Haveri: ದಾಖಲೆ ಇಲ್ಲದ 58 ಲಕ್ಷ ರೂ. ಹಣ ಪತ್ತೆ: ಮೂವರ ಬಂಧನ
* ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು
* ಅಕ್ರಮ ಎಸಗುವ ಉದ್ದೇಶದಿಂದ ಸೂಕ್ತ ದಾಖಲೆಗಳಿಲ್ಲದ ಹಣ ಇಟ್ಟುಕೊಂಡಿದ್ದ ಆರೋಪಿಗಳು
* ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರ ದಾಳಿ
ಹಾವೇರಿ(ಮೇ.14): ಹಾವೇರಿ(Haveri) ನಗರದ ಶಿವಶಕ್ತಿ ಪ್ಯಾಲೆಸ್ ಲಾಡ್ಜ್‌ನಲ್ಲಿ ದಾಖಲೆ ಇಲ್ಲದ 58 ಲಕ್ಷ ರೂ ಹಣ ಪತ್ತೆಯಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಪೊಲೀಸರು(Police) ದಾಖಲೆ ಇಲ್ಲದ ಹಣ ಇಟ್ಟುಕೊಂಡಿದ್ದ ನಾಲ್ವರನ್ನು ವಶಕ್ಕೆ ಪಡೆದು ತನಿಖೆಯನ್ನ ಆರಂಭಿಸಿದ್ದಾರೆ.
ಯಾವುದೋ ಅಕ್ರಮ ಎಸಗುವ ಉದ್ದೇಶದಿಂದ ಆರೋಪಿಗಳು(Accused) ಸೂಕ್ತ ದಾಖಲೆಗಳಿಲ್ಲದ ಹಣ ಇಟ್ಟುಕೊಂಡಿದ್ರು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ(Arrest) ಅರೋಪಿಗಳನ್ನ ರವಿ, ಗಣಪತಿ, ಅನಿಲ್, ಚನ್ನಪ್ಪ ಅಂತ ಗುರುತಿಸಲಾಗಿದೆ.
ಬೆಂಗಳೂರು ಯುವತಿಯ ಮೇಲೆ ಆಸಿಡ್ ಎರಚಿದ್ದ ಪ್ರಕರಣ: ಆರೋಪಿ ನಾಗೇಶ್ ಬಂಧನ
ಮೂವರು ಆರೋಪಿಗಳು ಬೆಳಗಾವಿ ಮೂಲದವರು, ಒಬ್ಬ ಬೆಂಗಳೂರಿನ ಕೆಂಗೇರಿಯವನು ಅಂತ ತಿಳಿದು ಬಂದಿದೆ. 58 ಲಕ್ಷ ರೂ. ಹಣ, ಹಣ ಎಣಿಸುವ ಎಲೆಕ್ಟ್ರಾನಿಕ್ ಯಂತ್ರ ವಶಕ್ಕೆ ಪಡೆದಿರೋ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರೋ ಪೊಲೀಸರು ಈ ಕುರಿತು ಆದಾಯ ತೆರಿಗೆ ಇಲಾಖೆ(Department of Income Tax) ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ.
ಗೋವಾದಲ್ಲಿ ರಷ್ಯನ್ ಬಾಲಕಿ ಮೇಲೆ ರೇಪ್: ಗದಗ ವ್ಯಕ್ತಿ ಬಂಧನ
ಪಣಜಿ/ಗದಗ: ಉತ್ತರ ಗೋವಾದಲ್ಲಿರುವ(Goa) ಅರಂಬೋಳ್ ರೆಸಾರ್ಟ್‌ನಲ್ಲಿ ರಷ್ಯಾ(Russia) ಮೂಲದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ(Rape) ಎಸಗಿದ್ದ ಆರೋಪಿಯನ್ನು ಕರ್ನಾಟಕದ(Karnataka) ಗದಗ ಜಿಲ್ಲೆ ಮಜ್ಜೂರ ತಾಂಡಾದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.
ಮೇ. 6ರಂದು ಈ ಲೈಂಗಿಕ ದೌರ್ಜನ್ಯ ಪ್ರಕರಣ(Sexual Harassment Case) ನಡೆದಿದ್ದು, ಸಂತ್ರಸ್ತೆಯ(Victim) ತಾಯಿ ಮೇ. 9ರಂದ ದೂರು ನೀಡಿದ್ದರು. ಮೇ 10ರಂದು ಪೆರ್ನೇಮ್ ಪೊಲೀಸರು ಆರೋಪಿ ರವಿ ಲಮಾಣಿ(28)ಯನ್ನು ಗದಗ(Gadag) ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆತನ ಹುಟ್ಟೂರು ಮಜ್ಜೂರ ತಾಂಡಾದಲ್ಲಿ ಬಂಧಿಸಿದ್ದಾರೆ
‘ರೆಸಾರ್ಟ್‌ನಲ್ಲಿ ರೂಮ್ ಅಟೆಂಡರ್ ಆಗಿದ್ದ ಆರೋಪಿ ರವಿ, ಸಂತ್ರಸ್ತೆಯ ತಾಯಿ ಮನೆಗೆ ಅಗತ್ಯ ವಸ್ತುಗಳನ್ನು ತರಲು ಹತ್ತಿರದ ಅರಂಬೋಳ್ ಮಾರುಕಟ್ಟೆಗೆ ಹೋಗಿದ್ದಾಗ ರೂಮ್‌ಗೆ ನುಗ್ಗಿದ್ದ. ಈ ವೇಳೆ, ರೆಸಾರ್ಟ್‌ನ ಈಜುಕೊಳ ಮತ್ತು ಕೊಠಡಿಯ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನಂತರ ಆರೋಪಿ ತವರೂರಿಗೆ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದ್ದಾರೆ.