Mass Suicide: ಹಾಸನದಲ್ಲಿ ಒಂದೇ ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ
* ಹಾಸನದ ಹೇಮಾವತಿ ನಗರದಲ್ಲಿ ನಡೆದ ಘಟನೆ
* ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಹಾಸನ(ಫೆ.24): ಒಂದೇ ಕುಟುಂಬದ ಮೂವರು ಸಾಮೂಹಿಕವಾಗಿ ಆತ್ಮಹತ್ಯೆ(Suicide) ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹಾಸನ(Hassan) ನಗರದ ಹೇಮಾವತಿ ನಗರದಲ್ಲಿ ಇಂದು(ಗುರುವಾರ) ನಡೆದಿದೆ. ಅಪ್ಪ, ಅಮ್ಮ, ಮಗ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸತ್ಯಪ್ರಸಾದ್(54),ಅನ್ನಪೂರ್ಣ(50) ಹಾಗೂ ಗೌರವ್(21) ಮೃತ ದುರ್ದೈವಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
Suicide Cases: ಡ್ಯಾಂಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ: ಕಾರಣ?
ಆತ್ಮಹತ್ಯೆಯ ಕಾರಣದ ಬಗ್ಗೆ ಪರಿಶೀಲನೆ ಪೊಲೀಸರು ನಡೆಸುತ್ತಿದ್ದಾರೆ. ಮೃತದೇಹಗಳನ್ನ(Deadbody) ಹಾಸನ ನಗರದ ಹಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಬೆಳಗಾವಿ(Belagavi): ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರಾಯಬಾಗ ರೈಲು ನಿಲ್ದಾಣ ಬಳಿ ಜ.28 ರಂದು ನಡೆದಿತ್ತು. ಮೃತರನ್ನ ಬೀರಡಿ ಗ್ರಾಮದ ಸಾತಪ್ಪ ಸುತಾರ್(60), ಪತ್ನಿ ಮಹಾದೇವಿ(50), ಮಕ್ಕಳಾದ ದತ್ತಾತ್ರೇಯ (28), ಸಂತೋಷ (25) ಎಂದು ಗುರುತಿಸಲಾಗಿತ್ತು.
ಒಂದೇ ಕುಟುಂಬದ ವೃದ್ಧ ತಂದೆ, ತಾಯಿ, ಇಬ್ಬರು ಗಂಡು ಮಕ್ಕಳು ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ. ರಾತ್ರಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರಾಯಬಾಗ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ದಾವಣಗೆರೆ: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಂತಹದ್ದೇ ದುರ್ಘಟನೆ ನಡೆದಿದೆ. ಹೌದು, ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಹ ಘಟನೆ ನಗರದ ಭಾರತ್ ಕಾಲೋನಿಯಲ್ಲಿ ಕಳೆದ ವರ್ಷ ಸೆ.20 ರಂದು ನಡೆದಿತ್ತು.
Crime News ವಿಚಿತ್ರ ಘಟನೆ, ಮೊಬೈಲ್‌ಗಾಗಿ ಸಾವಿನ ಹಾದಿ ಹಿಡಿದ ಯುವಕ, ಯುವತಿ
ಕೃಷ್ಣ ನಾಯಕ(35) ಲಾರಿ ಚಾಲಕ, ಪತ್ನಿ ಸುಮಾ (30), ಮಗು ಧೃವ (6) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ. ಪತ್ನಿಯ ಅನಾರೋಗ್ಯದಿಂದ ಕುಟುಂಬ ಬೇಸತ್ತಿತ್ತು ಎಂದು ತಿಳಿದು ಬಂದಿತ್ತು.
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ನಿರಂತರ ಅಲೆದಾಡುತ್ತಿತ್ತು ಈ ಕುಟುಂಬ. ಆಸ್ಪತ್ರೆ ಖರ್ಚು ವೆಚ್ಚಕ್ಕೆ ಹೆದರಿದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿತ್ತು. ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿ ಕೃಷ್ಣನಾಯ್ಕ್ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ. ಘಟನಾ ಸ್ಥಳಕ್ಕೆ ಆರ್‌ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು.
ಮದ್ವೆಯಾಗಿ 10 ತಿಂಗಳಿಗೆ ಜೀವನ ಸಾಕಾಯ್ತೆ? ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ
ಕೊಡಗು: ಜೋಡಿ ಮದುವೆಯಾಗಿ ಕೇವಲ 10 ತಿಂಗಳು ಆಗಿವೆ ಅಷ್ಟೇ. ಆಗಲೇ ಅದ್ಯಾಕೆ ಜೀವನ ಬೇಸರ ಅನ್ನಿಸಿತ್ತೋ ಏನೋ. ಒಬ್ಬರ ಹಿಂದೊಬ್ಬರಂತೆ ಇಬ್ಬರೂ ಪ್ರಾಣ ಕಳೆದುಕೊಂಡ ಘಟನೆ ಫೆ.21 ರಂದು ನಡೆದಿತ್ತು.
ಹೌದು..ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನೊಂದ ಪತಿಯೂ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆಯ ಬಿರುನಾಣಿಯಲ್ಲಿ ಈ ಪ್ರಕರಣ ನಡೆದಿದ್ದು, ಯುವರಾಜ್ (25), ಪತ್ನಿ ಶಿಲ್ಪಾ (22) ಆತ್ಮಹತ್ಯೆ ಮಾಡಿಕೊಂಡಡವರು.