ಆರೋಪಿಗಳಿಂದ 3.3 ಕೆ.ಜಿ. ಮಾದಕ ವಸ್ತು ಗಾಂಜಾ, ಮೂರು ಮೊಬೈಲ್‌, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ| ಹೊರಗಿನಿಂದ ಗಾಂಜಾವನ್ನು ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು| ವೀಸಾ ಮತ್ತು ಪಾಸ್‌ಪೋರ್ಟ್‌ ಅವಧಿ ಮುಕ್ತಾಯವಾಗಿದ್ದು, ನಗರದಲ್ಲಿ ಅಕ್ರಮವಾಗಿ ವಾಸವಿದ್ದ ನೈಜೀರಿಯಾ ಪ್ರಜೆ| 

ಬೆಂಗಳೂರು(ಮಾ.05):  ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಮೂವರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಪ್ರಜೆ ವ್ಯಾಲೈಂಟನ್‌ ಚಿನೆದು (31), ಕಾಡುಗೋಡಿಯ ಸಿರಾಜ್‌ (35), ತಮಿಳುನಾಡಿನ ಮೇಘನಾಥನ್‌ (24) ಬಂಧಿತರು. ಆರೋಪಿಗಳಿಂದ 3.3 ಕೆ.ಜಿ. ಮಾದಕ ವಸ್ತು ಗಾಂಜಾ, ಮೂರು ಮೊಬೈಲ್‌, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಾದಕ ವಸ್ತು ಮಾರಾಟ: ಇಬ್ಬರು ನೈಜೀ​ರಿಯಾ ಪ್ರಜೆ​ಗ​ಳ ಬಂಧನ

ಕೆ.ಚನ್ನಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ನೈಜೀರಿಯಾ ಪ್ರಜೆ ವ್ಯಾಲೈಂಟನ್‌ ತಮಿಳುನಾಡು ಮೂಲದ ಮೇಘನಾಥನ್‌ ಹಾಗೂ ಸಿರಾಜ್‌ ಸಂಪರ್ಕ ಹೊಂದಿದ್ದ. ಹೊರಗಿನಿಂದ ಗಾಂಜಾವನ್ನು ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಆರೋಪಿಗಳು ಸಾರಾಯಿಪಾಳ್ಯದ ಸಾದಿಕ್‌ ಮಸೀದಿ ಬಳಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದರು. 

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ನೈಜೀರಿಯಾ ಪ್ರಜೆಯ ವೀಸಾ ಮತ್ತು ಪಾಸ್‌ಪೋರ್ಟ್‌ ಅವಧಿ ಮುಕ್ತಾಯವಾಗಿದ್ದು, ನಗರದಲ್ಲಿ ಅಕ್ರಮವಾಗಿ ವಾಸವಿದ್ದ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.