ನೇಣು ಬಿಗಿದ ಸ್ಥಿತಿಯಲ್ಲಿ ಯೂಟ್ಯೂಬರ್ ಶವಪತ್ತೆ; ಆತ್ಮಹತ್ಯೆಗೆ ಮುನ್ನ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದೇನು?
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಲದೇವನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯೂಟ್ಯೂಬರ್ ಶವ ಪತ್ತೆಯಾಗಿದೆ.
ದಾಬಸ್‌ಪೇಟೆ (ಜು.20): ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಲದೇವನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯೂಟ್ಯೂಬರ್ ಶವ ಪತ್ತೆಯಾಗಿದೆ.
ಬೆಂಗಳೂರು ನಗರ ಜಿಲ್ಲೆ ದಾಸರಹಳ್ಳಿಯ ಮಂಜುನಾಥ(youtuber dasarahalli manjunath) ನಗರದ ನಿವಾಸಿ ಮಂಜುನಾಥ್(38) ಆತ್ಮಹತ್ಯೆ ಮಾಡಿಕೊಂಡವರು. ಈತ ಬೆಂಗಳೂರಿನ ಬಾಗಲುಗುಂಟೆಯಲ್ಲಿ ಟಿವಿ11 ಎಂಬ ಯೂಟ್ಯೂಬ್(TV11 youtube) ಚಾನಲ್ ನಡೆಸುತ್ತಿದ್ದ. ಗುರುವಾರ ಮಧ್ಯರಾತ್ರಿ ಫೇಸ್‌ಬುಕ್ ಲೈವ್(Facebook Live)ಗೆ ಬಂದು, ಚಕ್ರಬಡ್ಡಿ ವ್ಯವಹಾರ ಮಾಡುತ್ತಿರುವ ಪೊಲೀಸರು, ನನಗೆ ಮತ್ತು ಯೂಟ್ಯೂಬ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಾನು ಪೊಲೀಸರ ಬಗ್ಗೆ ಮಾತನಾಡಿದ್ದೇನೆಂದು ನನ್ನ ಮೇಲೆ ಎಫ್ ಐಆರ್ ಮಾಡಬೇಡಿ ಎಂದು ಲೈವ್ ಕೊನೆಗೊಳಿಸಿದ್ದನೆನ್ನಲಾಗಿದೆ.
ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ!
ಮರುದಿನ ಬೆಳಗ್ಗೆ ಮಂಜುನಾಥ್ ಮೃತದೇಹ ಸೋಲದೇವನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ, ಕ್ಷಮಿಸಿ ಬಿಡಿ ಎಂಬುದಾಗಿ ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.