Asianet Suvarna News Asianet Suvarna News

ಭದ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗ ಮೂಲದ ಮೂವರು ಯುವಕರು ದುರಂತ ಸಾವು!

ಭದ್ರಾ ನದಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಪ್ರವಾಸಿಗರು ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ. ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಮೃತ ದುರ್ದೈವಿಗಳು.

three youths dies after raft sank in Bhadra backwater nr pura chikkamagaluru rav
Author
First Published Jun 19, 2024, 7:18 PM IST

ಚಿಕ್ಕಮಗಳೂರು (ಜೂ.19):ಭದ್ರಾ ನದಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಪ್ರವಾಸಿಗರು ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.

ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಮೃತ ದುರ್ದೈವಿಗಳು. ಮೂವರು ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ಮೂಲದವರು ಎನ್ನಲಾಗಿದೆ. ಬಕ್ರೀದ್ ಹಬ್ಬದ ಬಳಿಕ ಮೋಜು ಮಸ್ತಿಗೆ ಭದ್ರಾ ನದಿಯ ಬ್ಯಾಕ್ ವಾಟರ್‌ನಲ್ಲಿ ತೆಪ್ಪದಲ್ಲಿ ಹೋಗಿದ್ದ ಮೂವರು ಯುವಕರು. ಈ ವೇಳೆ ನಡುನೀರಿನಲ್ಲಿ ತೆಪ್ಪ ಮುಳುಗಿದೆ. ಯಾವುದೇ ಜೀವ ಸುರಕ್ಷಾ ಉಪಕರಣಗಳಿಲ್ಲದ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಯುವಕರು.

 

ಸ್ಕೂಟಿ-ಪಿಕಪ್ ವಾಹನ ನಡುವೆ ಭೀಕರ ಅಪಘಾತ; ಮಹಿಳೆ ದುರ್ಮರಣ!

ಘಟನೆ ಬಳಿಕ ವನ್ಯಜೀವಿ, ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಸ್ಥಳದಲ್ಲಿ ಮೂವರ ಶವಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ.ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Videos
Follow Us:
Download App:
  • android
  • ios