Asianet Suvarna News Asianet Suvarna News

ಕಲಬುರಗಿ: ಲಾರಿ ತಡೆದು ದರೋಡೆ ಮಾಡುತ್ತಿದ್ದ ಖದೀಮರು, ಪತ್ರಕರ್ತ ಸೇರಿ ಮೂವರ ಬಂಧನ

ಅಕ್ಕಿ ಲಾರಿ ತಡೆದು ಚಾಲಕನ ಮೇಲೆ ಹಲ್ಲೆ ಮಾಡಿ ಐದು ಲಕ್ಷ ರೂ. ಗೆ ಡಿಮ್ಯಾಂಡ್ ಇಟ್ಟಿದ್ದ ಖದೀಮರು| ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್ ಗ್ರಾಮದ ಬಳಿ ನಡೆದ ಘಟನೆ| ಹಣ ಕೊಡೋಕೆ ಒಪ್ಪದಿದ್ದಾಗ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಸಿದ್ದ ದರೋಡೆಕೋರರು| 

Three Accused Arrested for Truck Robbery in Jevargi in Kalaburagi District grg
Author
Bengaluru, First Published Oct 28, 2020, 2:03 PM IST

ಕಲಬುರಗಿ(ಅ.28): ಲಾರಿ ತಡೆದು ದರೋಡೆ ಮಾಡುತ್ತಿದ್ದ ಪತ್ರಕರ್ತ, ರೌಡಿಶೀಟರ್ ಸೇರಿದಂತೆ ಮೂವರು ಖದೀಮರು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್ ಗ್ರಾಮದ ಬಳಿ ಇಂದು(ಬುಧವಾರ) ನಡೆದಿದೆ. ಈ ಖದೀಮರ ತಂಡ ಕಲ್ಲೂರ್- ಅವರಾದ್ ಗ್ರಾಮಗಳ ಮಧ್ಯೆ ಲಾರಿಗಳನ್ನ ತಡೆದು ದರೋಡೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಸಂಯುಕ್ತ ಕರ್ನಾಟಕ ಪತ್ರಿಕೆ ತಾಲೂಕಾ ವರದಿಗಾರ ಮತ್ತು ಕಲ್ಯಾಣ ಕರ್ನಾಟಕ ವೆಬ್ ನ್ಯೂಸ್ ಚಾನೆಲ್‌ನ ವರದಿಗಾರ ಗಿರೀಶ್ ತುಂಬಗಿ, ರವಿಚಂದ್ರ ಹಾಗೂ ರೌಡಿಶೀಟರ್ ಗುಂಡು ಗುತ್ತೇದಾರ್ ಬಂಧಿತ ಆರೋಪಿಗಳಾಗಿದ್ದಾರೆ. 
ಈ ಖದೀಮರ ತಂಡ ಅಕ್ಕಿ ಲಾರಿ ತಡೆದು ಚಾಲಕನ ಮೇಲೆ ಹಲ್ಲೆ ಮಾಡಿ ಐದು ಲಕ್ಷ ರೂ. ಗೆ ಡಿಮ್ಯಾಂಡ್ ಇಟ್ಟಿತ್ತು. ಹಣ ಕೊಡೋಕೆ ಒಪ್ಪದಿದ್ದಾಗ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಸಿದ್ದರು ಎಂದು ಹೇಳಲಾಗಿದೆ. ದರೋಡೆಕೋರರಿಗೆ ಹೆದರಿದ ಲಾರಿ ಮಾಲೀಕ 3.50 ಲಕ್ಷ ರೂ ಹಣವನ್ನ ಆನ್‌ಲೈನ್ ಮೂಲಕ ಖದೀಮರಿಗೆ ಪಾವತಿಸಿದ್ದರು. ಹಲ್ಲೆ ಮತ್ತು ಹಣಕಾಸಿನ ವ್ಯವಹಾರವನ್ನ ಮೊಬೈಲ್‌ನಲ್ಲಿ ಚಿತ್ರಿಕರಿಸಲಾಗಿತ್ತು. 

ಮಹಾರಾಷ್ಟ್ರದ ಚಾಳಿಗೆ ಮೊದ್ಲು ಮೂಗುದಾರ ಹಾಕ್ರಿ: ಮಹಿಳೆಯ ಮಾತಿಗೆ ದಂಗಾದ ಸಿದ್ದರಾಮಯ್ಯ..!

ಈ ಸಂಬಂಧ ಲಾರಿ ಮಾಲೀಕ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಲಾರಿ ಮಾಲೀಕನ ದೂರಿನ ಮೇರೆಗೆ ಜೇವರ್ಗಿ ಠಾಣೆಯ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಬಂಧಿತರಿಂದ ನಗದು ಹಣ, ಕಾರು ಮತ್ತು ಯು ಟ್ಯೂಬ್ ಚಾನೆಲ್‌ನ ಲೋಗೋವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 
 

Follow Us:
Download App:
  • android
  • ios