ಬೆಳಗಾವಿ(ಫೆ.14): ಕಾಣೆಯಾಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರ ಸೇತುವೆಯ ಬಳಿ ಘಟಪ್ರಭಾ ನದಿಯಲ್ಲಿ ಇಂದು(ಭಾನುವಾರ) ನಡೆದಿದೆ.  
ಮೃತರನ್ನ ಗೋಕಾಕ್ ತಾಲೂಕಿನ ದುರದುಂಡಿ ಗ್ರಾಮದ ಸಾವಿತ್ರಿ ಬನಾಜ್(33), ಪೂಜಾ (4), ಸಹನಾ(2) ಎಂದು ಗುರುತಿಸಲಾಗಿದೆ. 

ತಾಯಿ ಇಬ್ಬರು ಮಕ್ಕಳನ್ನ ತನ್ನ ಸೀರೆಗೆ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ದಿನಗಳ ಹಿಂದೆ ಇಬ್ಬರು ಮಕ್ಕಳೊಂದಿಗೆ ಸಾವಿತ್ರಿ ನಾಪತ್ತೆಯಾಗಿದ್ದರು. ಇಂದು ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ಬೆಳಗಾವಿ;  ಬಾಡಿ ಟು ಬಾಡಿ...ಗಂಡಸರ ವಿಕ್ನೇಸ್ ಇವರಿಗೆ ದೊಡ್ಡ ಉದ್ದಿಮೆ!

ಸ್ಥಳಕ್ಕೆ ಗೋಕಾಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.