ಹುಬ್ಬಳ್ಳಿ(ಮೇ.17): ಹಣಕಾಸಿನ ವಿಷಯಕ್ಕಾಗಿ ನಡೆದ ಗಲಾಟೆಯಲ್ಲಿ ನಗರದ ನೂರಾನಿ ಪ್ಲಾಟ್‌ ಮುಸ್ತಾಕ್‌ ಅಲಿ ಅತ್ತಾರ (23) ಎಂಬಾತನಿಗೆ ಆತನ ಸ್ನೇಹಿತರೆ ಚಾಕು ಇರಿದು ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ಬ್ರಹ್ಮಾನಂದ ಶಾಲೆ ಬಳಿ ನಡೆದಿದೆ. 

ಹಳೇ ಹುಬ್ಬಳ್ಳಿಯ ಮಲ್ಲಿಕ ಮತ್ತು ಅವನ ಸ್ನೇಹಿತ ಚಾಕು ಇರಿದ ಆರೋಪಿಗಳು. ಮುಸ್ತಾಕ್‌ಅಲಿ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಇಬ್ಬರು, ಬೆನ್ನಿಗೆ ಚಾಕು ಇರಿದಿದ್ದಾರೆ. 

ಅನ್ಯ ಜಾತಿ ಪ್ರೇಮ : ಕುಟುಂಬದವರಿಂದಲೇ ಹತ್ಯೆಯಾದಳಾ ಯುವತಿ..?

ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರೂ, ಸ್ಪಂದಿಸದೆ ಮೃತಪಟ್ಟಿದ್ದಾರೆ. ಮುಸ್ತಾಕ್‌ಅಲಿ ಅವರ ತಂದೆ ಜಮೋಲ್ಸಾಬ್‌ ಅತ್ತಾರ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.