* ಎರಡು ವರ್ಷ ಚಿಕಿತ್ಸೆ ನೀಡಿದರೂ ಬದುಕಿ ಬರಲಿಲ್ಲ ಬಾಲಕಿ* ಸಾವು ಬದುಕಿನ ನಡುವೆ ಹೋರಾಟ* ಮರದ ಕೊಂಬೆ ಬಿದ್ದು ಗಂಭೀರ ಗಾಯಗೊಂಡಿದ್ದಳು 

ಬೆಂಗಳೂರು(ಫೆ. 10) ಈ ತಂದೆ-ತಾಯಿ ನೋವಿಗೆ ಸದ್ಯಕ್ಕೆಂತೂ ಸಮಾಧಾನ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಎರಡು ವರ್ಷ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಬಾಲಕಿ ಕೊನೆಗೂ ಬಾರದ ಲೋಕಕ್ಕೆ (Death) ತೆರಳಿದ್ದಾಳೆ.

ರೆಚೆಲ್ ಪ್ರಿಷಾ ಸತತ ಎರಡು ವರ್ಷ ನಿರಂತರ ಸಾವು ಬದುಕಿನ ನಡುವೆ (Hospital) ಆಸ್ಪತ್ರೆಯಲ್ಲಿದ್ದಳು . ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಾಲಕಿ ಜೀವ ಕಳೆದುಕೊಂಡಿದ್ದಾಳೆ. 2020 ಮಾರ್ಚ್ 11ರಂದು ಬಾಲಕಿ ಮೇಲೆ ಒಣಕೊಂಬೆ ಬಿದ್ದಿತ್ತು ತಂದೆಯ ಜೊತೆ ಬೈಕ್ ನಲ್ಲಿ (School) ಶಾಲೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಕೊಂಬೆಯೇ ಮೃತ್ಯುವಾಗಿ ಬಿದ್ದಿತ್ತು.

ರಾಮಮೂರ್ತಿನಗರದ (Bengaluru) ಕೌದೇನಹಳ್ಳಿಯಲ್ಲಿ ನಡೆದಿದ್ದ ಘಟನೆ ನಡೆದಿದ್ದು ತಲೆಗೆ ತೀವ್ರ ಗಾಯವಾದ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಒಂದೂವರೆ ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮನೆಗೆ ಕರೆದುಕೊಂಡು ಬರಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಿಸದೇ ಸಾವಿನ ಮನೆಯನ್ನು 10 ವರ್ಷದ ಬಾಲಕಿ ಸೇರಿದ್ದಾಳೆ.

Pakistan: ಗಂಡುಮಗುವಿಗಾಗಿ ಗರ್ಭಿಣಿ ಹಣೆಗೆ ಮೊಳೆ ಹೊಡೆದರು!

ಕಿಚ್ಚ ಸುದೀಪ್ ಅಭಿಮಾನಿ: ಸುದೀಪ್ (Kiccha sudeep) ಅಭಿಮಾನಿಯಾಗಿದ್ದ ಬಾಲಕಿ ರೆಚೆಲ್ ಪ್ರಿಷಾ ಕಿಚ್ಚನ ನೆಚ್ಚಿಕೊಂಡಿದ್ದಳು. ಜನವರಿ 11 ರಂದು ಸುದೀಪ್ ಗೆ ವಿಡಿಯೋ ಕಾಲ್ ಮಾಡಿದ್ದ ಪೋಷಕರು ಬಾಲಕಿಯ ಆಸೆ ಪೂರೈಸಿದ್ದರು.

ಬಳಿಕ ನನಗೆ ಪರಿಚಯದವರು ಇದ್ದಾರೆ, ಚಿಕಿತ್ಸೆ ಕೊಡಿಸಲು ಆದಷ್ಟು ಪ್ರಯತ್ನ ನಡೆಸುತ್ತೇನೆ ಎಂದು ಸುದೀಪ್ ಭರವಸೆ ನೀಡಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ದರು. ಸುಮಾರು 702 ದಿನ ಆಸ್ಪತ್ರೆಯಲ್ಲಿ ಇದ್ರು, ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಂದೆ ರಾಜು ನೋವು ತೋಡಿಕೊಂಡಿದ್ದಾರೆ. 

ಕೊರೋನಾ ಕಾಲದ ವರ್ತನೆ: ಒಂದೇ ಮನೆಯಲ್ಲಿ ಮೂರು ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು ಮೂರ್ನಾಲ್ಕು ದಿನಗಳಿಂದಲೂ ಬಿಬಿಎಂಪಿಗೆ ಒಂದೇ ಸಮನೆ ಕರೆ ಮಾಡುತ್ತಿದ್ದರು ಕ್ಯಾರೇ ಅನ್ನಲೇ ಇಲ್ಲ. ಪರಿಣಾಮ ಜೀವವೊಂದು ಬಲಿಯಾಗಿತ್ತು.

ಆಗ ಬರ್ತಿವಿ, ಈಗ ಬರ್ತೀವಿ ಎಂದು ಬಿಬಿಎಂಪಿ ಸಿಬ್ಬಂದಿಗಳು ಕಾಲಹರಣ ಮಾಡಿದ್ದಾರೆ. ನಾಲ್ಕುದಿನಗಳ ಕಾಲ ನರಳಾಡಿ ಮಹಿಳೆಯೊಬ್ಬರು ಪ್ರಾಣಬಿಟ್ಟಿದ್ದರು. ಬೆಂಗಳೂರು ವಿವಿ ಪುರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು,ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು.

ಮನೆಯಲ್ಲಿ ಮೂರು ಜನ ಇದ್ಧೇವೆ, ನಮಗೆ ಕೊರೋನಾ ಇದೆ ಆಸ್ಪತ್ರೆಗೆ ಕರ್ಕೊಂಡು ಹೋಗಿ ಎಂದು ಅಂಗಲಾಚಿದರು, ಬಿಬಿಎಂಪಿ ಕ್ಯಾರೇ ಅಂದಿಲ್ಲ. ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಬಿಬಿಎಂಪಿ ಸಬೂಬು ಹೇಳಿತ್ತು. ಉಸಿರಾಟದ ಸಮಸ್ಯೆಯಿಂದ ಮಹಿಳೆಯೊಬ್ಬರು ಪ್ರಾಣಬಿಟ್ಟಿದ್ದಿರು. 

ಕುಮಾರಸ್ವಾಮಿ ವಿಷಾದ: ಒಣ ಮರದ ಕೊಂಬೆ ತಲೆಯ ಮೇಲೆ ಬಿದ್ದು ಗಾಯಗೊಂಡು 702 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ರೆಚೆಲ್ ಪ್ರಿಷಾ ಇಂದು ಉಸಿರು ಚೆಲ್ಲಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಆ ಮಗು ಬದುಕಿ ಬರುತ್ತಾಳೆ ಎಂಬ ನಿರೀಕ್ಷೆ ನನ್ನದಾಗಿತ್ತು. ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕ್ಷೇಮ ವಿಚಾರಿಸಿದ್ದೆ. ಕೆಲ ಸಮಯ ಮಗುವಿನ ಜತೆಯಲ್ಲೇ ಸಮಯ ಕಳೆದಿದ್ದೆ. ಸತತ ಎರಡು ವರ್ಷ ನಿರಂತರವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ರಚೆಲ್ ಅಗಲಿಕೆ ಸಹಿಸಲು ನನಗೆ ಆಗುತ್ತಿಲ್ಲ. ಆ ಕಂದಮ್ಮನಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ. ಇಷ್ಟು ದೀರ್ಘಕಾಲ ಮಗು ಮನೆಗೆ ಬರುತ್ತಾಳೆ ಎಂದು ನಂಬಿ ಪರಿತಪಿಸಿದ್ದ ತಂದೆ-ತಾಯಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಇನ್ನಾದರೂ ಈ ಬಗೆಯ ಸಾವುಗಳು ನಿಲ್ಲಲಿ ಹಾಗೂ ಬಿಬಿಎಂಪಿಯ ಇಂಥ ನಿರ್ಲಕ್ಷ್ಯ ಮರುಕಳಿಸುವುದು ಬೇಡ ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ.

Scroll to load tweet…