ತುಮಕೂರಿನಲ್ಲಿ ಬಿಇ ಓದುತ್ತಿದ್ದ ಯುವಕ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ. ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಶ್ಲೀಲ ಚಿತ್ರ ನೋಡುವ ಚಟವಿದ್ದ ಕಾರಣ ಕೃತ್ಯ ಎಸಗುತ್ತಿದ್ದಾಗಿ ಬಾಯ್ಬಿಟ್ಟಿದ್ದಾನೆ.
ತುಮಕೂರು (ಮಾ.09): ಈತ ಭವಿಷ್ಯದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಾ ದೇಶ ನಿರ್ಮಿಸುವ ಜವಾಬ್ದಾರಿಯಿಂದ ಬಿಇ ಓದುತ್ತಿದ್ದ ಯುವಕ. ಆದರೆ, ಈತ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಾ ಮಹಿಳೆಯರ ಒಳ ಉಡುಪುಗಳನ್ನು ಕದಿಯೋದನ್ನೇ ಮಾಡಿಕೊಂಡಿದ್ದ ಕಾಯಕ. ಈತ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಈ ಘಟನೆ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರು ನಗರದಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಬಿಇ) ಅಭ್ಯಾಸ ಮಾಡುತ್ತಿದ್ದ ಯುವಕ ಶರತ್ (25) ಮಹಿಳೆಯರ ಒಳ ಉಡುಪುಗಳನ್ನು ಕದಿಯೋದನ್ನು ಕಾಯಕ ಮಾಡಿಕೊಂಡಿದ್ದನು. ಈತ ಸುತ್ತಮುತ್ತಲಿನ ಮನೆಗಳಲ್ಲಿ ಮಹಿಳೆಯರ ಒಳ ಉಡುಪು ಕದಿಯುತ್ತಿದ್ದನು. ಈತನ ಕೃತ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತುಮಕೂರಿನಲ್ಲಿ ವಿಚಿತ್ರ ಕಳ್ಳನನ್ನು ಹಿಡಿಯಲು ಬೆನ್ನಟ್ಟಿದ ಪೊಲೀಸರಿಗೆ ಶಾಕ್ ಆಗಿದೆ. ಈತ ಓದುವುದರಲ್ಲಿ ಬುದ್ಧಿವಂತ. ಭವಿಷ್ಯದಲ್ಲಿ ಇಂಜಿನಿಯರ್ ಆಗಿ ದೇಶ ಕಟ್ಟುವ ಜವಾಬ್ದಾರಿ ಹುದ್ದೆಗೆ ಹೋಗಲು ಅನುಕೂಲ ಆಗುವಂತೆ ಬಿಇ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಮಹಿಳೆಯರ ಉಡುಪು ಕದ್ದು ಸಿಕ್ಕಿಬಿದ್ದಿದ್ದಾನೆ ಎಂದು ಶಾಕ್ ಆಗಿದ್ದಾರೆ. ಆದರೆ, ಆತ ಮಾಡಿದ ಕೃತ್ಯ ಸಮಾಜಬಾಹಿರ ಆಗಿದ್ದರಿಂದ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಬಿಇ ಓದುತ್ತಿದ್ದ ಯುವಕ ಶರತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ, ಈ ಕೃತ್ಯ ಮಾಡುವುದಕ್ಕೆ ಕಾರಣವೇನೆಂದು ಬಾಯಿ ಬಿಡಿಸಿದ್ದಾರೆ.
ಇದನ್ನೂ ಓದಿ: Koppal:ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಗ್ಯಾಂಗ್ ರೇಪ್, ಆರೋಪಿಗಳ ಬಂಧನ
ಪೊಲೀಸರ ವಿಚಾರಣೆ ವೇಳೆ ಬಂಧಿತ ಯುವಕ ಶರತ್ ತಾನು ಚಿಕ್ಕನಾಯಕನಹಳ್ಳಿ ಮೂಲದವನಾಗಿದ್ದು, ಇಲ್ಲಿ ಬಿಇ ವ್ಯಾಸಂಗ ಮಾಡುತ್ತಾ ಬಾಡಿಗೆ ರೂಮಿನಲ್ಲಿ ವಾಸವಿದ್ದುದಾಗಿ ಹೇಳಿದ್ದಾನೆ. ಆದರೆ, ಓದಿನ ಜೊತೆಗೆ ನೀಲಿಚಿತ್ರ ನೋಡುವುದನ್ನು ಒಂದು ಚಟವಾಗಿ ಬೆಳೆಸಿಕೊಂಡಿದ್ದಾನೆ ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ಇದಾದ ನಂತರ ಅಶ್ಲೀಲ ಚಿತ್ರವನ್ನು ನೋಡಿದ ಅಮಲಿನಲ್ಲಿ ಮನೆಗಳ ಮೇಲೆ ಒಣಗಿ ಹಾಕುತ್ತಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದ್ದುಕೊಂಡು ಹೋಗಿ ಅದರಿಂದ ಕಾಮಸುಖ ಅನುಭವಿಸುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ.
