ಸಾಲ ನೀಡದ್ದಕ್ಕೆ ಮಾಲಿಕನನ್ನೇ ಕೊಲೆ ಮಾಡಿದ ಘಟನೆ  ಹಾಸನದಲ್ಲಿ ನಡೆದಿದೆ. ಟ್ರ್ಯಾಕ್ಟರ್ ಚಾಲಕ ಈ ಕೃತ್ಯ ಎಸಗಿದ್ದಾರೆ. 

ಹಾಸನ [ಜ.14]: ಸಾಲ ನೀಡದ್ದಕ್ಕೆ ಚಾಲಕನೊಬ್ಬ ಮಾಲೀಕನನ್ನು ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಜಾವಗಲ್‌ನಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಡ್ಡರಹಟ್ಟಿಯ ನಾಗೇಶ್‌ ಸಿದ್ಧಾಬೋವಿ (47) ಕೊಲೆಯಾದ ಮಾಲೀಕ. ಟ್ರ್ಯಾಕ್ಟರ್‌ ಚಾಲಕ ರಂಗಸ್ವಾಮಿ ಮಾಲೀಕರಾದ ನಾಗೇಶ್‌ ಬಳಿ 2 ಸಾವಿರ ರು. ಸಾಲ ಕೇಳಿದ್ದನು. 

ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮೊದಲು ಮೃತ ನಾಗೇಶ್‌, ರಂಗಸ್ವಾಮಿ ಮೇಲೆ ಕೈ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ರಂಗಸ್ವಾಮಿ ಚೂಪಾದ ಹಾರೆಯಿಂದ ಮಾಲೀಕನ ಪಕ್ಕೆಲುಬಿಗೆ ಚುಚ್ಚಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತೀವ್ರವಾಗಿ ಗಾಯಗೊಂಡ ನಾಗೇಶ್‌, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅರಸೀಕೆರೆ ತಾಲೂಕು ಜಾವಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.