Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಮನೆ ಬಾಗಿಲು ತಟ್ಟಿದ ವ್ಯಕ್ತಿ ಕೊಲೆ, ಮೂವರ ಬಂಧನ

ಘಟನೆಗೆ ಸಂಬಂಧಿಸಿದಂತೆ ಮಂಜುನಾಥನ ಸಂಬಂಧಿಗಳು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಅಂಬರೀಶ, ಸುನಿಲ್, ಕೈಲಾಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಮೂವರನ್ನೂ ಬಂಧಿಸಿದ ಪೊಲೀಸರು

Three Arrested For Murder Case in Chikkaballapur grg
Author
First Published Dec 17, 2023, 4:38 AM IST

ಚಿಕ್ಕಬಳ್ಳಾಪುರ(ಡಿ.17):  ಶುಕ್ರವಾರ ಮಧ್ಯ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಮನೆಗಳ ಬಾಗಿಲು ಬಡಿಯುತ್ತಿದ್ದ ವ್ಯಕ್ತಿಯನ್ನು ಅಕ್ಕಪಕ್ಕದ ನಿವಾಸಿಗಳು ಹಿಡಿದು ಥಳಿಸಿದ ಕಾರಣ ಆ ವ್ಯಕ್ತಿ ಮೃತಪಟ್ಟ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯ ಸ್ವಾಗತ್ ಬಡಾವಣೆಯಲ್ಲಿ ನಡೆದಿದೆ. 

ಮೃತನನ್ನು ಬೆಂಗಳೂರಿನ ಆರ್.ಟಿ.ನಗರದ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ಮದ್ಯವಸನಿಯಾಗಿದ್ದ ಈತನನ್ನು ಪತ್ನಿ ಹಾಗೂ ಮಕ್ಕಳು 7 ತಿಂಗಳ ಹಿಂದೆಯೇ ಮನೆಯಿಂದ ಆಚೆ ಹಾಕಿದ್ದರಂತೆ. 

ಮಹಿಳೆ ಮೇಲೆ ರೇಪ್‌ ಮಾಡಿ, ಮದ್ಯ ಸುರಿದು ಬೆಂಕಿ ಹಚ್ಚಿದ ಪಾಪಿ!

ಮಂಜುನಾಥ ಗೌರಿಬಿದನೂರು ನಗರದಲ್ಲಿ ಕೂಲಿ-ನಾಲಿ ಮಾಡಿಕೊಂಡು ಮದ್ಯ ವ್ಯಸನಿಯಾಗಿದ್ದ. ಕಳ್ಳನೆಂದು ಭಾವಿಸಿ ಈತನನ್ನು ಹೊಡೆದು ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮಂಜುನಾಥನ ಸಂಬಂಧಿಗಳು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಅಂಬರೀಶ, ಸುನಿಲ್, ಕೈಲಾಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಮೂವರನ್ನೂ ಬಂಧಿಸಿದ್ದಾರೆ.

Follow Us:
Download App:
  • android
  • ios