ಮುಂಬೈ, (ಅ.27):  ಫೇಸ್ ಬುಕ್‌ನಲ್ಲಿ ಸ್ನೇಹಿತನೊಬ್ಬ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಳೆ ಎನ್ನುವ ಕಾರಣಕ್ಕೆ ನಟಿ ಮಾಲ್ವಿ ಮಲೋತ್ರಾಗೆ ಚೂರಿ ಇರಿದು ಪರಾರಿಯಾಗಿದ್ದಾನೆ.

ಮುಂಬೈನ ಅಂಧೇರಿಯಲ್ಲಿ  ಮಂಗಳವಾರ ಈ ಘಟನೆ ನಡೆದಿದೆ. ಕಿರುತೆರೆ ನಟಿ ಮಾಲ್ವಿ ಮಲ್ಹೋತ್ರಾ ಅವರು ಕೇಫೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಅಡ್ಡಹಾಕಿದ ಯೋಗೇಶ್ ಮಹಿಪಾಲ್ ಸಿಂಗ್ ತನ್ನನ್ನು ದೂರ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾನೆ. 

ಯುವತಿ ಕಿಡ್ನಾಪ್ ಮಾಡಲು ಬಂದ ಯುವಕ, ಪ್ಲಾನ್ ಫೇಲ್ ಆದಾಗ ಕೊಂದೇ ಬಿಟ್ಟ!

ನಂತರ ತನನ್ನು ಮದುವೆಯಾಗುವಂತೆ ಬೇಡಿಕೆಯಿಟ್ಟಿದ್ದಾನೆ. ಇದಕ್ಕೆ ಒಪ್ಪದಿದ್ದಕ್ಕೆ ತನ್ನ ಬಳಿಯಿದ್ದ ಚೂರಿಯಿಂದ ಮಾಲ್ವಿಗೆ ಇರಿದು ಪರಾರಿಯಾಗಿದ್ದಾನೆ. ಬಳಿಕ ಮಾಲ್ವಿಯನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. 

ಈ ಪ್ರಕರಣ ಸಂಬಂಧ ಯೋಗೇಶ್ ಸಿಂಗ್ ವಿರುದ್ಧ 307(ಕೊಲೆ ಯತ್ನ) ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರ್ಸೋವಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರಾಘವೇಂದ್ರ ಠಾಕೂರ್ ತಿಳಿಸಿದ್ದಾರೆ.