ಕನ್ಯಾ ಪೂಜೆ ನೆಪ ಹೇಳಿ ಇಬ್ಬರು ಸಹೋದರಿಯರ ಕಿಡ್ನಾಪ್, ಮಕ್ಕಳಿಗಾಗಿ ತೀವ್ರ ಶೋಧ!
ನವರಾತ್ರಿ ಹಬ್ಬದಲ್ಲಿ ಮಕ್ಕಳಿಗೆ ಕನ್ಯಾಪೂಜೆ ಮಾಡಲಾಗುತ್ತದೆ. ಇದೇ ನೆಪದಲ್ಲಿ ಇಬ್ಬರು ಸಹೋದರಿಯರನ್ನು ದೇವಸ್ಥಾನದ ಆವರಣದಿಂದ ಅಪಹರಿಸಿದ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಕಿಡ್ನಾಪ್ ದಾಖಲಾಗಿದ್ದರೂ, ಇದುವರೆಗೂ ಮಕ್ಕಳ ಸುಳಿವಿಲ್ಲ.

ಭೋಪಾಲ್(ಅ.23) ನವರಾತ್ರಿ ಹಬ್ಬದ ಸಮಯದಲ್ಲಿ ಮಕ್ಕಳಿಗೆ ಕನ್ಯಾ ಪೂಜೆ ಮಾಡಲಾಗುತ್ತದೆ. ನವರಾತ್ರಿ ಹಬ್ಬಕ್ಕೆ ದೇವಸ್ಥಾನಕ್ಕೆ ಆಗಮಿಸಿದ ಇಬ್ಬರು ಸಹೋದರಿಯರನ್ನು ಕನ್ಯಾ ಪೂಜೆ ನೆಪ ಹೇಳಿ ಅಪಹರಿಸಿದ ಘಟನೆ ಮಧ್ಯಪ್ರದೇಶ ಭೋಪಾಲ್ ನಗರದಲ್ಲಿ ನಡೆದಿದೆ. ಇಬ್ಬರು ಮಕ್ಕಳನ್ನು ಮಾತಾ ಮಂದಿರದ ಆವರಣದಿಂದಲೇ ಅಪಹರಣ ಮಾಡಲಾಗಿದೆ.8 ವರ್ಷ ಹಾಗೂ 1 ವರ್ಷದ ಹೆಣ್ಣುಮಕ್ಕಳ ಅಹರಣ ಭೋಪಾಲ್ ನಗರವನ್ನೇ ಬೆಚ್ಚಿ ಬೀಳಿಸಿದೆ. ಕಿಡ್ನಾಪ್ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೂ ಆರೋಪಿಗಳ ಸುಳಿವಿಲ್ಲ. ಇತ್ತ ಮಕ್ಕಳಿಗಾಗಿಗ ಪೋಷಕರು ಕಣ್ಣೀರಿಡುತ್ತಿದ್ದಾರೆ.
ರಾತ್ಲಮ್ ಜಿಲ್ಲೆಯ ಲಕ್ಷ್ಮಿ ಹಾಗೂ ಮುಕೇಶ್ ದಂಪಯಿ ಇಬ್ಬರು ಮಕ್ಕಳನ್ನು ಅಪಹರಣ ಮಾಡಲಾಗಿದೆ. ಒಂದು ತಿಂಗಳ ಹಿಂದೆ ರಾತ್ಲಮ್ ಜಿಲ್ಲೆಯಿಂದ ಕೂಲಿ ಕೆಲಸ ಹುಡಿಕೊಂಡು ಭೋಪಾಲ್‌ಗೆ ಈ ಕುಟುಂಬ ಆಗಮಿಸಿತ್ತು. ಮಕೇಶ್ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. ನವರಾತ್ರಿ ಹಬ್ಬದ ಕಾರಣ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಇದೆ. ಹೀಗಾಗಿ ಪ್ರಸಾದ ಸ್ವೀಕರಿಸಲು ಕಳೆದ ಒಂದು ವಾರದಿಂದ ಇಬ್ಬರು ಮಕ್ಕಳು ದೇವಸ್ಥಾನಕ್ಕೆ ತೆರಳುತ್ತಿದ್ದರು.
ಸಿನಿಮೀಯ ರೀತಿಯಲ್ಲಿ ಬಳ್ಳಾರಿಯಲ್ಲಿ ಅಪಹರಣ ಕೊಪ್ಪಳದಲ್ಲಿ ಅತ್ಯಚಾರ!
ನವರಾತ್ರಿ ಪೂಜೆ, ದೇವರ ದರ್ಶನ ಜೊತೆಗೆ ಬಡ ಕುಟಂಬವಾಗಿರುವ ಕಾರಣ ಮಕ್ಕಳು ಪ್ರಸಾದ ಸ್ವೀಕರಿಸಿ ಹೊಟ್ಟೆ ತುಂಬಿಸಿಕೊಳ್ಳಲು ದೇವಸ್ಥಾನಕ್ಕೆ ಪ್ರತಿ ದಿನ ತೆರಳಿದ್ದರು. ಈ ಮಕ್ಕಳನ್ನು ಟಾರ್ಗೆಟ್ ಮಾಡಿದ್ದ ಅಪಹರಣಕಾರರು ದೇವಸ್ಥಾನದ ಆವರಣದಲ್ಲೇ ಕಿಡ್ನಾಪ್ ಮಾಡಲಾಗಿದೆ. ಕನ್ಯಾ ಪೂಜೆ ಮಾಡುತ್ತೇವೆ ಎಂದು ಇಬ್ಬರು ಮಹಿಳೆಯರು ಮಕ್ಕಳ ಬಳಿ ಹೇಳಿದ್ದಾರೆ. ಕನ್ಯಾ ಪೂಜೆ, ಸಿಹಿ, ಉಡುಗೊರೆ, ಊಟದ ಆಸೆಯಿಂದ ತಲೆಯಾಡಿಸಿದ ಮಕ್ಕಳ ಮಹಿಳೆಯರ ಜೊತೆ ತೆರಳಿದ್ದಾರೆ.
ಮಹಿಳೆಯರು ಆಟೋ ಮೂಲಕ ತೆರಳಿದ್ದಾರೆ. ಮಕ್ಕಳು ಮನೆಗೆ ಮರಳದ ಕಾರಣ ಪೋಷಕರು ರಾತ್ರೋರಾತ್ರಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿಯಲ್ಲಿ ವಿಚಾರಿಸಿದ್ದಾರೆ. ಆಡಳಿತ ಮಂಡಳಿ ಸೂಚನೆಯಂತೆ ತಕ್ಷಣವೇ ಪ್ರಕರಣ ದಾಖಲಿಸಿದ್ದಾರೆ. ಇತ್ತ ಪೊಲೀಸರು ದೇವಸ್ಥಾನಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಗಳನ್ನು ಪರೀಶೀಲನೆ ಮಾಡಿದೆ. ಈ ವೇಳೆ ಇಬ್ಬರು ಮಹಿಳೆಯರು ಮಕ್ಕಳನ್ನು ಕಿಡ್ನಾಪ್ ಮಾಡಿರುವ ದೃಶ್ಯ ಪತ್ತೆಯಾಗಿದೆ.
ಹಣಕ್ಕಾಗಿ ನೀಟ್ ತಯಾರಿಯಲ್ಲಿದ್ದ ವಿದ್ಯಾರ್ಥಿ ಅಪಹರಿಸಿ ಕೊಲೆ, ಶವ ಸೂಟ್‌ಕೇಸ್‌ನಲ್ಲಿಟ್ಟ ಹೋಟೆಲ್ ಮಾಲೀಕ!
ಪೊಲೀಸರು ದೇವಸ್ಥಾನ ಪಕ್ಕದ ರಸ್ತೆ ಸೇರಿದಂತೆ ಇತರ ಪ್ರದೇಶದ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಮಕ್ಕಳ ಸುಳಿವಿಲ್ಲ. ಇತ್ತ ಆರೋಪಿಗಳು ಎಲ್ಲಿಗೆ ತೆರಳಿದ್ದಾರೆ ಅನ್ನೋ ಮಾಹಿತಿಯೂ ಲಭ್ಯವಿಲ್ಲ. ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಇತ್ತ ಪೋಷಕರು ತಮ್ಮ ಇಬ್ಬರೂ ಮಕ್ಕಳ ಅಪಹರಣದಿಂದ ಅಸ್ವಸ್ಥರಾಗಿದ್ದಾರೆ.