Asianet Suvarna News Asianet Suvarna News

ಕೋಲಾರ: ಕಾಲೇಜು ತೆರೆದಾಗ ಟಿವಿ, ಯುಪಿಎಸ್‌ ಕಳ್ಳತನ ಬೆಳಕಿಗೆ..!

* ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯಲ್ಲಿ ನಡೆದ ಘಟನೆ
*  ಶತಶೃಂಗ ಪಿಯು ಕಾಲೇಜಿನಲ್ಲಿ ನಡೆದ ಘಟನೆ
* ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು 
 

TV UPS Theft in College at Srinivaspur in Kolar grg
Author
Bengaluru, First Published Aug 24, 2021, 7:43 AM IST
  • Facebook
  • Twitter
  • Whatsapp

ಶ್ರೀನಿವಾಸಪುರ(ಆ.24): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯಲ್ಲಿನ ಖಾಸಗಿ ಪಿಯು ಕಾಲೇಜಿನಲ್ಲಿ ಕಳ್ಳರು ಕೈಚಳಕ ತೊರಿಸಿದ್ದು ಕಾಲೇಜಿನ ಕಚೇರಿ ಬೀಗ ಮುರಿದು ಯುಪಿಎಸ್‌, ಬ್ಯಾಟರಿ, ಟೀವಿ, ವಾಟರ್‌ ಮೋಟಾರ್‌ ಸೇರಿದಂತೆ ಕೆಲವು ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಶತಶೃಂಗ ಪಿಯು ಕಾಲೇಜಿನಲ್ಲಿ ತರಗತಿ ಆರಂಭಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸಿದ್ಧತೆ ಮಾಡಿಕೊಂಡಿದ್ದು, ಕಾಲೇಜು ಆಡಳಿತ ಮಂಡಳಿ ಸೋಮವಾರ ಬೆಳಿಗ್ಗೆ ಕಾಲೇಜು ಬಾಗಿಲು ತೆರೆದಾಗ ಉಪಕರಣಗಳು, ವಸ್ತುಗಳು ಕಳ್ಳತನವಾಗಿರುವುದು ಗೊತ್ತಾಗಿದೆ.

ಬಾಗಲಕೋಟೆ: ಎಂಟು ಜನ ಅಂತಾರಾಜ್ಯ ಕಳ್ಳರ ಬಂಧನ

ಸ್ಥಳಕ್ಕೆ ಗೌನಿಪಲ್ಲಿ ಪೊಲೀಸ್‌ ಎ.ಎಸ್‌.ಐ ಚಂದ್ರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಸಂಜೆಯವರಿಗೂ ಆಡಳಿತ ಮಂಡಳಿ ಪೊಲೀಸ್‌ ಠಾಣೆ ದೂರು ದಾಖಲಿಸಿರಲಿಲ್ಲ. ಇಂತಹುದೆ ಪ್ರಕರಣ ಕಳೆದ ತಿಂಗಳು ಗೌವನಿಪಲ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬೈರಗಾನಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲೂ ನಡೆದ್ದು ಅಲ್ಲಿ ಕೈಚಳಕ ತೊರಿಸಿದ ಕಳ್ಳರೇ ಇಲ್ಲಿಯೂ ಕೃತ್ಯ ಎಸಗಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ.
 

Follow Us:
Download App:
  • android
  • ios