Asianet Suvarna News Asianet Suvarna News

ನಿರ್ಮಲಾ ಸೀತಾರಾಮನ್ ಪಿಎ ಹೆಸರಲ್ಲಿ ಪರಿಚಯ; ಎಂಎಸ್ ಧೋನಿ ಮ್ಯಾನೇಜರ್‌ಗೆ ಲಕ್ಷ ಲಕ್ಷ ವಂಚನೆ!

ತಿರುಪತಿ ಸ್ಪೆಷಲ್ ದರ್ಶನ ಮಾಡಿಸೋದಾಗಿ ನಂಬಿಸಿ ಎಂಎಸ್ ಧೋನಿ ಮ್ಯಾನೇಜರ್‌ಗೆ ಲಕ್ಷ ಲಕ್ಷ ವಂಚನೆ! ಖತರ್ನಾಕ್ ಖದೀಮ ವಂಚಿಸಿದ್ದು ಹೇಗೆ ಗೊತ್ತಾ? ಆರೋಪಿ ವಿರುದ್ಧ ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ ಸ್ವಾಮಿನಾಥನ್

Tirupati Special Darshan Ms Dhonis manager Swaminath was cheated by miscreants at bengaluru rav
Author
First Published Feb 3, 2024, 8:22 AM IST

ಬೆಂಗಳೂರು (ಫೆ.3) : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಹೆಸರಲ್ಲಿ ಕಿಡಿಗೇಡಿಯೊಬ್ಬ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಮ್ಯಾನೇಜರ್‌ಗೆ ಬರೋಬ್ಬರಿ ಆರೂವರೆ ಲಕ್ಷ ರೂಪಾಯಿ ವಂಚನೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎಂ ಎಸ್ ಧೋನಿ ಮ್ಯಾನೇಜರ್ ಸ್ಚಾಮಿನಾಥನ್ ವಂಚನೆಗೊಳಗಾದವರು. ತಿರುಪತಿಯಲ್ಲಿ ಸ್ಪೆಷಲ್ ದರ್ಶನ  ಮಾಡಿಸಲಾಗುತ್ತದೆಂದು ನಂಬಿಸಿ ಲಕ್ಷ ಲಕ್ಷ ವಂಚನೆ ಮಾಡಿರುವ ಕಿಡಿಗೇಡಿ. ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದಿರುವ ಕೃತ್ಯ. ಹಣಪಡೆದು ಅತ್ತ ತಿರುಪತಿ ದರ್ಶನ ಮಾಡಿಸದೇ, ಹಣವೂ ವಾಪಸ್ ಕೊಡದೇ ವಂಚನೆ ಮಾಡಿರುವ ಹಿನ್ನೆಲೆ ಇದೀಗ ವಂಚಕನ ವಿರುದ್ಧ ಹೆಚ್‌ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬೆಳ್ತಂಗಡಿ: ಆಯುರ್ವೇದ ಪಂಡಿತರೆಂದು ನಂಬಿಸಿ 30 ಸಾವಿರ ವಂಚನೆ

ಕೇಂದ್ರ ಸಚಿವೆ ಹೆಸರೇಳಿ ವಂಚನೆ:

ಎಂಎಸ್ ಧೋನಿ ಮ್ಯಾನೇಜರ್‌ನ ಸಂಪರ್ಕಿಸಿರುವ ಆರೋಪಿ ತಾನು ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವರ ಬಳಿ ಪಿಎ ಆಗಿದ್ದೇನೆ ಅಂತಾ ಪರಿಚಯಿಸಿಕೊಂಡಿದ್ದಾನೆ. ತನ್ನದು ಸಾಯಿ ಟ್ರಸ್ಟ್ ಇದೆ ಕೈಲಾದ ಸಹಾಯ ಮಾಡಿ ಎಂದು ಮೂರು ಲಕ್ಷ ಹಣ ಪಡೆದಿದ್ದಾರೆ. ಅಲ್ಲದೇ  ಹನ್ನೆರಡು ಮಂದಿಗೆ ವಿಶೇಷ ದರ್ಶನ ಮಾಡಿಸ್ತೇವೆ ರೂಮ್ ವ್ಯವಸ್ಥೆ ಇರುತ್ತೆ. ಭೇಟಿ ಬಳಿಕ  ಪ್ರೋಟೋಕಾಲ್ ಮೂಲಕ ಯಾರನ್ನಾದ್ರು ಕಳಿಸಬಹುದು ಎಂದು ನಂಬಿಸಿರುವ ಕಿರಾತಕ. ಆ ಬಳಿಕ ಸ್ನೇಹಿತನನ್ನ ಕಳಿಸೋ ವಿಚಾರದ ನಿಟ್ಟಿನಲ್ಲಿ ಮೂರು ಲಕ್ಷ ರೂ. ಹಣವನ್ನು ಫೋನ್ ಪೇ ಮಾಡಿರುವ ಸ್ವಾಮಿನಾಥನ್.

ಮಗಳನ್ನ ಮದುವೆ ಮಾಡಿಕೊಡುವುದಾಗಿ ನಂಬಿಸಿ ಯುವಕನಿಗೆ ಬರೋಬ್ಬರಿ ₹25 ಲಕ್ಷ ಉಂಡೇನಾಮ ಹಾಕಿದ ಕುಟುಂಬ!

ಹಣ ಪಡೆದರೂ ತಿರುಪತಿ ದರ್ಶನ ಮಾಡಿಸದೇ, ಸಂಪರ್ಕಕ್ಕೂ ಸಿಗದೆ ಹಿನ್ನೆಲೆ ವಂಚನೆಗೊಳಗಾಗಿರುವುದು ಸ್ಪಷ್ಟವಾಗಿ ಹೀಗಾಗಿ ವಂಚಕನ ವಿರುದ್ಧ ಹೆಚ್‌ಎಸ್ ಆರ್‌ ಲೇಔಟ್ ಪೊಲೀಸ್ ಠಾಣೆಗೆ ಸ್ವಾಮಿನಾಥನ್ ದೂರು ನೀಡಿದ್ದಾರೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಮುಂದಾಗಿದ್ದಾರೆ.

Follow Us:
Download App:
  • android
  • ios