ಬೆಂಗಳೂರು(ಅ.  20)  ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿಮಣಿಯರಾದ ಸಂಜನಾ ಮತ್ತು ರಾಗಿಣಿ ಹಾಘೂ ಡಿಜೆ ಹಳ್ಳಿ ಗಲಭೆಕೋರರಿಗೆ ಬೇಲ್ ನೀಡಿ.. ಇಲ್ಲ ಸ್ಫೋಟ ಮಾಡುತ್ಥೇವೆ ಎಂಬ ಬೆದರಿಕೆ ಪತ್ರ ದೊಡ್ಡ ಸುದ್ದಿ ಮಾಡಿತ್ತು.

ಪತ್ರ ಕಳಿಸಿದ ಆರೋಪಿಗಳ ಜಾಡು ಹಿಡಿದ ಪೊಲೀಸರು ನಾಲ್ವರನ್ನು ಬಂಧಿಸಿ ಕರೆತಂದಾಗ ಅಚ್ಚರಿ ಮಾಹಿತಿ ಗೊತ್ತಾಗಿದೆ. ತಮ್ಮೊಳಗಿನ ಆಸ್ತಿ ವಿವಾದಕ್ಕೆ ಈ ರೀತಿ ಪತ್ರ ಬರೆದಿದ್ದರಂತೆ!

ರಾಜಶೇಖರ್, ವೇದಾಂತ್, ಶಿವಪ್ರಕಾಶ್ , ಬಸವಲಿಂಗಯ್ಯ  ಎಂಬುವರನ್ನ ಕರೆತಂದು  ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ.  ವಿಚಾರಣೆ ನಂತರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್  ವಿವರ ನೀಡಿದ್ದಾರೆ.

ಯಾರೊ ಒಂದು ಬೆದರಿಕೆ ಪತ್ರ ಹಾಗೂ ಸ್ಫೋಟಕ ಜಡ್ಜ್ ಹೆಸರಿಗೆ ಪೋಸ್ಟ್ ಮಾಡಿದ್ದರು  ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಪತ್ರ ಬರೆದವ ತಿಪಟೂರು ಮೂಲದ ರಾಜಶೇಖರ್ ಅನ್ನೋದು ಪತ್ತೆಯಾಗಿದೆ. ತಾನೇ ಮಾಡಿರೋದಾಗಿ ರಾಜಶೇಖರ್ ತಪ್ಪೊಪ್ಪಿಕೊಂಡಿದ್ದಾನೆ. 

ಆಸ್ತಿ ವಿವಾದಕ್ಕಾಗಿ ಈ ರೀತಿ ಮಾಡಿದ್ದಾನೆ. ಈ ಹಿಂದೆ ಮೂರು ಪ್ರಕರಣ ಈತನ ವಿರುದ್ಧವಿದೆ 2019 ರಲ್ಲಿ ಪೋಕ್ಸೋ ಕೇಸ್ ಕೂಡ ಈತನ ವಿರುದ್ಧ ದಾಖಲಾಗಿದೆ ರಾಜಶೇಖರ್  ನ  ದಸ್ತಗಿರಿ ಮಾಡಿ ಹೆಚ್ವಿನ ತನಿಖೆ ಮಾಡಲಾಗ್ತಿದ. ಎರಡು ತಿಂಗಳನಿಂದ ಪತ್ರ ಕಳಿಸುವ ಪ್ಲಾನ್ ನಡೆದಿತ್ತು. ಬವಲಿಂಗಪ್ಪ ಎನ್ನುವರ ಮೊದಲ ಹೆಂಡತಿಯ ಮಗಳನ್ನ ರಾಜಶೇಖರ್  ಮದುವೆ ಆಗಿದ್ದ.  ಎರಡನೆ ಹೆಂಡತಿಯ ಮಗಳನ್ನ ರಮೇಶ್ ಮದುವೆ ಆಗಿದ್ದ. ಈ ವೇಳೆ ರಮೇಶ್ ಅಪ್ರಾಪ್ತೆಯನ್ನ ಮದುವೆ ಆಗಿದ್ದಾನೆ ಎಂದು ರಾಜಶೇಖರ್ ಕ್ಯಾತೆ ತೆಗೆದಿದ್ದ.ರಮೇಶ್ ಹೆಂಡತಿ ರಾಜಶೇಖರೇ ನನಗೆ ಲೈಂಗಿಕ ಕಿರುಕುಳ ನೀಡ್ತಾ ಇದ್ದಾನೆ ಎಂದು ದೂರು ನೀಡಿದ್ದಳು.

ಬಾಂಬ್ ಬೆದರಿಕೆ ಪತ್ರ ಬರೆದ ರಾಜಶೇಖರ್ ಇತಿಹಾಸ ಅಂಥಿದ್ದದ್ದಲ್ಲ

ಆಗ ಪೋಕ್ಸೋ ಆ್ಯಕ್ಟ್ ಅಡಿ ನಲವತ್ತು ದಿನ ಜೈಲಿಗೆ ರಾಜಶೇಖರ್ ಹೋಗಿದ್ದ. ನಂತರ ಬಸವಲಿಂಗಪ್ಪನಿಗೆ ಇದ್ದ. ಎರಡೂವರೆ  ಎಕರೆ ಜಮೀನಿಗಾಗಿ ರಮೇಶ್ ಹಾಗೂ ರಾಜಶೇಖರ್ ನಡುವೆ ಜಗಳ ಶುರುವಾಗಿತ್ತು ಇದೇ ವಿಚಾರವಾಗಿ ಎರಡು ಎಫ್ ಐ ಆರ್ ರಾಜಶೇಖರ್ ಮೇಲೆ ದಾಖಲಾಗಿತ್ತು. ಹೇಗಾದ್ರು ಮಾಡಿ ರಮೇಶ್ ಹಾಗು ಅವರ ಕಡೆಯವರಿಗೆ ಬುದ್ಧ ಕಲಿಸಲು ಬಾಂಬ್ ಬೆದರಿಕೆ ಕರೆ ಪತ್ರ ಬರೆಯಲು ತೀರ್ಮಾನ ಮಾಡಿದ್ದಾನೆ.

ಅದರಂತೆ ಕ್ವಾರಿ ಕೆಲಸ ನಡೆಯುತ್ತಿರುವ ಕರಡಿಗುಡ್ಡದಲ್ಲಿ ಡಿಟೋನೇಟರ್ ಖರೀದಿ ಮಾಡಿ ಒಂಭತ್ತು ದಿನಗಳ  ಹಿಂದೆ ಪೋಸ್ಟ್ ಮಾಡಿದ್ದಾನೆ. ಕುಟುಂಬದ ಆಸ್ತಿ ವಿವಾದಕ್ಕೂ ಈ ಡ್ರಗ್ಸ್ ಮತ್ತು ಡಿಜೆ ಹಳ್ಳಿ ಪ್ರಕರಣಕ್ಕೂ ಏನು ಸಂಬಂಧ ಎಂಬುದು ಸದ್ಯದ ಮಟ್ಟಿಗೆ ಅರ್ಥವಾಗದ ಪ್ರಶ್ನೆಯಾಗಿಯೇ ಉಳಿದಿದೆ.