ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿರುವುದನ್ನು ಗಮನಿಸಿ ಈ ಕೃತ್ಯವನ್ನು ಎಸಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. 

ಮಲ್ಪೆ(ಫೆ.17):  ಇಬ್ಬರು ವ್ಯಕ್ತಿಗಳು ಗೂಡ್ಸ್‌ ರಿಕ್ಷಾವೊಂದರಲ್ಲಿ ವ್ಯಕ್ತಿಯೊಬ್ಬರ ಶವವನ್ನು ತಂದು ರಸ್ತೆ ಪಕ್ಕ ಎಸೆದು ಹೋದ ಘಟನೆ ಇಲ್ಲಿನ ಕೆಮ್ಮಣ್ಣು ಗ್ರಾಮದಲ್ಲಿ ಗುರುವಾರ ಹಾಡುಹಗಲೇ ನಡೆದಿದೆ. ಈ ಘಟನೆ ಪಕ್ಕದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಲ್ಪೆ ಠಾಣೆಯ ಪೊಲೀಸರು ತನಿಖೆ ನಡೆಸುತಿದ್ದಾರೆ.

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ರಸ್ತೆ ಪಕ್ಕ ಬಂದು ನಿಂತ ಗೂಡ್ಸ್‌ ರಿಕ್ಷಾದಿಂದ ಚಾಲಕ ಇಳಿದು ಸ್ವಲ್ಪ ದೂರ ಹೋಗಿ ನಿಲ್ಲುತ್ತಾನೆ, ಇನ್ನೊಬ್ಬ ಗೂಡ್ಸ್‌ ರಿಕ್ಷಾದ ಹಿಂಭಾಗದಿಂದ ವ್ಯಕ್ತಿಯ ಶವವನ್ನು ಎಳೆದು ರಸ್ತೆಯ ಪಕ್ಕ ಮಲಗಿಸುತ್ತಾನೆ. ನಂತರ ಇಬ್ಬರೂ ಗೂಡ್ಸ್‌ ಆಟೋ ಹತ್ತಿ ತಿರುಗಿಸಿ ಹಿಂದಕ್ಕೆ ಹೋಗುತ್ತಾರೆ.

Chikkamagaluru: ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಲೆ: ಆರೋಪಿ ಬಂಧನ

ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿರುವುದನ್ನು ಗಮನಿಸಿ ಈ ಕೃತ್ಯವನ್ನು ಎಸಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ತನಿಖೆಯ ಸಂದರ್ಭದಲ್ಲಿ ಆರೋಪಿಗಳಿಬ್ಬರು ಹೊರಜಿಲ್ಲೆಯಿಂದ ಬಂದ ಕಲ್ಲಂಗಡಿ ಹಣ್ಣು ವ್ಯಾಪಾರಿಗಳು ಎಂದು ತಿಳಿದು ಬಂದಿದೆ. ಮೃತಪಟ್ಟವ್ಯಕ್ತಿ ಯಾರು ಆತನನ್ನು ಯಾಕೆ ಈ ರೀತಿ ರಸ್ತೆ ಪಕ್ಕ ಎಸೆದು ಹೋದರು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಶವವನ್ನು ಸಾಮಾಜಿಕ ಕಾರ್ಯಕರ್ತ ಈಶ್ಚರ ಮಲ್ಪೆ ಅವರು ಅಲ್ಲಿಂದ ಸಾಗಿಸಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.