Belagavi: ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು ನೀರಿನ ಸಂಪ್‌ಗೆ ಬಿದ್ದು ದುರಂತ ಸಾವು

ಳಗಾವಿ ಜಿಲ್ಲೆಯ ಸವದತ್ತಿಯ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ನೀರಿನ ಸಂಪ್‌ನಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ. 

Tragic death of two children after falling into water sump sat

ಬೆಳಗಾವಿ (ಜ.10): ಬೆಳಗಾವಿ ಜಿಲ್ಲೆಯ ಸವದತ್ತಿಯ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ನೀರಿನ ಸಂಪ್‌ನಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ. 

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರ ಗ್ರಾಮದ ಶ್ಲೋಕ ಶಂಭುಲಿಂಗಪ್ಪ ಗುಡಿ (4) ಮತ್ತು ಚಿದಾನಂದ ಪ್ರಕಾಶ ಸಾಲುಂಕೆ (4) ಎಂಬ ಇಬ್ಬರು ಮಕ್ಕಳು ಮೃತ ಪಟ್ಟಿದ್ದಾರೆ. ಗೊರ್ಲ ಹೊಸೂರು ಗ್ರಾಮದಲ್ಲಿ ಬೆಳಗ್ಗೆ ಸಾಮಾನ್ಯ ದಿನದಂತೆ ಅಂಗನವಾಡಿ ಶಾಲೆಗೆ ಹೋಗಿದ್ದ ಮಕ್ಕಳು, ಆಟವಾಡಲು ಶಾಲೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಾಲ್ಮೀಕಿ ಭವನದ ಕಟ್ಟಡದ ಮುಂಭಾಗ ನೀರಿನ ಸಂಪ್‌ ನಿರ್ಮಿಸಲಾಗಿದೆ. ಆದರೆ, ಸಂಪ್‌ ತೆದುಕೊಂಡಿದ್ದರಿಂದ ಈ ಸಂಪ್‌ನ ಬಳಿ ಆಟವಾಡಲು ತೆರಳಿದ್ದ ಮಕ್ಕಳು ಕಾಲು ಜಾರಿ ಬಿದ್ದು, ನೀರಿನೊಳಗೆ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸವದತ್ತಿ ಠಾಣೆಯ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Davanagere: ನೀರು ತುಂಬಿದ ಬಕೆಟ್‌ನೊಳಗೆ ಬಿದ್ದು ಮಗು ಸಾವು

ತಗ್ಗಿದ ಕೊಳವೆ ಬಾವಿ ಸಾವು: ರಾಜ್ಯದಲ್ಲಿ ಈ ಹಿಂದೆ ತೆರೆದ ಕೊಳವೆ ಬಾವಿಗಳಿಗೆ (ಬೋರ್‌ವೆಲ್‌ಗಳು) ಬಿದ್ದು ಮಕ್ಕಳು ಸಾವನ್ನಪ್ಪುವ ದುರಂತ ಘಟನೆಗಳು ಸಾಕಷ್ಟು ವರದಿ ಆಗುತ್ತಿದ್ದವು. ಆದರೆ, ಈ ಬಗ್ಗೆ ಸರ್ಕಾರ ನಿರಂತರ ಜಾಗೃತಿ ಮೂಡಿಸುತ್ತಿದ್ದ ಹಿನ್ನೆಲೆಯಲ್ಲಿ ರೈತರು ಮತ್ತು ಇತರೆ ನಾಗರಿಕರು ನೀರಿಲ್ಲದಿರುವ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವ ಮೂಲಕ ಮಕ್ಕಳ ಸಾವು ತಗ್ಗಿದೆ. ಆದರೆ, ನೀರಿನ ಸಂಪ್‌ಗಳು ಹಾಗೂ ಬಕೆಟ್‌ಗಳಿಗೆ ಮಕ್ಕಳು ಬಿದ್ದು ಸಾವನ್ನಪ್ಪುವ ಘಟನೆಗಳು ಆಗಿಂದಾಗ್ಗೆ ವರದಿ ಆಗುತ್ತಲೇ ಇವೆ. 

ಮಕ್ಕಳ ಬಗ್ಗೆ ಪೋಷಕರೇ ಎಚ್ಚರವಾಗಿರಿ:
ಪೋಷಕರು ಸ್ವತಃ ಎಚ್ಚರಿಕೆ ವಹಿಸದೇ ವಿನಃ ಮಕ್ಕಳ ಜೀವವನ್ನು ಅಪಾಯದಿಂದ ತಡೆಗಟ್ಟಲು ಸಾಧ್ಯವಿಲ್ಲ. ಕಳೆದ ಎರಡು ತಿಂಗಳ ಹಿಂದೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗ್ರಾಮವೊಂದರಲ್ಲಿ ಮನೆಯ ಮುಂದೆ ನೀರು ತುಂಬಿಸಿ ಇಟ್ಟಿದ್ದ ಬಕೆಟ್‌ನೊಳಗೆ 11 ತಿಂಗಳ ಮಗು ಬಿದ್ದು ಸಾವನ್ನಪ್ಪಿದ ದುರಂತ ಘಟನೆ ನಡೆದಿತ್ತು. ಇಂತಹ ಅನೇಕ ಘಟನೆಗಳು ನಡೆಯುತ್ತಿದ್ದು, ಪೋಷಕರು ಎಚ್ಚರವಹಿಸಬೇಕು.

ಮೆಟ್ರೋ ಪಿಲ್ಲರ್‌ ಬಿದ್ದು ಇಬ್ಬರ ಸಾವು, ಬಿಎಂಆರ್‌ಸಿಎಲ್‌, ಗುತ್ತಿಗೆದಾರರ ವಿರುದ್ಧ ಪ್ರಕರಣ!

ಅಕ್ರಮ ಮಸೀದಿ ತೆರವಿಗೆ ಪಟ್ಟು: ಬೆಳಗಾವಿಯ ಸಾರಥಿ ನಗರದ ಪ್ರಾರ್ಥನಾ ಸ್ಥಳ ತೆರವಿಗೆ ಸೋಮವಾರದ ಗಡುವು ನೀಡಿದ ಹಿಂದೂಪರ ಸಂಘಟನೆಗಳು ಅಯೋಧ್ಯಾ ಮಾದರಿ ಹೋರಾಟದ ಎಚ್ಚರಿಕೆ ನೀಡಿವೆ. ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಸಾರಥಿ ನಗರದಲ್ಲಿಂದು ನಡೆದ ಭಜರಂಗದಳ ಮತ್ತು ವಿಶ್ವಹಿಂದು ಪರಿಷತ್ ಸಭೆಯಲ್ಲಿ ಈ ಒಮ್ಮತದ ತೀರ್ಮಾನ ಮಾಡಲಾಯಿತು. ಕಳೆದ ಒಂದು ವರ್ಷದಿಂದ ಮನೆಯನ್ನು ಮಸೀದಿಯನ್ನಾಗಿಪರಿವರ್ತಿಸಿಕೊಂಡರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮ ಮಸೀದಿ ತೆರವು ಮಾಡದಿದ್ದರೆ ಅಂದು ಮೂರ್ತಿಯೊಂದಿಗೆ ಭವ್ಯ ಮೆರವಣಿಗೆ ಮೂಲಕ ಬಂದು ಅದೇ ಮಸೀದಿಯನ್ನು ಮಂದಿರವನ್ನಾಗಿ ಪರಿವರ್ತಿಸುವ ತೀರ್ಮಾನ ತಿಳಿಸಿದರು.

Latest Videos
Follow Us:
Download App:
  • android
  • ios