ಮೈಸೂರಿನ ಚಾಮುಂಡಿಪುರಂ ಬಡಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ ಆಗಿರುವಂತಹ ಘಟನೆ ನಡೆದಿದೆ.  ಮೃತರನ್ನು 48 ವರ್ಷದ ಮಹದೇವಸ್ವಾಮಿ, 35 ವರ್ಷದ ಅನಿತಾ, ಪುತ್ರಿಯರಾದ 17 ವರ್ಷದ ಚಂದ್ರಕಲಾ ಮತ್ತು 15 ವರ್ಷದ ಧನಲಕ್ಷ್ಮೀ ಎಂದು ತಿಳಿದುಬಂದಿದೆ. 

ಮೈಸೂರು (ಆ.27): ಮೈಸೂರಿನ ಚಾಮುಂಡಿಪುರಂ ಬಡಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ ಆಗಿರುವಂತಹ ಘಟನೆ ನಡೆದಿದೆ.

 ಮೃತರನ್ನು 48 ವರ್ಷದ ಮಹದೇವಸ್ವಾಮಿ, 35 ವರ್ಷದ ಅನಿತಾ, ಪುತ್ರಿಯರಾದ 17 ವರ್ಷದ ಚಂದ್ರಕಲಾ ಮತ್ತು 15 ವರ್ಷದ ಧನಲಕ್ಷ್ಮೀ ಎಂದು ತಿಳಿದುಬಂದಿದೆ. 

ಮಹದೇವ ಸ್ವಾಮಿ ಶವ ಹಾಲ್‌ನಲ್ಲಿ ಪತ್ತೆಯಾಗಿದ್ದರೆ ಅನಿತ ಮೃತದೇಹ ಕುರ್ಚಿ ಮೇಲಿದ್ದು ದೊಡ್ಡ ಮಗಳು ಚಂದ್ರಕಲಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಚಿಕ್ಕ ಮಗಳು ಧನಲಕ್ಷ್ಮಿ ಮೃತದೇಹ ರೂಂನಲ್ಲಿ ಪತ್ತೆಯಾಗಿದೆ.

ಅನೈತಿಕ ಸಂಬಂಧ ಸಂಶಯ; ಗೆಳತಿಯನ್ನ ಕುಕ್ಕರ್‌ನಿಂದ ಬಡಿದು ಕೊಂದ ಪ್ರಿಯಕರ!

ಮೈಸೂರು ತಾಲ್ಲೂಕಿನ ಬರಡನಪುರ ಗ್ರಾಮದವರಾಗಿದ್ದ ಮಹದೇವಸ್ವಾಮಿ ಅವರು ಎರಡು ತಿಂಗಳ ಹಿಂದೆ ಚಾಮುಂಡಿಪುರಂ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ಕುಟುಂಬ ವಾಸವಾಗಿದ್ದರು. ಮಹದೇವಸ್ವಾಮಿ ಅವರು ಬಂಡಿಪಾಳ್ಯದಲ್ಲಿ ಮಳಿಗೆ ಹೊಂದಿದ್ದರು.

ಘಟನಾ ಸ್ಥಳಕ್ಕೆ ಪೊಲೀಸ್​ ಆಯುಕ್ತ ರಮೇಶ್ ಬಾನೋತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅತ್ಯಾಚಾರ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ದಾವಣಗೆರೆ ಪೊಲೀಸರು