Asianet Suvarna News Asianet Suvarna News

ಕಲಬುರಗಿ: ಜೀವ ಬೆದರಿಕೆ ಹಾಕಿ ತಾಳಿಸರ ಸುಲಿಗೆ

ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಲೇಡ್ ತೋರಿಸಿ ಜೀವ ಬೆದರಿಕೆ ಹಾಕಿ ಅವರ ಕೊರಳಲ್ಲಿದ್ದ 90 ಸಾವಿರ ರು. ಮೌಲ್ಯದ ತಾಳಿಸರ ಮತ್ತು ಅವರ ಮಗ ಬಳಿಯಿದ್ದ ₹700 ನಗದು ಸುಲಿಗೆ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. 

Threatened Life and Extorted Mangalsutra in Kalaburagi grg
Author
First Published Dec 16, 2023, 10:09 PM IST

ಕಲಬುರಗಿ(ಡಿ.16): ಮಗನೊಂದಿಗೆ ಆಟೋದಲ್ಲಿ ಮನೆಗೆ ಹೋಗುತ್ತಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಲೇಡ್ ತೋರಿಸಿ ಜೀವ ಬೆದರಿಕೆ ಹಾಕಿ ಅವರ ಕೊರಳಲ್ಲಿದ್ದ 90 ಸಾವಿರ ರು. ಮೌಲ್ಯದ ತಾಳಿಸರ ಮತ್ತು ಅವರ ಮಗ ಬಳಿಯಿದ್ದ ₹700 ನಗದು ಸುಲಿಗೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. 

ಸೇಡಂ ರಸ್ತೆಯ ಎನ್‍ಜಿಓ ಕಾಲೋನಿಯ ಪ್ರಿಯಾಂಕಾ ರಾಜಕುಮಾರ ಲೋಕಾಂಡೆ ಮತ್ತು ಅವರ ಮಗ ಅಕ್ಷಯ ಲೋಕಾಂಡೆ (16) ಅವರು ಮನೆಗೆ ಸಾಮಾನು ತರಲೆಂದು ಸುಪರ್ ಮಾರ್ಕೆಟ್‍ಗೆ ಹೋಗಿದ್ದಾರೆ. ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಿ ಸಿಟಿ ಸೆಂಟರ್ ಮಾಲ್ ಹತ್ತಿರ ಆಟೋ ಮುಗಿಸಿಕೊಂಡು ಓಂ ನಗರ ಗೇಟ್ ಹತ್ತಿರ ಬಿಡುವಂತೆ ಹೇಳಿದ್ದಾರೆ. 

ಆರೋಪಿಗಳಿಗೆ ನಕಲಿ ಶ್ಯೂರಿಟಿ: ಓರ್ವ ಮಹಿಳೆ ಸೇರಿ 8 ಮಂದಿ ಸೆರೆ

ಎಂ.ಆರ್.ಎಂ.ಸಿ.ಮೆಡಿಕಲ್ ಕಾಲೇಜು ಹತ್ತಿರ ಅಪರಿಚಿತ ವ್ಯಕ್ತಿಯೊಬ್ಬ ಕೈ ಮಾಡಿ ಆಟೋ ನಿಲ್ಲಿಸಿ ಓಲ್ಡ್ ಆರ್‍ಟಿಒ ಕ್ರಾಸ್ ಹತ್ತಿರ ಇಳಿಯುವುದಾಗಿ ಹೇಳಿ ಜಬರದಸ್ತಿನಿಂದ ಆಟೋದಲ್ಲಿ ಹತ್ತಿ ಕುಳಿತಿದ್ದಾನೆ. ಮಹೇಂದ್ರ ಶೋರೂಂ ಹತ್ತಿರ ಗಲ್ಲಿಯಲ್ಲಿ ಹೋಗುವ ರಸ್ತೆಯಲ್ಲಿ ಆಟೋ ನಿಲ್ಲಿಸುವಂತೆ ಹೇಳಿ ಆಟೋ ನಿಲ್ಲಿಸಿ ಜೀವ ಬೆದರಿಕೆಯೊಡ್ಡಿ ತಾಳಿಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಅವರು ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow Us:
Download App:
  • android
  • ios