Asianet Suvarna News Asianet Suvarna News

Tumkur: ನೇಣಿಗೆ ಶರಣಾದ ಮೂವರು ಅನಾಥ ಸಹೋದರಿಯರು: 9 ದಿನದ ಬಳಿಕ ಶವ ಪತ್ತೆ

ಮಕ್ಕಳು ದೊಡ್ಡವರಾಗುವುದಕ್ಕೂ ಮುನ್ನ ಅಪ್ಪ- ಅಮ್ಮ ಸಾವು
ಅಜ್ಜಿಯ ಆಶ್ರಯದಲ್ಲಿ ಬೆಳೆದವರಿಗೆ ಸಾವನ್ನಪ್ಪಿದ ಅಜ್ಜಿಯ ನೆನಪು ಮಾಸಲಿಲ್ಲ
ಮನೆಯಲ್ಲಿಯೇ ನೇಣಿಗೆ ಶರಣಾದ ಮೂವರು ಸಹೋದರಿಯರು

Tumkur Three orphaned sisters surrendered to hanging bodies found after 9 days sat
Author
First Published Jan 19, 2023, 8:32 PM IST

ತುಮಕೂರು (ಜ.19): ಪೋಷಕರು ಇಲ್ಲದೇ ಮೂವರು ಅನಾಥ ಸಹೋದರಿಯರು ಕಳೆದ ಒಂಭತ್ತು ದಿನಗಳ ಹಿಂದೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಕೊಳೆತು ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಕನಹಾಲ್ ತಾಂಡ್ಯ ಬಳಿಯ ಒಂಟಿ ಮನೆಯಲ್ಲಿ ನಡೆದಿದೆ. ರಂಜಿತಾ(24) ಬಿಂದು (21), ಚಂದನ (18) ಆತ್ಮಹತ್ಯೆಗೆ ಶರಣಾದ ಸಹೋದರಿಯರು. ಈ ಮೂವರು ಪೋಷಕರಿಲ್ಲದೇ ಅನಾಥವಾಗಿ ಬೆಳೆಯುತ್ತಿದ್ದರು. ಕಳೆದ ಒಂಬತ್ತು ದಿನಗಳ ಹಿಂದೆ ಆತ್ಮಹತ್ಯೆ ಶಂಕೆಯಿದ್ದು, ಘಟನೆಯು ಇಂದು ಬೆಳಕಿಗೆ ಬಂದಿದೆ. ಈ ದುರ್ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿದೆ.

ಆಸರೆಯಾಗಿದ್ದ ಅಜ್ಜಿಯೂ ಸಾವು: ಮೃತ ಸಹೋದರಿಯರು ಚಿಕ್ಕವರಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದರು. ನಂತರ ಇವರು ತಮ್ಮ ಅಜ್ಜಿ ಜೊತೆಯಲ್ಲಿ ಬರಕನಹಾಳ್‌ ತಾಂಡದಲ್ಲಿ ವಾಸವಾಗಿದ್ದರು. ಕುಟುಂಬವನ್ನು ನಡೆಸಲು ಗಾರ್ಮೆಂಟ್ಸ್‌ ಸೇರಿ ವಿವಿಧೆಡೆ ಕೆಲಸ ಮಾಡುತ್ತಿದ್ದರು. ಕಿಬ್ಬನಹಳ್ಳಿ ಬಳಿಯ ಗಾರ್ಮೆಂಟ್ಸ್ ನಲ್ಲಿ ಇಬ್ಬರು ಸಹೋದರಿಯರು ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳ ಹಿಂದೆ ಅಜ್ಜಿಯೂ ಕೂಡ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ತಮ್ಮ ಮುಂದಿನ ಜೀವನವನ್ನು ನೆನಪು ಮಾಡಿಕೊಂಡು ಮೂವರು ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 

Vijayapura ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಮೇಲೆ ಗ್ಯಾಂಗ್‌ ರೇಪ್‌: ರಾತ್ರಿಯಿಡೀ ನರಳಾಡಿದ ಯುವತಿ

ಶವ ದುರ್ವಾಸನೆ ಬಳಿಕ ಘಟನೆ ಬೆಳಕಿಗೆ: ತಾಂಡ್ಯದಲ್ಲಿ ಒಂಟಿ ಮನೆ ಇದ್ದುದರಿಂದ ಇವರು ಮನೆಯಲ್ಲಿಇದ್ದಾರೆಯೋ ಅಥವಾ ಇಲ್ಲವೋ ಎಂಬುದನ್ನು ಯಾರೂ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ, 9 ದಿನಗಳ ಹಿಂದೆ ಒಂಟಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಮೂಡಿದೆ. ಆದರೆ, ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವಗಳು ಕೊಳೆತು ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಂದು ನೋಡಿದ್ದಾರೆ. ಆಗ, ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಇರುವುದನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ. ಈ ಘಟನೆ ಕುರಿತು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Follow Us:
Download App:
  • android
  • ios