ಅಹಮದಾಬಾದ್‌ (ಮೇ 21)  ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಸೋಮವಾರ 14 ವರ್ಷದ ಬಾಲಕ ತನ್ನ ತಾಯಿಯ ಗೆಳೆಯನನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾನೆ.  ತಾಯಿ ಮತ್ತು ತನಗೆ ನೀಡುತ್ತಿದ್ದ ದೈಹಿಕ ಹಿಂಸೆ ತಾಳಲಾರದೆ ಬಾಲಕ ಇಂಥ  ಕೆಲಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡನ ತೊರೆದು ಹತ್ತು ವರ್ಷದಿಂದ ಆರೋಪಿ ಹುಡುಗನ ತಾಯಿ ಸಾವಿಗೀಡಾದ ವ್ಯಕ್ತಿಯೊಂದಿಗೆ ವಾಸ ಮಾಡುತ್ತಿದ್ದಳು.  ಇತ್ತೀಚೆಗೆ ತಾಯಿಯ ಗಂಡ ವಿಪರೀತ ಕಿರುಕುಳ ನೀಡಲು ಆರಂಭಿಸಿದ್ದ.  ತಾಯಿಗೆ ಕಿರುಕುಳ  ನೀಡಲು ಮುಂದಾದಾಗ ಅದನ್ನು ತಪ್ಪಿಸಲು ಹೋದರೆ ಬಾಲಕ ಮತ್ತು ಮಹಿಳೆ ಇಬ್ಬರ ಮೇಲೆಯೂ ಹಲ್ಲೆ ಮಾಡುತ್ತಿದ್ದ.

ಬೆಳಗಾವಿ; ನಡು ರಸ್ತೆಯಲ್ಲೇ ಲೈವ್ ಸುಸೈಡ್

ಪ್ರತಿ ದಿನ ದೈಹಿಕ ಹಿಂಸೆ ನೀಡುತ್ತಿರುವುದನ್ನು ತಾಳಲಾರದೆ ಬಾಲಕ ಅಂತಿಮವಾಗಿ ಆತನನ್ನೇ ಹತ್ಯೆ ಮಾಡಿದ್ದಾನೆ. ಮೇ 17 ರಂದು, ಬಾಲಕ ಕೊಲೆಯಾದ ವ್ಯಕ್ತಿಯನ್ನು  ಅಹಮದಾಬಾದ್‌ನ ಬೆಹ್ರಾಂಪುರಾ ಪ್ರದೇಶದ ಕ್ಯಾಲಿಕೊ ಮಿಲ್ ಕಾಂಪೌಂಡ್‌ನಲ್ಲಿ ದ್ವಿಚಕ್ರ ವಾಹನದಲ್ಲಿ  ಕರೆದುಕೊಂಡು ಹೋಗಿದ್ದಾನೆ.  ನಿರ್ಜನ ಪ್ರದೇಶದಲ್ಲಿ ಚಾಕುವಿನಿಂದ ಇರಿದಿದ್ದಾನೆ. ಆತ ಸಾಯುವವರೆಗೂ ಇರಿಯುತ್ತಲೆ ಇದ್ದ.

ಪೊಲೀಸರು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕನನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.