Asianet Suvarna News Asianet Suvarna News

ಸ್ಕೂಟಿ-ಪಿಕಪ್ ವಾಹನ ನಡುವೆ ಭೀಕರ ಅಪಘಾತ; ಮಹಿಳೆ ದುರ್ಮರಣ!

ಸ್ಕೂಟಿ-ಪಿಕಪ್ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟಿ ಚಾಲಕಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅರ್ವತೋಕ್ಲು ಗ್ರಾಮದ ಬಳಿ ನಡೆದಿದೆ.

Road accident woman died on the spot in kodagu district today rav
Author
First Published Jun 18, 2024, 11:22 PM IST

ಕೊಡಗು (ಜೂ.18): ಸ್ಕೂಟಿ-ಪಿಕಪ್ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟಿ ಚಾಲಕಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅರ್ವತೋಕ್ಲು ಗ್ರಾಮದ ಬಳಿ ನಡೆದಿದೆ.

ಪ್ರಭಾವತಿ (48) ಮೃತ ದುರ್ದೈವಿ. ಸ್ಕೂಟಿ ಹಿಂಭಾಗದಲ್ಲಿ ಕುಳಿತಿದ್ದ ಮಹಿಳೆಯ ಸ್ಥಿತಿಯೂ ಗಂಭೀರವಾಗಿದೆ. ಗೋಣಿಕೊಪ್ಪ ಗ್ರಾಮದವರಾದ ಪ್ರಭಾವತಿ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಪಿಕಪ್ ವಾಹನ ಡಿಕ್ಕಿಯೊಡೆದಿದೆ. ಡಿಕ್ಕಿ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಮಹಿಳೆ. ಅಪಘಾತದ ಬಳಿಕ ಎಸ್ಕೇಪ್ ಆಗಿರುವ ಪಿಕಪ್ ವಾಹನ ಚಾಲಕ. ಸ್ಥಳಕ್ಕೆ ಗೋಣಿಕೊಪ್ಪ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

'ನಾವೆಲ್ಲರೂ ಅವನನ್ನು ತುಂಬಾ ಇಷ್ಟಪಟ್ಟಿದ್ದೆವು ಆದರೆ.,' ದರ್ಶನ್ ಬಗ್ಗೆ ನಟ ಅನಿರುದ್ಧ್ ಮಾತು!

Latest Videos
Follow Us:
Download App:
  • android
  • ios