಗುಂದ ಪೊಲೀಸರು 48 ಗಂಟೆಯ ಒಳಗಾಗಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಬಳಿ 8 ನೇ ತಾರೀಖು ಎರಡು ಬೈಕ್ ಮೇಲೆ ಬಂದ 4 ಜನ ಆಗಂತುಕರು ಕ್ಯಾಂಟರ್ ವಾಹನದಲ್ಲಿದ್ದ ಕುಮಾರ ಹಿರೇಮಠ ಮತ್ತು ಚಾಲಕ ಬಸವರಾಜ್ ಅವರನ್ನು ತಡೆದು ಗಲಾಟೆಗೆ ಮಾಡಿದ್ದರು.

ಮಾತಿಗೆ ಮಾತು ಬೆಳೆಯುತ್ತಲೇ ಏಕಾಏಕಿ ಖಾರದ ಪುಡಿ ಎರಚಿದ ಖದೀಮರು, ಕುಮಾರ ಹಿರೇಮಠ ಎಂಬುವವರ ಕೈಯಲ್ಲಿದ್ದ  5,53,300 ಹಣವುಳ್ಳ ಬ್ಯಾಗ್ ಎಗರಿಸಿ ಪರಾರಿಯಾಗಿದ್ದರು. ಕುಮಾರ ಹಿರೇಮಠ, ಹಣ ಕಳೆದುಕೊಂಡ ಮರೋಳ ಗ್ರಾಮದ ವ್ಯಕ್ತಿಯಾಗಿದ್ದು, ಧನ್ನೂರ ನಿಂದ ವಿಜಯಪುರಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ನಡೆದಿತ್ತು. ಕಿರಾಣಿ ವ್ಯಾಪಾರಕ್ಕಾಗಿ ಸಾಮಗ್ರಿ ತರಲು ಕ್ಯಾಂಟರ್ ವಾಹನದೊಂದಿಗೆ ಕುಮಾರ ಬೆಳಿಗ್ಗೆ ವಿಜಯಪುರಕ್ಕೆ ತೆರಳುತ್ತಿದ್ದರು. ಕುಮಾರ್ ಅವರ ಕ್ಯಾಂಟರ್ ವಾಹನ ತಡೆದು ಖಾರದ ಪುಡಿ ಎರಚಿ 5 ಲಕ್ಷಕ್ಕೂ ಅಧಿಕ ಹಣ ಎಗರಿಸಿ ಬೈಕ್ ಸವಾರರು ಎಸ್ಕೆಪ್ ಆಗಿದ್ದರು. 

ನನ್ನ ಸಾಯಿಸಿ ಉಪಚುನಾವಣೆ ಕುತಂತ್ರ: ಪ್ರಭು ಚವ್ಹಾಣ್‌ ಆರೋಪ

ಈ ಕುರಿತು ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೇಧಿಸಿರುವ ಹುನಗುಂದ ಪೊಲೀಸರು ಹಣ ಎಗರಿಸಿದ ಪ್ರಕರಣದಲ್ಲಿ 7 ಜನ ಶಾಮೀಲಾಗಿರೋದನ್ನು ಬಹಿರಂಗ ಮಾಡಿದ್ದಲ್ಲದೇ 7 ಜನ ಆರೋಪಿಗಳ ಪೈಕಿ 5 ಜನರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿತರಿಂದ 4,65,000 ನಗದು ಕೃತ್ಯಕ್ಕೆ ಬಳಸಿದ 3 ಮೋಟರ್ ಸೈಕಲ್, 5 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.  

ಹಣ ಕೊಂಡೊಯ್ಯುತ್ತಿದ್ದ ವಾಹನ ಚಾಲಕನಿಂದಲೇ ಕಳ್ಳತನಕ್ಕೆ ಸ್ಕೆಚ್: ಇನ್ನು ಕ್ಯಾಂಟರ್ ಚಾಲಕ ಬಸವರಾಜ್ ಎಂಬಾತ ಮರೋಳ ಊರಿನವನಾಗಿದ್ದು, ಇತನೇ ಕೃತ್ಯದ ಪ್ಲ್ಯಾನರ್ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿ ಚಾಲಕ ಬಸವರಾಜ್ ತನ್ನ ಮರೋಳ ಗ್ರಾಮದ ಸ್ನೇಹಿತ ಅಸ್ಲಂ ಮುಂದೆ ಕಿರಾಣಿ ತರಲು ಹಣ ಇಟ್ಕೊಂಡು ಹೋಗುವ ವಿಚಾರ ತಿಳಿಸಿದ್ದನು. 

ತಿಮ್ಮಾಪೂರಗೆ ನೂರಂದ್ರು ಗೊತ್ತಿಲ್ಲ..ಸಾವಿರ ಅಂದ್ರೂ ಗೊತ್ತಿಲ್ಲ: ಗೋವಿಂದ ಕಾರಜೋಳ

ಹಣ ಲಪಟಾಯಿಸೋಣ ಅಂತಾ ಅಸ್ಲಂ ಮುಂದೆ ಹೇಳಿರ್ತಾನೆ. ಅದ್ರಂತೆ ಬಸವರಾಜ್ ಹಾಗೂ ಅಸ್ಲಂ ಜೊತೆಗೆ ಮಹ್ಮದ್ ಗೌಸ್, ದಾನೇಶ್, ಮೆಹಬೂಬ್, ಅಪ್ಪಾಜಿ, ದರ್ಶನ ಕೈ ಜೋಡಿಸಿ ಹಣವನ್ನು ಲೂಟಿ ಮಾಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಚಾಲಕ ಬಸವರಾಜ್ ಮೇಲೆ ಅನುಮಾನ ಶುರು ಆಗಿತ್ತು. ಹಾಗಾಗಿ ಬಸವರಾಜ್ ಪೊಲೀಸರು ವಿಚಾರಿಸಿದಾಗ ಎಲ್ಲವನ್ನು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಸದ್ಯ ಅಪ್ಪಾಜಿ, ದರ್ಶನ ಎಂಬುವರಿಗಾಗಿ ಪೊಲೀಸರ ಬಲೆ ಬೀಸಿದ್ದಾರೆ.

Latest Videos
Follow Us:
Download App:
  • android
  • ios