ಬೀದರ್: ಲಕ್ಷಾಂತರ ರು. ಮಾದಕ ಪದಾರ್ಥ ಸಾಗಾಟ, ಮೂವರ ಸೆರೆ
ಬೀದರ್‌ನಲ್ಲಿ 23.49 ಕೆ.ಜಿ ಗಾಂಜಾ ವಶ, ಮಹಿಳೆ ಬಂಧನ, ಕಾರಲ್ಲಿ 49 ಲಕ್ಷ ಮೌಲ್ಯದ ಎಂಡಿಎಂಎ ಜಪ್ತಿ, ಇಬ್ಬರ ಸೆರೆ.
ಬೀದರ್(ಜು.08): ಜಿಲ್ಲೆಯ ಪೊಲೀಸರು ಮಾದಕ ವಸ್ತುಗಳ ಸಾಗಣೆ, ಮಾರಾಟ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಶುಕ್ರವಾರ ಸುಮಾರು 79ಲಕ್ಷ ರು. ವೆಚ್ಚದ ಮಾದಕ ವಸ್ತುಗಳನ್ನು ಜಪ್ತಿ ಮಾಡಿ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.
ಶುಕ್ರವಾರ ಕಚೇರಿಯ ಪರೇಡ್ ಗ್ರೌಂಡ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 65ರ ಹುಮನಾಬಾದ್ ಮಾರ್ಗವಾಗಿ ಸಾಗುತ್ತಿದ್ದಾಗ ರಾಮ್ ಆಂಡ್ ರಾಜ್ ಕಾಲೇಜು ಹತ್ತಿರ ಮುಂಬೈನಿಂದ ಹೈದ್ರಾಬಾದ್‌ಗೆ ಕಾರಿನಲ್ಲಿ ಎಂಡಿಎಂಎ ಮಾದಕ ಪದಾರ್ಥವನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದರು.
ಹುಮನಾಬಾದ: ಎತ್ತು, ಆಕಳು ಕದ್ದಿದ್ದ ಮೂವರು ಖದೀಮರ ಬಂಧನ
ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಹಾಗೂ ಹುಮನಾಬಾದ್‌ನ ಸಹಾಯಕ ಪೊಲೀಸ್ ಅಧೀಕ್ಷಕರಾದ ಶಿವಾಂಶು ರಜಪೂತ, ಹುಮನಾಬಾದ್ ಸಿಪಿಐ ಶರಣಬಸಪ್ಪ ಕೋಡ್ಲಾ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜನಗೊಡ ಪಾಟೀಲ್, ಗೆಜೆಟೆಡ್ ಅಧಿಕಾರಿಗಳಾದ ಡಾ. ನಾಗನಾಥ ಹುಲಸೂರೆ ಮತ್ತು ಸಂಚಾರಿ ಠಾಣೆ ಪಿಎಸ್‌ಐ ಅವರು ಕಾರು ತಡೆದು ಸುಮಾರು 49.9ಲಕ್ಷದ ಎಂಡಿಎಂಎ, 5 ಲಕ್ಷ ರು. ಬಲೋನೋ ಕಾರ್, 18 ಸಾವಿರ ರು. ಮೌಲ್ಯದ ಎರಡು ಮೊಬೈಲ್, 500ರು. ಮೌಲ್ಯದ ಚಿಕ್ಕ ತೂಕ ಮಾಡುವ ಯಂತ್ರ ಹೀಗೆ ಒಟ್ಟು 55.08ಲಕ್ಷ ರು. ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮುಂಬೈ ಮೂಲದ ಒಬ್ಬ ಹಾಗೂ ತೆಲಂಗಾಣಾದ ಜಹೀರಾಬಾದ್ ಮೂಲದ ಇನ್ನೊರ್ವ ಹೀಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್‌ಪಿ ಅವರು ಶ್ಲಾಘಿಸಿದ್ದಾರೆ.
ಅಕ್ರಮ ಗಾಂಜಾ ಮಾರಾಟ ಪ್ರಕರಣ ಭೇದಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ಅಧಿಕಾರಿ ಮಹೇಶ ಮೇಘಣ್ಣನವರ್ ಹಾಗೂ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಬೀದರ್‌ನಲ್ಲಿ 23.49 ಕೆಜಿ ಗಾಂಜಾ ಜಪ್ತಿ:
ರೌಡಿ ನಿಗ್ರಹ ದಳ ಬೀದರ್ ನಗರ ತಂಡದ ಅಧಿಕಾರಿ ಸಿಪಿಐ ಹನುಮರೆಡ್ಡಪ್ಪ ಹಾಗೂ ಅವರ ತಂಡವು ಜು.4ರಂದು ಖಚಿತ ಮಾಹಿತಿ ಮೇರೆಗೆ ಬೀದರ್ ನಗರದ ಮಗದೂಮ್‌ಜಿ ಕಾಲೋನಿಯಲ್ಲಿ ದಾಳಿ ಮಾಡಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬ ಮಹಿಳೆಯನ್ನು ದಸ್ತಗಿರಿ ಮಾಡಿ ಅವಳ ಬಳಿಯಿಂದ 23.49ಲಕ್ಷ ಮೌಲ್ಯದ 23.49 ಕೆ.ಜಿ ಗಾಂಜಾ, 20,500ರು. ನಗದು ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.